‘ನಂಗೇನೂ ಆಗಿಲ್ಲ, ಚೆನ್ನಾಗಿದ್ದೀನಿ’ ಎಂದ ಜಗ್ಗೇಶ್ ಪುತ್ರ ಯತಿರಾಜ್

‘ನಂಗೇನೂ ಆಗಿಲ್ಲ, ಚೆನ್ನಾಗಿದ್ದೀನಿ’ ಎಂದ ಜಗ್ಗೇಶ್ ಪುತ್ರ ಯತಿರಾಜ್

ಚಿಕ್ಕಬಳ್ಳಾಪುರ: ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಟ ಜಗ್ಗೇಶ್ ಪುತ್ರ ಯತಿರಾಜ್ ಅವರ ಕಾರ್ ಅಪಘಾತವಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡ ಯತಿರಾಜ್​​ ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಚಿಕಿತ್ಸೆ ಬಳಿಕ ಯತಿರಾಜ್ ಅವರ ಆರೋಗ್ಯ ಚೆನ್ನಾಗಿದ್ದು, ನನಗೆ ಏನೂ ಆಗಿಲ್ಲ ಎಂದು ಥಮ್ಸ್ ಅಪ್ ಮಾಡಿದ್ದಾರೆ. ಚಿಕಿತ್ಸೆ ಬಳಿಕ ಪೊಲೀಸರು ಯತಿರಾಜ್​ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಯತಿರಾಜ್ ಬೆಂಗಳೂರು ಕಡೆ ಹೊರಟಿದ್ದಾರೆ.

ಇನ್ನು ಅಪಘಾತ ನಡೆದಾಗಿನ ದೃಶ್ಯ ನ್ಯೂಸ್​ಫಸ್ಟ್​ಗ ಲಭ್ಯವಾಗಿದ್ದು ಯತಿರಾಜ್ ನಿಲ್ಲಲಾಗದೇ ಕುಸಿದುಬಿದ್ದಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಅಪಘಾತ ನಡೆದಾಗ ಸ್ಥಳೀಯರು ಯತಿರಾಜ್​ರನ್ನ ಒಂದೆಡೆ ಕೂರಿಸಿದ್ದಾರೆ. ಈ ವೇಳೆ ಅವರದೇ ಮೊಬೈಲ್​ನ್ನು ಯತಿರಾಜ್ ಅವರ ಮುಂದೆ ಹಿಡಿದು ಸಂಬಂಧಿಕರಿಗೆ ಫೋನ್ ಮಾಡಿ ಎಂದಿದ್ದಾರೆ. ಫೋನ್​ನಲ್ಲಿ ಮಾತನಾಡಲಾಗದ ಸ್ಥಿತಿಯಲ್ಲಿದ್ದ ಯತಿರಾಜ್ ಅಲ್ಲಿಂದ ಎದ್ದು ಸ್ವಲ್ಪ ಮುಂದೆ ನಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಆಕ್ಸಿಡೆಂಟ್ ನಡೆದ ಸ್ಥಳದಲ್ಲಿ ಏನಾಯ್ತು..? ಜಗ್ಗೇಶ್ ಪುತ್ರ ಯತಿರಾಜ್ ಪರಿಸ್ಥಿತಿ ಹೇಗಿದೆ..?

The post ‘ನಂಗೇನೂ ಆಗಿಲ್ಲ, ಚೆನ್ನಾಗಿದ್ದೀನಿ’ ಎಂದ ಜಗ್ಗೇಶ್ ಪುತ್ರ ಯತಿರಾಜ್ appeared first on News First Kannada.

Source: newsfirstlive.com

Source link