‘ನಮ್ಮದು ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್’ ಎಂದ ನ್ಯೂಜಿಲೆಂಡ್! ಇದು ಎಷ್ಟು ಸತ್ಯ..?

‘ನಮ್ಮದು ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್’ ಎಂದ ನ್ಯೂಜಿಲೆಂಡ್! ಇದು ಎಷ್ಟು ಸತ್ಯ..?

‘ನಮ್ಮದು ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್​ ಅಟ್ಯಾಕ್​ ಹೊಂದಿರುವ ತಂಡ’. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಗೆದ್ದ ಬಳಿಕ ನ್ಯೂಜಿಲೆಂಡ್​​ ಬೌಲಿಂಗ್​ ಕೋಚ್​​ ಶೇನ್​ ಜುರ್ಗೆನ್​ಸನ್​ ಹೇಳಿರುವ ಮಾತಿದು. ಹಾಗಾದ್ರೆ, ಸೌತ್​ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್​​, ಭಾರತಕ್ಕಿಂತ ನ್ಯೂಜಿಲೆಂಡ್​ನ ಪೇಸ್​​ ಅಟ್ಯಾಕ್​ ಅಷ್ಟು ಬಲಿಷ್ಠಾನಾ..? ಯಾವ ಆಧಾರದಲ್ಲಿ ಕಿವೀಸ್​ ವೇಗಿಗಳು ಬೆಸ್ಟ್​​​..?

ಚೊಚ್ಚಲ ಆವೃತ್ತಿಯ ಗೆಲುವಿನ ಆಧಾರದಲ್ಲಿ ನ್ಯೂಜಿಲೆಂಡ್​ ಈಗ ವಿಶ್ವ ಟೆಸ್ಟ್​​ ಕ್ರಿಕೆಟ್​​ನ ಅಧಿಪತಿ. ಟೀಮ್​ಇಂಡಿಯಾವನ್ನ ಸೌತ್​ಹ್ಯಾಂಪ್ಟನ್​ ಅಂಗಳದಲ್ಲಿ ಮಣಿಸಿದ ನ್ಯೂಜಿಲೆಂಡ್​​ ಬಹು ವರ್ಷದ ಐಸಿಸಿ ಟ್ರೋಫಿಯ ಕನಸನ್ನ ನನಸು ಮಾಡಿಕೊಂಡಿದೆ. ವಿಶ್ವ ಟೆಸ್ಟ್​ನ ಚಾಂಪಿಯನ್​ ಪಟ್ಟಕ್ಕೇರೊದ್ರೊಂದಿಗೆ ವಿಶ್ವ ಕ್ರಿಕೆಟ್​​ ಲೋಕದಲ್ಲಿ ಹೊಸ ಸೆನ್ಸೇಷನ್​ ಹುಟ್ಟು ಹಾಕಿದೆ.

blank

ನ್ಯೂಜಿಲೆಂಡ್​​ ತಂಡ ಚಾಂಪಿಯನ್​ ಪಟ್ಟಕ್ಕೇರೋದ್ರೊಂದಿಗೆ ತಂಡದ ಸ್ಟ್ರೆಂಥ್​​ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಕೇನ್​ ವಿಲಿಯಮ್​ಸನ್​ ನಾಯಕತ್ವ, ಯುವ ಹಾಗೂ ಅನುಭವಿಗಳ ಸಮತೋಲನ ಹೀಗೆ ಹಲವು ಆಯಾಮದಲ್ಲಿ ಸ್ರೆಂಥ್​​ ಹಾಗೂ ವೀಕ್​ನೆಸ್​​ ಚರ್ಚೆ ನಡೆದಿವೆ. ಇದೀಗ ಕಿವೀಸ್​​ ವಿಶ್ವದ ಬೆಸ್ಟ್​​ ಬೌಲಿಂಗ್​ ಪಡೆಯನ್ನ ಹೊಂದಿದ್ಯಾ..? ಅನ್ನೋ ಪ್ರಶ್ನೆ ಪ್ರಸ್ತುತ ಡಿಬೇಟ್​​ ಪಾಯಿಂಟ್​​ ಆಗಿದೆ. ಸ್ವತಃ ನ್ಯೂಜಿಲೆಂಡ್​​​ ತಂಡದ ಬೌಲಿಂಗ್​ ಕೋಚ್​​ ನಮ್ಮ ತಂಡದ ಬೌಲಿಂಗ್​ ಅಟ್ಯಾಕ್​ ವಿಶ್ವದಲ್ಲೇ ಬೆಸ್ಟ್​ ಎಂದು ಕ್ಲೈಮ್​ ಮಾಡಿಕೊಂಡಿದ್ದಾರೆ.

‘ನಮ್ಮದು ಬೆಸ್ಟ್​​ ಬೌಲಿಂಗ್​ ವಿಭಾಗ’

‘ನನಗೆ ಹಾಗನ್ನಿಸುತ್ತದೆ. ನಾನು ಈ ಬಗ್ಗೆ ಹಲವು ದಿನಗಳಿಂದ ಯೋಚಿಸಿದ್ದೇನೆ. ನನ್ನ ಪ್ರಕಾರ ಈಗ ನಾವು ಬಲವಾಗಿ ಬೆಸ್ಟ್​ ಬೌಲಿಂಗ್​ ಪಡೆಯನ್ನ ಹೊಂದಿದ್ದೇವೆ ಎಂದು ಹೇಳಬಹುದು. ಬೌಲಿಂಗ್​ ಪಡೆಯಲ್ಲಿರುವ ವಿಶ್ವಾಸ, ಅವರು ಮಾಡುವ ಯೋಜನೆಗಳು, ಫಿಟ್​ನೆಸ್​​​ ಹಾಗೂ ಒಬ್ಬರ ಬಗ್ಗೆ ಒಬ್ಬರಲ್ಲಿರುವ ನಂಬಿಕೆ ಅಮೋಘವಾಗಿದೆ. ಹೀಗಾಗಿ ನಮ್ಮ ತಂಡ ಈಗ ವಿಶ್ವದ ಬೆಸ್ಟ್​ ವೇಗಿಗಳ ಪಡೆ’​-ಶೇನ್​ ಜುರ್ಗೆನ್​ಸನ್, ನ್ಯೂಜಿಲೆಂಡ್​ ಬೌಲಿಂಗ್​ ಕೋಚ್​

ನ್ಯೂಜಿಲೆಂಡ್​ ಪೇಸ್​​ ಅಟ್ಯಾಕ್​ ಯಾಕೆ ವಿಶ್ವದಲ್ಲೇ ಬೆಸ್ಟ್​..?

ವಿಶ್ವ ಟೆಸ್ಟ್​ ಕ್ರಿಕೆಟ್​ಗೆ ಈಗ ನ್ಯೂಜಿಲೆಂಡ್​ ಅಧಿಪತಿಯಾಗಿರಬಹುದು. ಆದ್ರೆ, ಇಂಗ್ಲೆಂಡ್​​​, ಆಸ್ಟ್ರೇಲಿಯಾ, ಸೌತ್​ಆಫ್ರಿಕಾ ಅಷ್ಟೇ ಏಕೆ.. ಭಾರತ ಕೂಡ ಟೆಸ್ಟ್​ ಕ್ರಿಕೆಟ್​ನ ನಂಬರ್​ ಒನ್​ ತಂಡಗಳಾಗಿ ಮೆರೆದಿವೆ. ಈ ಎಲ್ಲಾ ತಂಡಗಳಲ್ಲೂ ಸ್ವಿಂಗ್​, ಸೀಮ್​, ವೆರಿಯೇಶನ್​, ಲೈನ್​ ಆ್ಯಂಡ್​ ಲೆಂಥ್​ ಸೇರಿದಂತೆ ಹಲವು ಬೌಲಿಂಗ್​ ಪಟ್ಟುಗಳನ್ನ ಕಲಿತ ವೇಗಿಗಳಿದ್ದಾರೆ. ಹಾಗಿದ್ದೂ ನ್ಯೂಜಿಲೆಂಡ್​ ಪೇಸ್​ ಅಟ್ಯಾಕ್​ ಯಾಕೆ ಬೆಸ್ಟ್​​ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಂಕಿ-ಅಂಶಗಳೇ ಉತ್ತರ ನೀಡ್ತಿವೆ.

WTC ಟೂರ್ನಿಯಲ್ಲಿ ನ್ಯೂಜಿಲೆಂಡ್​ ವೇಗಿಗಳದ್ದೇ ಪಾರಮ್ಯ..!

ಸುದೀರ್ಘ 2 ವರ್ಷಗಳ ಕಾಲ ನಡೆದು ಅಂತ್ಯ ಕಂಡಿರುವ ಚೊಚ್ಚಲ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್​​ ವೇಗಿಗಳದ್ದೇ ಅಬ್ಬರ. ಬ್ಲ್ಯಾಕ್​ಕ್ಯಾಪ್ಸ್​​​ ವೇಗಿಗಳ ಕರಾರುವಕ್​ ದಾಳಿಯ ಮುಂದೆ ಬ್ಯಾಟ್ಸ್​​ಮನ್​ಗಳು ಮಂಡಿಯೂರಿದ್ದೇ ಹೆಚ್ಚು…!

WTC ಟೂರ್ನಿಯಲ್ಲಿ ಕಿವಿಸ್​ ಪೇಸರ್ಸ್​​​
ಪಂದ್ಯ    ವಿಕೆಟ್​​
11          188
ನ್ಯೂಜಿಲೆಂಡ್​ ಬೌಲರ್ಸ್​​ಗಳನ್ನ ಹೊರತು ಪಡಿಸಿದ್ರೆ, ಟೂರ್ನಿಯಲ್ಲಿ ಮ್ಯಾಜಿಕ್​ ಮಾಡಿದ್ದು, ಆಸ್ಟ್ರೇಲಿಯಾದ ವೇಗಿಗಳು. ಟೂರ್ನಿಯ ಟಾಪ್​ 10 ವೇಗಿಗಳ ಪಟ್ಟಿಯಲ್ಲಿ 3 ಸ್ಥಾನ ಆಸಿಸ್​​ನ ವೇಗಿಗಳೇ ಆಕ್ರಮಿಸಿಕೊಂಡಿದ್ದಾರೆ. ತಂಡ ಫೈನಲ್​ಗೆ ಬರದಿದ್ರೂ ಮಿಚೆಲ್​ ಸ್ಟಾರ್ಕ್​, ಜೋಶ್​ ಹ್ಯಾಜೆಲ್​ವುಡ್​, ಪ್ಯಾಟ್​ ಕಮಿನ್ಸ್​ ನಡೆಸಿದ ಕರಾರುವಕ್​ ದಾಳಿ ಟೂರ್ನಿಯ ಹೈಲೆಟ್​ ಅಂಶಗಳಲ್ಲಿ ಒಂದು.

WTC ಟೂರ್ನಿಯಲ್ಲಿ ​​ ಆಸಿಸ್​ ವೇಗಿಗಳು
ಪಂದ್ಯ    ವಿಕೆಟ್​​
14          187

ನ್ಯೂಜಿಲೆಂಡ್​​, ಆಸ್ಟ್ರೇಲಿಯಾ ವೇಗಿಗಳ ನಂತರದ ಸ್ಥಾನ ಸೌತ್​ ಆಫ್ರಿಕಾ ವೇಗಿಗಳಿಗೆ…! ಟೂರ್ನಿಯಲ್ಲಿ ಸೌತ್​ಆಫ್ರಿಕಾ ತಂಡ ಗೆದ್ದ ಬಹುತೇಕ ಪಂದ್ಯಗಳ ಪಾಲುದಾರರು ಇವರೇ…! ಎನ್ರಿಚ್​​ ನೋಕಿಯಾ, ಕಗಿಸೋ ರಬಾಡ, ಲುಂಗಿ ಎನ್​​ಗಿಡಿ ಈ ತ್ರಿವಳಿ ಜೋಡಿಯ ಬೌಲಿಂಗ್​ ಹಾಗಿತ್ತು.

WTC ಟೂರ್ನಿಯಲ್ಲಿ ​​ ಸೌತ್​​ಆಫ್ರಿಕಾ ವೇಗಿಗಳು
ಪಂದ್ಯ      ವಿಕೆಟ್​​
13            151
ಟೂರ್ನಿಯಲ್ಲಿ 5 ಸರಣಿಗಳನ್ನಾಡಿದ ಸೌತ್​ ಆಫ್ರಿಕಾ ಆಡಿದ್ದು ಒಟ್ಟು 13 ಪಂದ್ಯಗಳನ್ನ… ಈ ಪಂದ್ಯಗಳಲ್ಲಿ 27.83 ಸರಾಸರಿಯಲ್ಲಿ 151 ವಿಕೆಟ್​ ಗಳನ್ನ ತಂಡದ ವೇಗಿಗಳು ಕಬಳಿಸಿದ್ದಾರೆ.

ವಿಕೆಟ್​ ಕಬಳಿಕೆಯಲ್ಲಿ ಟೀಮ್​ ಇಂಡಿಯಾ ವೇಗಗಳು ಹಿಂದೆ ಬಿದ್ದಿಲ್ಲ. ಆದ್ರೆ, ತವರಿನಲ್ಲಿ ನಡೆದ ಬಹುತೇಕ ಪಂದ್ಯಗಳಿಗೆ ಸ್ಪಿನ್​ ಟ್ರ್ಯಾಕ್​ ಆತಿಥ್ಯ ವಹಿಸಿದ್ದು, ವೇಗಿಗಳಿಗೆ ಹಿನ್ನಡೆಯಾಯ್ತು. ಹಾಗಿದ್ದು ಸುದೀರ್ಘ 2 ವರ್ಷಗಳ ಕಾಲ ಆಡಿದ 6 ಸರಣಿಯ 17 ಪಂದ್ಯಗಳಲ್ಲಿ ಭಾರತೀಯ ಪೇಸರ್ಸ್​​ ಪರಿಣಾಮಕಾರಿ ಪ್ರದರ್ಶನವನ್ನೇ ನೀಡಿದ್ದಾರೆ.

WTC ಟೂರ್ನಿಯಲ್ಲಿ ​​ ಭಾರತದ ವೇಗಿಗಳು
ಪಂದ್ಯ     ವಿಕೆಟ್​​
17           172

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನಾಡಿದ 2ನೇ ತಂಡ ಟೀಮ್​ ಇಂಡಿಯಾ. ಭಾರತ ಆಡಿದ ಒಟ್ಟು 17 ಪಂದ್ಯಗಳಲ್ಲಿ ವೇಗಿಗಳು ಕಬಳಿಸಿದ್ದು 172 ವಿಕೆಟ್​​ಗಳನ್ನ..!

ಟೂರ್ನಿಯಲ್ಲಿ ಭಾರತ 17 ಪಂದ್ಯಗಳನ್ನಾಡಿದ್ರೆ, ಇಂಗ್ಲೆಂಡ್​ ಆಡಿದ್ದು ಬರೋಬ್ಬರಿ 21 ಪಂದ್ಯಗಳನ್ನ.. ಈ ಅವಧಿಯಲ್ಲಿ ತಂಡದ ವೇಗಿಗಳು 255 ವಿಕೆಟ್​ಗಳನ್ನ ಕಬಳಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಸ್ಟುವರ್ಟ್​​ ಬ್ರಾಡ್​​, ಜೋಫ್ರಾ ಅರ್ಚರ್​​, ಜೇಮ್ಸ್​​ ಆ್ಯಂಡರ್ಸನ್​ರನ್ನ ಒಳಗೊಂಡ ಆಂಗ್ಲರ ವೇಗದ ವಿಭಾಗಕ್ಕೆ ಇನ್ನೂ ಹೆಚ್ಚು ವಿಕೆಟ್​​​ ಕಬಳಿಸುವ ಸಾಮರ್ಥ್ಯವಿತ್ತು ಅನ್ನೋದನ್ನ ಮರೆಯುವಂತಿಲ್ಲ. ಆದ್ರೆ, ತಂಡದ ರೊಟೇಷನ್​ ಪಾಲಿಸಿ ಈ ಸಾಧನೆಗೆ ಅಡ್ಡಿಯಾಯ್ತು.

ಈ ಎಲ್ಲಾ ಅಂಕಿ-ಅಂಶಗಳ ಆಧಾರದಲ್ಲಿ ಕಿವೀಸ್​​ ಪೇಸ್​​ ಅಟ್ಯಾಕ್​ ಸದ್ಯದ ವಿಶ್ವದ ಬೆಸ್ಟ್​​ ಎಂದೇನೋ ಹೇಳಬಹುದು. ಆದ್ರೆ, ವಿಶ್ವದ ಬೆಸ್ಟ್​ ಬೌಲಿಂಗ್​ ವಿಭಾಗ ನ್ಯೂಜಿಲೆಂಡ್​ ಬಳಗದ್ದಾ..? ಎಂಬ ಪ್ರಶ್ನೆ ಎದುರಾದ್ರೆ ಉತ್ತರ ಖಂಡಿತಾ ಅಲ್ಲಾ ಎನ್ನೋದೇ ಆಗಿರುತ್ತೆ. ಯಾಕಂದ್ರೆ, ಕ್ವಾಲಿಟಿ ಸ್ಪಿನ್ನರ್​ಗಳ ಅಲಭ್ಯತೆ ತಂಡವನ್ನ ಬಹುವಾಗಿ ಕಾಡಿದ ಉದಾಹರಣೆಗಳು ಸಾಕಷ್ಟಿವೆ.

The post ‘ನಮ್ಮದು ವಿಶ್ವದಲ್ಲೇ ಶ್ರೇಷ್ಠ ಬೌಲಿಂಗ್’ ಎಂದ ನ್ಯೂಜಿಲೆಂಡ್! ಇದು ಎಷ್ಟು ಸತ್ಯ..? appeared first on News First Kannada.

Source: newsfirstlive.com

Source link