ದಿಢೀರ್ ಚಿರತೆ ಪ್ರತ್ಯಕ್ಷ.. ಆತಂಕದಲ್ಲಿ ಬೆಳಗಾವಿ ಮಂದಿ

ದಿಢೀರ್ ಚಿರತೆ ಪ್ರತ್ಯಕ್ಷ.. ಆತಂಕದಲ್ಲಿ ಬೆಳಗಾವಿ ಮಂದಿ

ಬೆಳಗಾವಿ: ಇಲ್ಲಿನ ಹನುಮಾನ್ ನಗರದ ಬಳಿ ಇರುವ ಗಾಲ್ಫ್ ಗ್ರೌಂಡ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಬೆಳಗ್ಗೆ ವಾಕಿಂಗ್ ಮಾಡಲು ಬಂದಿದ್ದ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಂಡಿದೆ.

ಸಾರ್ವಜನಿಕರು ನೀಡಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗಾಲ್ಫ್ ಗ್ರೌಂಡ್ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನ ಪರಿಶೀಲಿಸಿದ್ದಾರೆ. ನಂತರ ಕಾರ್ಯಾಚರಣೆಗೆ ಇಳಿದ ಅರಣ್ಯಾಧಿಕಾರಿಗಳ ಕಣ್ಣಿಗೆ ಚಿರತೆ ಬಿದ್ದಿಲ್ಲ, ಹೀಗಾಗಿ ಶೋಧಕಾರ್ಯ ಮುಂದುವರಿಸಿದೆ.

ಚಿರತೆಯನ್ನ ನೋಡಿದ ಸ್ಥಳೀಯರು ಗಾಬರಿಯಾಗಿದ್ದಾರೆ. ಕೂಡಲೇ ಚಿರತೆಯನ್ನ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಿ ಅಂತಾ ಒತ್ತಾಯಿಸಿದ್ದಾರೆ.

The post ದಿಢೀರ್ ಚಿರತೆ ಪ್ರತ್ಯಕ್ಷ.. ಆತಂಕದಲ್ಲಿ ಬೆಳಗಾವಿ ಮಂದಿ appeared first on News First Kannada.

Source: newsfirstlive.com

Source link