ಮನೆಯಲ್ಲೇ ಕೂತು ಬ್ಯಾಂಕ್ ಅಕೌಂಟ್​ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಕದ್ದವರು ಅಂದರ್

ಮನೆಯಲ್ಲೇ ಕೂತು ಬ್ಯಾಂಕ್ ಅಕೌಂಟ್​ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಕದ್ದವರು ಅಂದರ್

ಚಿಕ್ಕೋಡಿ: ಡಿಜಿಟಲ್ ಮಂತ್ರ ಜಪಿಸುತ್ತಿರುವ ಭಾರತದಲ್ಲಿ ಡಿಜಿಟಲ್ ವಂಚನೆಯೂ ಜೋರಾಗಿಯೇ ನಡೆಯುತ್ತಿದೆ. ಹೌದು ಮನೆಯಲ್ಲಿಯೇ ಕುಳಿತು ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಬರೋಬ್ಬರಿ 94.71 ಲಕ್ಷ ಎಗರಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿಯ ಸದಲಗಾದ ನಿವಾಸಿಗಳಾದ ಅರಿಹಂತ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶೋಕ ಬಂಕಾಪುರೆ ಎಂಬುವವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ್ದ ವಂಚಕರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ. ಸದಲಗಾ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಚಿಕ್ಕೋಡಿಯ ಡಿವೈಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು 3 ಜನರನ್ನು ಬಂಧಿಸಿ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ.

ನೈಜೀರಿಯಾ ಮೂಲದ ಬುಜುಕಾ ಪೀಟರ್ (40), ಇಂದ್ರೇಶ್ ಹರಿಶಂಕರ್ ಪಾಂಡೆ ಮತ್ತು ಘನಶ್ಯಾಮ್ ಭಾಂಡೆ ಯನ್ನು ಪೋಲಿಸರು ಆರೋಪಿಗಳೆಂದು ಗುರುತಿಸಿದ್ದಾರೆ. ಆರೋಪಿಗಳಾದ ಇಂದ್ರೇಶ ಪಾಂಡೆ ಹಾಗೂ ಅಭಿಜಿತ ಮಿಶ್ರಾ ಹ ಡಮ್ಮಿ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು, ಟೋನಿ ಆಫ್ರಿಕಾದಲ್ಲಿ ಕುಳಿತು ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುತ್ತಿದ್ದ, ಟೋನಿ ಅಕೌಂಟ್ ಹ್ಯಾಕ್ ಮಾಡಿ ಎಗರಿಸಿದ್ದ ದುಡ್ಡುನ್ನು ಡಮ್ಮಿ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡುತ್ತಿದ್ದ ಎಂದು ಬೆಳಗಾವಿ ಎಸ್​ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

The post ಮನೆಯಲ್ಲೇ ಕೂತು ಬ್ಯಾಂಕ್ ಅಕೌಂಟ್​ ಹ್ಯಾಕ್ ಮಾಡಿ ₹94.71 ಲಕ್ಷ ಹಣ ಕದ್ದವರು ಅಂದರ್ appeared first on News First Kannada.

Source: newsfirstlive.com

Source link