ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು. ಇಂದು ಯಶ್ ಅವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಮಾಡಿದ್ದಾರೆ. ಈ ಮೂಲಕ ಇಂದು ಹೊಸ ಮನೆಗೆ ಅವರ ಕುಟುಂಬ ಕಾಲಿಟ್ಟಿದೆ.

ಯಶ್ ಅವರ ನೂತನ ನಿವಾಸ ಪ್ರೆಸ್ಟಿಜ್ ಗಾಲ್ಫ್ ಅಪಾರ್ಟ್ ಮೆಂಟ್ ನಲ್ಲಿದ್ದು, ಕಳೆದ ಎರಡು ವರ್ಷಗಳ ಹಿಂದೆ ಯಶ್ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸ ನಡೆಯುತ್ತಿತ್ತು.

blank

ಇದೀಗ ಇಂದು ಸಿಂಪಲ್ ಆಗಿ ರಾಕಿಭಾಯ್ ಕುಟುಂಬ ಮುಹೂರ್ತ ನಿಗದಿ ಮಾಡಿ ಮನೆಯೊಳಗೆ ಕಾಲಿಟ್ಟಿದೆ.

blank

The post ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್ appeared first on Public TV.

Source: publictv.in

Source link