ಸಂಧಾನಕ್ಕೆ ನಿಂತ ಶುಭಾ.. ವರ್ಕೌಟ್​ ಆಗುತ್ತಾ ‘ಶುಭ’ ಸಂಧಾನ

ಸಂಧಾನಕ್ಕೆ ನಿಂತ ಶುಭಾ.. ವರ್ಕೌಟ್​ ಆಗುತ್ತಾ ‘ಶುಭ’ ಸಂಧಾನ

ಬಿಗ್‌ಬಾಸ್​ ಮನೆ ಈಗ ಗೊಂದಲದ ಗೂಡಾಗಿದೆ. ಮನೆಯಲ್ಲಿ ಮೌನ ರಾಗ ಕೇಳುತ್ತಿದೆ. ಇದರಿಂದ ಬೇಸತ್ತ ಶುಭಾ ಪೂಂಜಾ ಸಂಧಾನಕ್ಕೆ ನಿಂತಿದ್ದಾರೆ. ಅವರ ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್​ ಆಗುತ್ತೋ ಗೊತ್ತಿಲ್ಲ. ರಿಸ್ಕ್‌ ತೆಗೆದುಕೊಂಡು ಶುಭಾ ಮಾತುಕತೆ ಆರಂಭಿಸಿದ್ದಾರೆ. ಆದ್ರೆ, ಆ ಮಾತುಕತೆಯಲ್ಲಿ ಹೊರಬಂದ ವಿಷಯಗಳೇ ಇಂಪಾರ್ಟ್‌ಟೆಂಟ್.

blank

ದಿವ್ಯಾ ಸುರೇಶ್​, ಲ್ಯಾಗ್​ ಮಂಜು ಹಾಗೂ ಪ್ರಶಾಂತ್​ ಸಂಬರಗಿ, ಚಂದ್ರಚೂಡ್​ ಅವರ ವೈಮನಸ್ಸು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಇದು ಒಂದು ರೀತಿಯಲ್ಲಿ ಮನೆಯಲ್ಲಿ ಹೊಗೆ ಆಡಲು ಕಾರಣವಾಗುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಇದರಲ್ಲಿ ಪ್ರಮುಖವಾಗಿರೋದು ಸೆಕ್ಯೂರಿಟಿ ಗಾರ್ಡ್‌. ಇನ್ನೊಂದು ಡಿಗ್ರಿ ಕಾಲೇಜು. ಸೆಕ್ಯೂರಿಟಿ ಗಾರ್ಡ್‌ ಅಂದಿದ್ದು ಪ್ರಶಾಂತ್‌ರನ್ನ ಕೆರಳಿಸಿದೆ. ಇದೇ ವೇಳೆ, ಪ್ರಶಾಂತ್ ದಿವ್ಯಾ ಅಭಿನಯದ ಡಿಗ್ರಿ ಕಾಲೇಜು ಚಿತ್ರದ ಪ್ರಸ್ತಾಪ ಮಾಡ್ತಿರೋದು. ಆಗಾಗ ಟಾಂಗ್ ಕೊಡ್ತಿರೋದು ದಿವ್ಯಾ ಸುರೇಶ್‌ನ ಕಂಗೆಡಿಸಿದೆ. ಈ ಎಲ್ಲಾ ವಿಚಾರವಾಗಿಯೇ ಶುಭಾ ಸಂಧಾನ ಶುರು ಮಾಡಿರೋದು. ಸಂಧಾನ ಮಾತುಕತೆಯ ಮೊದಲ ಭಾಗದ ನಡೆದಿದ್ದು ಪ್ರಶಾಂತ್ ಅಂಡ್‌ ಚಂದ್ರಚೂಡ್‌ ಜೊತೆ.

ಶುಭಾ: ನೀವು ಮಾತಾಡ್ತಿರೊದು ಸರಿಯಲ್ಲ.
ಪ್ರಶಾಂತ್​: ಯಾವ ವಿಷಯ?
ಶುಭಾ: ದಿವ್ಯಾ ಸುರೇಶ್​ ವಿಷಯದಲ್ಲಿ ತುಂಬಾ ವೈಯಕ್ತಿಕವಾಗಿ ಮಾತಾಡೊದು ಸರಿಯಲ್ಲ.
ಪ್ರಶಾಂತ್​: ನನಗೆ ಕರ್ನಾಟಕದ ಜನತೆ ಮುಂದೆ ಸೆಕ್ಯೂರಿಟಿ ಗಾರ್ಡ್​ ಅಂದಿದ್ದು ಸರೀನಾ?
ಶುಭಾ: ಅದು ಮುಗಿದ್​ ಹೋದ ವಿಚಾರ, ಇನ್ಮುಂದೆ ಆ ರೀತಿ ಮಾತಾಡಿದ್ರೇ ನಾನ್​ ಅವಳಿಗೆ ಹೇಳ್ತಿನಿ ಬಟ್​ ನೀವು ತುಂಬಾ ಪರ್ಸ್​ನಲ್​ ಆಗಿ ಮಾತನಾಡಬೇಡಿ ಪ್ಲೀಸ್. ಟಾಸ್ಕ್​ ಅಥವಾ ಮನೆಯಲ್ಲಿ ನಡೆಯೂ ಯಾವುದೇ ವಿಚಾರಕ್ಕೆ ಮಾತನಾಡಿದ್ರು ಪರವಾಗಿಲ್ಲ. ಆದ್ರೆ ವೈಯಕ್ತಿಕವಾಗಿ ಮಾತನಾಡಬೇಡಿ.
ಚಂದ್ರಚೂಡ್​​: ಅವರು ಮಾತಾಡಿದ್ರೇ ಪರವಾಗಿಲ್ವಾ?
ಶುಭಾ: ಒಂದು ವೇಳೆ ಅವರು ಮಾತಾಡಿದ್ರೆ ನಂಗೆ ಹೇಳಿ ಆ ಬಗ್ಗೆ ಅವರಿಗೆ ನಾನ್​ ಹೇಳ್ತಿನಿ, ನಂಗೆ ಮನೆಯನ್ನ ಈ ರೀತಿ ನೋಡಲು ಸಾಧ್ಯವಿಲ್ಲ.
ಪ್ರಶಾಂತ್​: ಸರೀ. ನಿನ್ನ ಮಾತಿಗೆ ನಾನು ಬೆಲೆ ಕೊಡ್ತಿನಿ. ಬಟ್​ ಅವರು ಮಾತಾಡಿದ್ರೇ ನಾನ್​ ಸುಮ್ನೆ ಇರಲ್ಲ ಚಂದ್ರಚೂಡ್ ಅವರದು ಇದೇ ಉತ್ತರವಾಗಿತ್ತು.

ನಂತರ ಶುಭಾ ದಿವ್ಯಾ ಸುರೇಶ್​ ಅವರ ಬಳಿ ಈ ಕುರಿತು ತಿಳಿ ಹೇಳುತ್ತಾರೆ. ಯಾರೂ ಏನೇ ಮಾತಾಡಿದರೂ ನೀನು ತೆಲೆ ಕೆಡಸಿಕೊಳ್ಬೆಡ. ನಾನು ಅವರಿಗೆ ಹೇಳಿದ್ದೀನಿ, ನೀನು ಸುಮ್ನಿದ್ದು ಬಿಡು. ಟಾಸ್ಕ್​ ವಿಚಾರಕ್ಕೆ ಎಷ್ಟಾದರೂ ಗುದ್ದಾಡಿ, ಆದ್ರೇ ಪರ್ಸನಲ್​ ಆಗ್ಬೇಡಿ. ಅವೈಡ್​ ಮಾಡು ಅಷ್ಟೆ. ನಂಗೆ ಗೊತ್ತು ನಿಂಗೆ ಎಷ್ಟು ಹರ್ಟ್​ ಆಗಿದೆ ಅಂತಾ. ಆ ನೋವು ಏನೂ​ ಎಂದು ನಂಗೆ ಗೊತ್ತು. ನಂಗು ಆ ರೀತಿ ಆಗಿದೆ. ಯಾವ ಹುಡುಗಿ ಬಗ್ಗೆನೂ ಕೆಟ್ಟದಾಗಿ ಮಾತಾಡೊದು ನಂಗೆ ಇಷ್ಟಾ ಆಗಲ್ಲ ಅಂತಾರೆ. ಇದಕ್ಕೆ ದಿವ್ಯಾ ಸುರೇಶ್‌ ನಾನು ಅವೈಡ್ ಮಾಡ್ತಿದ್ದೇನೆ ಅಂತಾ ಹೇಳ್ತಾರೆ.

blank

ಈ ಸಂಧಾನ ಸಮಾಚಾರ ಇಲ್ಲಿಗೆ ಮುಗಿಯಲಿಲ್ಲ, ನಿಧಿವರೆಗೂ ಹೋಯಿತು. ಶುಭಾ ತಾವು ಮಾಡಿದ ಸಂಧಾನದ ಕುರಿತು ನಿಧಿ ಅವರಿಗೆ ವಿವರಿಸುತ್ತಾರೆ. ಆದ್ರೇ, ನಿಧಿ ಇದಕ್ಕೆ ಅಪಸ್ವರ ಎತ್ತುತ್ತಾರೆ. ಪ್ರಶಾಂತ್ ಹಾಗೂ ಚಂದ್ರಚೂಡ್​​ ಅವರ ಜೊತೆ ಮಾತನಾಡಿದ್ದು ಓಕೆ ಬಟ್​ ನೀನು ಇದನ್ನು ದಿವ್ಯಾಗೆ ಹೇಳಬಾರದಿತ್ತು. ಏನೇನೋ ಮಾಡ್ತಿಯಲ್ಲ. ಸುಮ್ನೀರೊಕೆ ಆಗಲ್ವಾ ಅಂತಾರೆ. ಇದಕ್ಕೆ ಕೆರಳಿದ ಶುಭಾ, ನಾನ್​ ಮಾಡಿದ್ದು ಸರಿಯಾಗಿದೆ. ನನಗೂ ಸ್ವಲ್ಪ ಸೆನ್ಸ್​ ಇದೆ. ನಾನು ದಡ್ಡಿಯಲ್ಲ. ನಂಗೆ ಮನೆಯನ್ನ ಈ ರೀತಿ ನೋಡೊಕೆ ಆಗಲ್ಲ ಅಂತಾರೆ.

ಏನೇ ಆದ್ರೂ ಶುಭಾ ಅವರ ಪ್ರಯತ್ನ ಒಂದು ರೀತಿ ಸಮಾಧಾನ ನೀಡಿದ್ದು ಸುಳಲ್ಲ. ಒಂದು ವೇಳೆ ಸಂಧಾನ ಯಶಸ್ವಿ ಆದ್ರೇ, ಮತ್ತೆ ಮನೆಗೆ ಹೊಸ ಕಳೆ ಬರುತ್ತೆ ಹಾಗೇ ಆಟಕ್ಕೂ ಮಜಾ ಬರುತ್ತೆ. ಇಲ್ಲಾ ಅಂದ್ರೇ ಈ ಮೌನ ರಾಗಕ್ಕೆ ಮತ್ಯಾವುದೋ ತಾಳ ಸೇರಿ ಇನ್ನೊಂದು ಸ್ವರವಾಗ್ಬಿಟ್ರೆ ಕಷ್ಟವೇ.

The post ಸಂಧಾನಕ್ಕೆ ನಿಂತ ಶುಭಾ.. ವರ್ಕೌಟ್​ ಆಗುತ್ತಾ ‘ಶುಭ’ ಸಂಧಾನ appeared first on News First Kannada.

Source: newsfirstlive.com

Source link