ರೇಖಾ ಕದಿರೇಶ್ ಹತ್ಯೆಗೆ ನಡೆದಿತ್ತಾ ‘ಮರ್ಡರ್ ಪಾರ್ಟಿ’? ಮಾಲಾ ಪ್ಲಾನ್ ಆಕೆಗೇ ಉರುಳಾಗಿದ್ದೇಗೆ?

ರೇಖಾ ಕದಿರೇಶ್ ಹತ್ಯೆಗೆ ನಡೆದಿತ್ತಾ ‘ಮರ್ಡರ್ ಪಾರ್ಟಿ’? ಮಾಲಾ ಪ್ಲಾನ್ ಆಕೆಗೇ ಉರುಳಾಗಿದ್ದೇಗೆ?

ರೇಖಾ ಕದಿರೇಶ್ ಹತ್ಯೆ ಪ್ರಕರಣ ರಾಜ್ಯದ ಗಮನ ಸೆಳೆದ ಹೈವೋಲ್ಟೇಜ್ ಕೇಸ್. ಕೊರೊನಾ ಅಬ್ಬರ ನಡುವೆ ಜೂನ್ 24 ರಂದು ಹಂತಕರು ಕ್ರೌರ್ಯ ಮೆರೆದಿದ್ರು. ಗಂಡನ ನಗುವ ಫೋಟೋದ ಪಕ್ಕದಲ್ಲೇ ಹೆಂಡತಿ ವಿಲ ವಿಲ ಒದ್ದಾಡುತ್ತಾ ಅಂದು ಉಸಿರು ನಿಲ್ಲಿಸಿದ್ಳು. ಆ ದೃಶ್ಯ ಸಿನಿಮಾ ಕ್ಲೈಮಾಕ್ಸ್ ಗಳನ್ನು ಕೂಡ ಮೀರಿಸುವಂತ್ತಿತ್ತು. ಇಷ್ಟಾದ ಮೇಲೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿರುವ ಮಾಜಿ ಕಾರ್ಪೋರೇಟರ್ ರೇಖಾ ಕದೀರೇಶ್ ಹತ್ಯೆ ಪ್ರಕರಣ ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿದೆ.

blank

ಮಹಿಳೆಯ ಹತ್ಯೆಗೆ ನಡೆದಂತಹ ಪ್ಲಾನ್ ಬಹುಶಾ ಬೆಂಗಳೂರು ಅಪರಾಧ ಲೋಕದಲ್ಲಿ ಹಿಂದೆಂದೂ ನಡೆದಿರಲಿಕ್ಕಿಲ್ಲ. ಯಾಕಂದ್ರೆ ಹಂತಕರು ನಾಲ್ಕೈದು ತಿಂಗಳುಗಳಿಂದ ಸತತ ಪ್ಲಾನ್ ಮಾಡಿ ಅಂದು ಖರಬಾಗಿ ಕಥೆ ಮುಗಿಸಿದ್ರು.

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್
ಮಾಲಾ ಮನೆಯಲ್ಲೇ ರೆಡಿಯಾಗಿತ್ತಾ ಹತ್ಯೆಗೆ ಸ್ಕೆಚ್?

ಹಂತಕರ ಜನ್ಮವನ್ನು ಇಂಚಿಂಚು ಜಾಲಾಡುತ್ತಿರುವ ಪೊಲೀಸರು ಪ್ರಕರಣದ ಆಳಕ್ಕೆ ಇಳಿದು ಒಂದೊಂದೆ ರಹಸ್ಯಗಳನ್ನು ಹೊರಗೆಳೀತಿದ್ದಾರೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್​ ಎನ್ನಲಾದ ಕದಿರೇಶ್ ಸಹೋದರಿಯ ಅಂತರಾಳದಲ್ಲಿ ಅಡಗಿದ್ದ ಒಂದೊಂದೇ ರಹಸ್ಯವನ್ನು ಪೊಲೀಸರು ಬಯಲು ಮಾಡ್ತಿದ್ದಾರೆ. ಮೃತ ರೇಖಾಳಿಗೆ ಸ್ಕೆಚ್ ಹಾಕಿ ಮುಹೂರ್ತ ಇಟ್ಟಿದ್ದು ಚಲವಾದಿಪಾಳ್ಯದ ಮನೆಯಲ್ಲಿ ಅನ್ನೊ ವಿಚಾರ ಈಗ ಹೊರಬಿದ್ದಿದೆ. ಮಾಲಾ ಮನೆಯಲ್ಲೇ ಹತ್ಯೆಗೆ ಸ್ಕೆಚ್ ತಯಾರಾಗಿದೆ ಎನ್ನುವುದು ಸದ್ಯ ಬೆಳಕಿಗೆ ಬಂದಿರೋ ಹೊಸ ವಿಚಾರ. ರೇಖಾ ಪ್ರಕರಣದ ಮಾಸ್ಟರ್ ಮೈಂಡ್ ಮಾಲಾ ಅನ್ನೋ ಆರೋಪ ತೂಕ ಪಡೆದುಕೊಳ್ಳಲು ಈ ಹೊಸ ಸಂಗತಿ ಕಾರಣವಾಗಿದೆ. ಇದೀಗ ಪೊಲೀಸರು ಈ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

blank

ರೇಖಾ ಹತ್ಯೆಯ ವೇದಿಕೆಯಾಗಿತ್ತಾ ಕದಿರೇಶ್ ಸಹೋದರಿಯ ಮನೆ?
ಮಾಲಾ ಮನೆಯಲ್ಲಿ ‘ಮರ್ಡರ್ ಪಾರ್ಟಿ’ ಮಾಡಿದ್ರಾ ಆರೋಪಿಗಳು?

ರೇಖಾ ಹತ್ಯೆಗೆ ಪ್ಲಾನ್ ನಡೆದಿದ್ದು ಒಂದೆರಡು ದಿನಗಳಿಂದಲ್ಲ . 4-6 ತಿಂಗಳಿನಿಂದಲೇ ರೇಖಾ ಹತ್ಯೆಗೆ ಪ್ಲಾನ್ ನಡೆದಿತ್ತು ಎನ್ನವುದು ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದ ವಿಷ್ಯಯ. ರೇಖಾ ಹತ್ಯೆ ಮಾಡಲು ಮಾಲಾ ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿದ್ದಳು. ಮಗನನ್ನು ಮುಂದಿಟ್ಟುಕೊಂಡು ಮಗ್ಗುಲಲ್ಲೇ ಇದ್ದು ಹತ್ಯೆಗೆ ಸ್ಕೆಚ್ ಸಿದ್ದಪಡಿಸಿದ್ದಾಳೆ. ತಾನೂ ಕೂಡ ಫೀಲ್ಡ್​ಗೆ ಇಳಿದು ರೇಖಾ ಶತ್ರುಗಳನ್ನೆಲ್ಲಾ ಒಗ್ಗೂಡಿಸಿದ್ದಾಳೆ. ತನ್ನ ಮಗನನ್ನು ಫೀಲ್ಡ್‌ಗೆ ಬಿಟ್ಟು, ತನಗಿದ್ದ ನೆಟ್‌ವರ್ಕ್ ಬಳಸಿ ರೇಖಾ ಕದಿರೇಶ್‌ರ ಶತ್ರುಗಳ ಬಗ್ಗೆ ಇನ್‌ಫಾರ್ಮೇಷನ್ ಕಲೆ ಹಾಕಿದ್ದಾಳೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ರೇಖಾ ಕದಿರೇಶ್ ಹತ್ಯೆ ಮಾಡಲು ಮಾಲಾ,ರೇಖಾ ಶತ್ರುಗಳೆನ್ನೆಲ್ಲಾ ಒಗ್ಗೂಡಿಸಿ ತನ್ನ ಮನೆಯಲ್ಲಿ ರಹಸ್ಯವಾಗಿ ಮೀಟಿಂಗ್ ಮಾಡಿದ್ಳಂತೆ. ಫೆಬ್ರವರಿಯಿಂದ ಮೂರು ನಾಲ್ಕು ಬಾರಿ ಆರೋಪಿಗಳನ್ನ ಸೇರಿಸಿ ಗುಂಡು-ತುಂಡುಗಳ ಜೊತೆ ಮೀಟಿಂಗ್ ಮಾಡಿದ ಮಾಲಾ, ಇಲ್ಲೇ ರೇಖಾ ಹತ್ಯೆಗೆ ನೀಲ ನಕ್ಷೆ ಸಿದ್ಧಪಡಿಸಿದ್ದಾಳೆ ಎನ್ನುವ ಮಾಹಿತಿಗಳು ಆರೋಪಿಗಳ ವಿಚಾರಣೆಯ ವೇಳೆ ಗೊತ್ತಾಗಿದೆ.

blank

ಲಾಕ್ ಡೌನ್ ವೇಳೆ ಮಕಾಡೆ ಮಲಗಿದ್ದ ಅಪರಾಧ ಲೋಕ, ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿದ್ದಂತೆಯೇ ಮತ್ತೆ ಚಿಗುರಿಕೊಂಡಿರೋ ಬಗ್ಗೆ ಅನುಮಾನ ಹುಟ್ಟು ಹಾಕಿದ ಕೇಸ್ ಅದು. ಹಣ ಕೊಟ್ಟು ಹೆಣ ಬೀಳಿಸುವ ಕರಾಳ ಪ್ಲಾನ್ ಮತ್ತೆ ಸಕ್ರೀಯವಾಯ್ತಾ ಎಂಬ ಪ್ರಶ್ನೆ ಹುಟ್ಟು ಹಾಕಿದ ಕೇಸ್‌ ಕೂಡಾ ಹೌದು. ರೇಖಾ ಕದಿರೇಶ್ ಹತ್ಯೆಯಿಂದಾಗಿ ಹಣ ಚೆಲ್ಲಿ ಮರ್ಡರ್ ಮಾಡಿಸುವ ಕೆಲಸಗಳು ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತಾ ಎಂಬ ಆತಂಕದ ಪ್ರಶ್ನೆ ಮೂಡುವಂತೆ ಮಾಡಿದೆ. ಕದಿರೇಶ್ ಸಹೋದರಿ ಮಾಲಾ, ರೇಖಾ ಹತ್ಯೆ ಮಾಡಲು ಹಂತಕರಿಗೆ ಫೈನಾಸ್ಸ್ ಮಾಡಿರುವ ಕುರಿತು ಇದೀಗ ಗುಮಾನಿ ಎದ್ದಿದ್ದು, ಸ್ಥಳೀಯರಿಂದ ಸಾಲ ಪಡೆದು ಆ ಹಣವನ್ನು ರೇಖಾ ಹತ್ಯೆಗೆ ಬಳಸಲಾಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ.

ತಾಯಿ-ಮಗ ಸೇರಿ ರೆಡಿ ಮಾಡಿದರು ಖತರ್ನಾಕ್ ಪ್ಲಾನ್?
ಹತ್ಯೆಯ ನಂತರ ಎಸ್ಕೇಪ್ ಐಡಿಯಾ ಹೇಳಿಕೊಟ್ಟ ಮಾಲಾ?

ರೇಖಾ ಕದಿರೇಶ್ ಹತ್ಯೆ ಪಕ್ಕಾ ಪ್ಲಾನ್ಡ್ ಮರ್ಡರ್. 4 ತಿಂಗಳ ಹಿಂದೇನೆ ಹತ್ಯೆಗೆ ಸ್ಕೆಚ್ ಪ್ಲಾನ್ ರೆಡಿಯಾಗಿತ್ತು. ರೇಖಾ ಕಥೆ ಹೇಗೆ ಮುಗಿಸಬೇಕು, ಯಾವ ದಾರಿಯಿಂದ ಬಂದು ಅಟ್ಯಾಕ್ ಮಾಡ್ಬೇಕು, ಕೃತ್ಯ ಎಸಗಿದ ನಂತರ ಯಾವ ದಾರಿಯಲ್ಲಿ ಎಸ್ಕೇಪ್ ಆಗ್ಬೇಕು, ಯಾರೆಲ್ಲಾ ಕೇಸ್‌ನಲ್ಲಿ ಫಿಟ್ ಆಗ್ಬೇಕು? ರೇಖಾ ಹತ್ಯೆಯಾದ ನಂತರ ಹೇಗೆ ತನಿಖೆಯ ದಿಕ್ಕು ತಪ್ಪಿಸಬೇಕು..? ಹೀಗೆ ಎಲ್ಲಾ ಪ್ಲಾನ್‌ಗಳನ್ನು ಹಂತಕರನ್ನು ಕೂರಿಸಿಕೊಂಡು ಮಾಲಾ ಹೇಳಿಕೊಟ್ಟಿದ್ಳಂತೆ.

blank

ರೇಖಾ ಕದಿರೇಶ್ ಹತ್ಯೆಯ ನಂತರ ಯಾರು ಯಾರು ಏನು ಮಾಡಬೇಕು. ಮೊದಲು ಯಾರು ಅಟ್ಯಾಕ್ ಮಾಡ್ಬೆಕು ಅನ್ನೊ ಪ್ಲಾನ್ ಮಾಲಾ ಹಾಗೂ ಆಕೆಯ ಮಗ ಅರುಳ್ ಮಾಡಿದ್ದಾಗಿಯೂ. ಅದರಂತೆ ಪೀಟರ್ ಹಾಗೂ ಸೂರ್ಯ ಡ್ಯಾಗರ್ ನಿಂದ ರೇಖಾ ಮೇಲೆ ಮುಗಿಬಿದ್ದಿದ್ದಾಗಿಯೂ ತನಿಖೆ ವೇಳೆ ಬಯಲಾಗಿದೆ. ಕೃತ್ಯ ಎಸಗುವ ವೇಳೆ ಸ್ಥಳಿಯರು ಯಾರಾದ್ರು ಅಡ್ಡ ಬಂದ್ರೆ ಅವರನ್ನ ತಡೆಯುವ ಕೆಲಸ ಅಜಯ್ ಪುರುಷೋತ್ತಮ್ ಮಾಲ ವಹಿಸಿದ್ದಳೆನ್ನನ್ನಲಾಗಿದೆ. ಹೀಗೆ ಮಾಲ ಇಶಾರೆಯಂತೆ ಹತ್ಯೆ ನಡೆದಿದೆ ಅನ್ನೋದು ಇದುವರೆಗಿನ ವಿಚಾರಣೆ ವೇಳೆ ತಿಳಿದು ಬಂದಿರೋ ಸಂಗತಿಗಳು.

ಕೇಸ್‌ನಲ್ಲಿ ಬೇರೆಯವರನ್ನು ಫಿಟ್ ಮಾಡುವ ತಂತ್ರ ಮಾಡಿದ್ರಾ ಮಾಲಾ?
ಒಂದು ವಾರ ಮೊದಲೇ ಎಸ್ಕೇಪ್ ಆಗುವ ದಾರಿ ಫಿಕ್ಸ್ ಆಗಿತ್ತಾ?
ಕದಿರೇಶ್ ಸಹೋದರಿಯ ಪ್ಲಾನನ್ನು ಉಲ್ಟಾ ಮಾಡಿದ್ರಾ ಪೊಲೀಸರು?

ಪೀಟರ್‌, ಸೂರ್ಯ, ಸ್ಟೀಫನ್ ಕೈಯಲ್ಲಿ ಕೃತ್ಯ ಮಾಡಿಸಿ ಪ್ರಕರಣದಲ್ಲಿ ಬೇರೆಯವರನ್ನು ಸಿಲುಕಿಸುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ತಂತ್ರಗಾರಿಕೆಯನ್ನು ಕೂಡ ಮಾಡಿದ್ಳು ಮಾಡುವ ಮಾಹಿತಿಗಳು ತಿಳಿದು ಬರ್ತಾ ಇದೆ. ಮಾಲ ಸ್ಕೆಚ್ ಪ್ರಕಾರ ಕೃತ್ಯ ಎಸಗಿದ ನಂತರ ಹಂಕತರು ಡಿಸೋಜ ಎಂಬಾತನ ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಆಟೋದಲ್ಲಿ ಹೋದ್ರೆ ಅಷ್ಟು ಬೇಗ ಯಾರಿಗೂ ಡೌಟ್ ಬರಲ್ಲ ಎನ್ನುವುದು ಮಾಲಾ ಲೆಕ್ಕಾಚಾರ. ಅಲ್ಲದೇ, ಯಾವ ದಾರಿಯಲ್ಲಿ ಬಂದು ಅಟ್ಯಾಕ್ ಮಾಡ್ಬೇಕು, ಕೃತ್ಯ ಎಸಗಿದ ನಂತರ ಯಾವ ದಾರಿಯಲ್ಲಿ ಎಸ್ಕೇಪ್ ಆಗ್ಬೇಕು ಎನ್ನುವುದ್ನು ಮೊದಲ ನಿರ್ಧರಿಸಿಲಾಗಿತ್ತಂತೆ. ಅದ್ಕೆಂದೆ ಹಂತಕರು ಒಂದು ವಾರದ ಮೊದಲೇ ಸ್ಪಾಟ್ ಗೆ ಬಂದು ಯಾವ ದಾರಿಯಲ್ಲಿ ಎಸ್ಕೇಪ್ ಆದ್ರೆ ಸೂಕ್ತ ಎನ್ನುದನ್ನು ಅರಿತುಕೊಂಡಿದ್ರಂತೆ.

blank

ಒಂದೇ ಸ್ಥಳದಲ್ಲಿದ್ರೆ ಬೇಗ ಟ್ರಾಕ್ ಆಗ್ತೀವಿ, ಬೇಗ ಪೊಲೀಸರ ಕೈಗೆ ಸಿಕ್ಕಿ ಬೀಳೋ ಸಾಧ್ಯತೆ ಇದೆ ಅಂತಾ ಅಂದುಕೊಂಡ ಹಂತಕರ ಗ್ಯಾಂಗ್ ಆಟೋದಲ್ಲಿ ಬೆಂಗಳೂರಿನ ನಾನಾ ಕಡೆ ಸುತ್ತಿದ್ದಾರೆ. ಮೊದಲು ನಿರ್ಧರಿಸಿದಂತೆ ಆರೋಪಿಗಳು ಕಾಟನ್ ಪೇಟೆಯ ಗಲ್ಲಿಯ ಮೂಲಕ ನಂತರ ಆಸ್ಟಿನ್‌ ಟೌನ್, ಬಳಿಕ ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಸಿಂಗೇನ ಅಗ್ರಹಾರ ಸುತ್ತಮುತ್ತ ತಿರುಗಾಡಿದ್ದಾರೆ. ಅಲ್ಲಿ ಯಾವುದೇ ಸ್ಥಳ ಸೂಕ್ತ ಇಲ್ಲ ಎಂದಾಗ ನಂತರ ಚಿಕ್ಕನಾಯಕನ ಹಳ್ಳಿ ತಿರುಗಿ ಮತ್ತೆ ನಗರಕ್ಕೆ ಬಂದಿದ್ದಾರೆ. ಶ್ರಿರಾಮಪುರ, ರಾಜಾಜಿನಗರ, ವಿಜಯನಗರದ ಕಡೆ ಮುಖ ಮಾಡಿದ್ದಾರೆ. ಕಡೆಗೆ ಸುಂಕದ ಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಬಂದಾಗ, ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಹೀಗಾಗಿ ಮಾಲಾಳ ಪ್ಲಾನ್ ಕಂಪ್ಲೀಟ್‌ ವರ್ಕೌಟ್ ಆಗದಂತಾಯಿತು.

ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದನಾ ಮಾಲಾ ಮಗ?
ಮೊದಲೇ ಪ್ಲಾನ್ ನಂತೆ ಆರೋಪಿಗಳಿಗೆ ಮಾಲ ಮಗ ಅರುಳ್ ಆಶ್ರಯ ಕಲ್ಪಿಸಬೇಕಿತ್ತು. ಆರೋಪಿಗಳಿರುವ ಸ್ಥಳದಿಂದ ಕರೆ ಮಾಡಿ ಅರುಳ್ ನನ್ನ ಕರೆಸಿಕೊಳ್ಳಬೇಕು. ನಂತರ ಅರುಳ್ ಎಲ್ಲರಿಗೂ ಬೇರೆಡೆ ಉಳಿದುಕೊಳ್ಳೊ ವ್ಯವಸ್ಥೆ ಮಾಡ್ತಾನೆ. ಕೊಲೆ ನಡೆದ ಮೇಲೆ ಏರಿಯಾದಲ್ಲಿ ನಡೆಯೋ ಬೆಳವಣಿಗೆಯನ್ನು ಅರುಳ್ ಮಾಹಿತಿ ನೀಡ್ಬೇಕು ಎನ್ನುವುದು ಹತ್ಯೆಯ ಮೊದಲೇ ನಡೆದ ಪ್ಲಾನ್. ಪೊಲೀಸರನ್ನು ನಾನು ಹ್ಯಾಂಡಲ್ ಮಾಡ್ತೀನಿ, ನಿಮಗೆ ಕಾಲಿಗೆ ಗುಂಡು ಬೀಳದಂತೆ ನಾನ್ ನೋಡ್ಕೊತ್ತೀನಿ ಎಂದಿದ್ಳಂತೆ. ಆದ್ರೆ ಮಾಲಾ ಮಾಡಿದ ಎಲ್ಲಾ ಪ್ಲಾನ್‌ಗಳು ಹತ್ಯೆಯ ನಂತರ ಉಲ್ಟಾ ಆಗಿತ್ತು. ಪೊಲೀಸರನ್ನು ಹ್ಯಾಂಡಲ್ ಮಾಡ್ತೀನಿ ಎಂದವಳ ಕೈಗೆ ಮೊದಲು ಕೋಳ ಬಿದ್ದಿತ್ತು. ಇದ್ರಿಂದ ಮಾಲಾ ಸಮೇತ ಒಬ್ಬರ ಹಿಂದೆ ಒಬ್ಬರಂತೆ ಪೊಲೀಸರು ಅತಿಥಿಯಾಗಿದ್ದಾರೆ.

ಮಾಲಾ ಪ್ಲಾನ್ ಆಕೆಯ ಕೊರಳಿಗೆ ಉರುಳಾಗಿದ್ದೇಗೆ?
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಅನ್ಕೊಂಡಿದ್ದ ಮಾಲಾ 5 ರೂಪಾಯಿ ಆ್ಯಕ್ಟಿಂಗ್ ಬದಲು 5000 ಸಾವಿರ ರುಪಾಯಿಯ ಆ್ಯಕ್ಟಿಂಗ್ ಮಾಡಿದ್ಳು. ಹತ್ಯೆಯಾಗುತ್ತಿದ್ದಂತೆಯೇ ಮೊದ್ಲಿಗೆ ಸ್ಪಾಟ್ ಗೆ ಬಂದು ಸುಡು ಬಿಸಿಲಲ್ಲೇ ಕಣ್ಣೀರ ಧಾರೆ ಹರಿಸಿದ್ಳು. ಅದಾಗ್ಲೇ ರೌಡಿ ಶೀಟರ್ ಆಗಿದ್ದ ಮಾಲಾ ಕುಟುಂಬದ ಕಲಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇತ್ತು. ಇದೇ ವಿಚಾರದಲ್ಲಿ ತನಿಖೆ ಮಾಲಾ ವಿಚಾರಣೆ ಮಾಡಿದಾಗ ಪೊಲೀಸರಿಗೆ ಒಂದೊಂದೆ ಕತೆಗಳು ಬಯಲಾಗ್ತಾ ಹೋದವು. ಅಲ್ಲದೆ ಮಾಲಾ ಮೊಬೈಲ್ ಟ್ರಾಕ್ ಮಾಡಿದಾಗ ಈಕೆ ಆರೊಪಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು ಕನ್‌ಫರ್ಮ್ ಆಗಿದೆ.

ಇದ್ರಿಂದ ಇಡೀ ಪ್ರಕರಣದ ಸೂತ್ರಧಾರಿ, ಪಾತ್ರಧಾರಿ ಈ ನೌಟಂಕಿ ನಾರಿ ಎನ್ನುವುದು ಪೊಲೀಸರಿಗೆ ಕನ್ಫರ್ಮ್ ಆಗಿದೆ. ಸದ್ಯ ಪ್ರಕರಣದಲ್ಲಿ ಎಂಟು ಮಂದಿಯನ್ನ ಕಸ್ಟಡಿಗೆ ಪಡೆದಿರೋ ಪೊಲೀಸರು ಎಲ್ಲರನ್ನ ಸರಿಯಾಗಿ ಬೆಂಡ್ ಎತ್ತುತ್ತಿದ್ದಾರೆ. ಪ್ರತಿದಿನ ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ರಹಸ್ಯಗಳನ್ನ ಹೊರ ಹಾಕ್ತಿದ್ದಾರೆ. ಆರೋಪಿಗಳಿಗೆ ಮಾಲಾ ಹಣ ಸಹಾಯವನ್ನ ಮಾಡಿದ್ದು, ಮಾಲಾಳಿಗೆ ಫೈನಾನ್ಸ್ ಕೊಟ್ಟಿರೋದು ಯಾರು? ಆರೋಪಿಗಳು ಮಾರಕಾಸ್ತ್ರಗಳನ್ನ ಎಲ್ಲಿಂದ ತಂದ್ರು ಅನ್ನೋ ವಿಚಾರಣೆಯನ್ನ ಪೊಲೀಸರು ಮುಂದುವರೆಸಿದ್ದಾರೆ.

blank

ಆರೋಪಿಗಳನ್ನು ಕೂರಿಸಿ ಹತ್ಯೆಗೆ ಸ್ಕೆಚ್ ತಯಾರು ಮಾಡಿದ್ದ ಆರೋಪ ಎದುರಿಸುತ್ತಿರುವ ರೌಡಿ ಶೀಟರ್ ಮಾಲಾಳ ಪಾಪ ಪುಣ್ಯದ ಲೆಕ್ಕಾಚಾರವನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಟ್ಟಾರೆ ಸೀನ್‌ಗಳನ್ನ ಗಮನಿಸಿದಾಗ, ಜೊತೆಗಿದ್ದುಕೊಂಡೇ ರೇಖಾ ಹತ್ಯೆಗೆ ಮಾಲಾ ಸಂಚು ಹೆಣೆದಳಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಮುಂದೆ ಈ ಪ್ರಕರಣ ಇನ್ಯಾವ ಟ್ವಿಸ್ಟ್‌ ತಗೊಳ್ಳುತ್ತೋ ಅನ್ನೋ ಕುತೂಹಲವೂ ಇನ್ನೂ ಉಳಿದಿದೆ.

The post ರೇಖಾ ಕದಿರೇಶ್ ಹತ್ಯೆಗೆ ನಡೆದಿತ್ತಾ ‘ಮರ್ಡರ್ ಪಾರ್ಟಿ’? ಮಾಲಾ ಪ್ಲಾನ್ ಆಕೆಗೇ ಉರುಳಾಗಿದ್ದೇಗೆ? appeared first on News First Kannada.

Source: newsfirstlive.com

Source link