ಸಿನಿ ರಸಿಕರ ತಲೆಗೆ ಹುಳು ಬಿಟ್ಟ ‘ದ್ವಿತ್ವ’ ಟೈಟಲ್​.. ಹಾಗಂದ್ರೆ ಏನು?

ಸಿನಿ ರಸಿಕರ ತಲೆಗೆ ಹುಳು ಬಿಟ್ಟ ‘ದ್ವಿತ್ವ’ ಟೈಟಲ್​.. ಹಾಗಂದ್ರೆ ಏನು?

‘ದ್ವಿತ್ವ’ ಇದು ಪುನೀತ್​ ರಾಜ್​ ಕುಮಾರ್ ಅವರ ಮುಂದಿನ ಸಿನಿಮಾದ ಟೈಟಲ್​. ಅನ್​ಎಕ್ಸ್​ಪೆಕ್ಟೆಡ್ ಟೈಟಲ್ ಅನ್ನ ನಿರ್ದೇಶಕ ಲೂಸಿಯಾ ಪವನ್ ಕುಮಾರ್​ ಘೋಷಣೆ ಮಾಡ್ತಿದ್ದಂತೆ ಸ್ಯಾಂಡಲ್​ವುಡ್​ ಸಿನಿ ರಸಿಕರಲ್ಲಿ ತಲೆ ಹುಳು ಬಿಟ್ಟಂತಾಗಿದೆ. ಭಯ ಹುಟ್ಟಿಸೋ ಪೋಸ್ಟರ್​ನೊಂದಿಗೆ ಬಂದ ಈ ಟೈಟಲ್​​​ ಬಗ್ಗೆ ಈಗಾಗಲೇ ಜನ ಗೂಗಲ್​​ನಲ್ಲಿ ‘ದ್ವಿತ್ವ’ ಅಂದ್ರೆ ಏನು ಅಂತಾ ಸರ್ಚ್​ ಮಾಡ್ತಿದ್ದಾರೆ.

ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್​ ಸಿಕ್ಕಿದೆ. ಈ ಹಿನ್ನೆಲೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವ ಉದ್ದೇಶದಿಂದ ಪವನ್ ಕುಮಾರ್​ ಅವರು, ವಿಡಿಯೋ ಒಂದನ್ನ ಫೇಸ್​ಬುಕ್​​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಾವು ದ್ವಿತ್ವ ಅನ್ನೋ ಟೈಟಲ್​ ಅನ್ನ ಎಷ್ಟು ವರ್ಷಗಳಿದ ಜೋಪಾನ ಮಾಡಿಕೊಂಡು ಬಂದೆ. ದ್ವಿತ್ವ ಅಂದ್ರೆ ಏನು ಅನ್ನೋದನ್ನ ಹೇಳಿದ್ದಾರೆ.

ಅವರೇ ಹೇಳುವಂತೆ ಚಿತ್ರದ ಟೈಟಲ್​​ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ರೆಸ್ಪಾನ್ಸ್​ ಸಿಕ್ಕಿದೆ. ಇದಕ್ಕೆ ನಾನು ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ನೀವು ಟೈಟಲ್​ ನೋಡಿ ಈಗಾಗಲೇ ಗೂಗಲ್ ಮಾಡಿರುತ್ತೀರಿ. ದ್ವಿತ್ವ ಅಂದ್ರೆ ಡ್ಯೂಯಾಲಿಟಿ (ದ್ವಿಮುಖ) ಎಂದರ್ಥ. ಈ ಸಂದರ್ಭದಲ್ಲಿ ನಾನು ಹೊಂಬಾಳೆ ಫಿಲಂಸ್​ ಹಾಗೂ ಪುನಿತ್ ಸರ್​ಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಕಳೆದ ಒಂದೂವರೆ ವರ್ಷಗಳಿಂದ ನಾವು ಈ ಟಾಪಿಕ್ ಬಗ್ಗೆ ಮಾತನಾಡುತ್ತ ಇದ್ವಿ. ಜೊತೆಗೆ ಈ ಚಿತ್ರದ ಸ್ಟೋರಿಯನ್ನ ನಾನು ತುಂಬಾ ವರ್ಷಗಳಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೆ. ಗಾಳಿಪಟ ಶೂಟಿಂಗ್​ನಲ್ಲಿ ಥೈಲ್ಯಾಂಡ್​​ಗೆ ಹೋದಾಗ ಈ ಐಡಿಯಾ ನನಗೆ ಹೊಳೆಯಿತು. ನಂತರ ನಾನು ಪುನೀತ್ ರಾಜ್​ಕುಮಾರ್​ ಅವರೊಂದಿಗೆ ಶೇರ್ ಮಾಡಿದೆ. ಅವರೂ ಕೂಡ ನಾನು ಕೂತು ರೆಡಿ ಮಾಡಿರುವ ಸ್ಕ್ರಿಪ್ಟ್ ಓದಿದ್ದಾರೆ.

ನನ್ನ ಜೊತೆ ಲೂಸಿಯಾ ಚಿತ್ರದಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಸ್ನೇಹಿತ ಆದರ್ಶ ಅನ್ನೋರು ಈ ಪೋಸ್ಟರ್​ ಡಿಸೈನ್ ಮಾಡಿದ್ದಾರೆ. ಈ ಪೋಸ್ಟರ್​​ನಲ್ಲಿ ದ್ವಿತ್ವ ಕಥೆಯ ಎಲ್ಲಾ ಕಲ್ಪನೆಗಳು ಮೂಡಿದೆ. ದ್ವಿತ್ವ ಎಂಬ ಟೈಟಲ್​ ಅನ್ನ ನಾನು ತುಂಬಾ ವರ್ಷಗಳಿಂದ ನಾನು ಪ್ರೊಟೆಕ್ಟ್​ ಮಾಡಿಕೊಂಡು ಬಂದಿದ್ದೆ. ಈ ಚಿತ್ರವು ಸೈಕೊಲಜಿಕಲ್, ಡ್ರಾಮಾ, ಥ್ರಿಲ್ಲರ್​ ಜಾನರ್​ ಒಳಗೊಂಡಿದ್ದು, 2022 ರಲ್ಲಿ ಅಭಿಮಾನಿಗಳ ಮುಂದೆ ಬರಲಿದೆ ಅಂತಾ ಮಾಹಿತಿ ನೀಡಿದ್ದಾರೆ.

The post ಸಿನಿ ರಸಿಕರ ತಲೆಗೆ ಹುಳು ಬಿಟ್ಟ ‘ದ್ವಿತ್ವ’ ಟೈಟಲ್​.. ಹಾಗಂದ್ರೆ ಏನು? appeared first on News First Kannada.

Source: newsfirstlive.com

Source link