ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನದ ಆಕಾಂಕ್ಷಿನಾ? KMF ಅಧ್ಯಕ್ಷರು ಹೇಳಿದ್ದೇನು?

ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನದ ಆಕಾಂಕ್ಷಿನಾ? KMF ಅಧ್ಯಕ್ಷರು ಹೇಳಿದ್ದೇನು?

ಬೆಳಗಾವಿ: ನಾವ್ಯಾರೂ ಸಚಿವ ಸ್ಥಾನಕ್ಕೆ ಕ್ಲೇಮ್ ಮಾಡಿಲ್ಲ, ನನಗೆ ಯಾರೂ ಆಫರ್ ಮಾಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಗೋಕಾಕ್​ನಲ್ಲಿ ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಅವರು.. ನಾನು ಸಚಿವನಾಗಲಿದ್ದೇನೆ ಅನ್ನೋದು ಕೇವಲ ವದಂತಿ. ನಾನು ಆ ರೇಸ್​ನಲ್ಲಿ ಇಲ್ಲ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.. ರಾಜಕೀಯದಲ್ಲಿ ಅಸಮಾಧಾನ, ಬೇಜಾರು ಸಹಜ. ಇದು ದೊಡ್ಡ ವಿಷಯವೇನಿಲ್ಲ ಅಂದರು.

ರಮೇಶ್ ಜಾರಕಿಹೊಳಿ ವಿಚಾರವನ್ನ ಮಾಧ್ಯಮಗಳ ಮುಂದೆ ಬಂದು ಕ್ಲಿಯರ್ ಮಾಡ್ತೇವೆ. ನಾವು ಎಲ್ಲಿಯೂ ಸಚಿವ ಸ್ಥಾನ ಕೇಳಿಲ್ಲ. ರಮೇಶ್ ಮತ್ತೆ ಸಚಿವರು ಆಗಲಿ ಅನ್ನೋದೇ ನಮ್ಮೆಲರ ಆಸೆ‌. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಾಡುತ್ತೇನೆ ಅಂತಾ ತಿಳಿಸಿದರು.

The post ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನದ ಆಕಾಂಕ್ಷಿನಾ? KMF ಅಧ್ಯಕ್ಷರು ಹೇಳಿದ್ದೇನು? appeared first on News First Kannada.

Source: newsfirstlive.com

Source link