ಮಹಾರಾಷ್ಟ್ರ ಮಾತ್ರವಲ್ಲ, ಕೇರಳದಿಂದ ಬರೋರಿಗೂ ಕಠಿಣ ಕೊರೊನಾ ಷರತ್ತು

ಮಹಾರಾಷ್ಟ್ರ ಮಾತ್ರವಲ್ಲ, ಕೇರಳದಿಂದ ಬರೋರಿಗೂ ಕಠಿಣ ಕೊರೊನಾ ಷರತ್ತು

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕೇರಳದಿಂದ ಬರುವವರಿಗೆ ಷರತ್ತು ವಿಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಬಸ್, ವಿಮಾನ, ರೈಲು, ಟ್ಯಾಕ್ಸಿ, ಖಾಸಗಿ ವಾಹನಗಳ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಡುವ ಕೇರಳಿಗರಿಗೆ ಈ ಷರತ್ತು ಅನ್ವಯ ಆಗಲಿದೆ.

ಷರತ್ತು ಏನ್ ಹೇಳುತ್ತೆ..?

  • 72 ಗಂಟೆಗಳ ಆರ್​​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಎಂಂಟ್ರಿ ನೀಡಲು ಅವಕಾಶ
  • ವಿಮಾನ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮುನ್ನ ನೆಗೆಟಿವ್ ರಿಪೋರ್ಟ್ ಪರಿಶೀಲಿಸಿಕೊಳ್ಳಬೇಕು
  • ರೈಲು ಪ್ರಯಾಣಿಕರಿಗೆ ರೈಲ್ವೆ ಪ್ರಾಧಿಕಾರ ನೆಗೆಟಿವ್ ರಿಪೋರ್ಟ್ ಖಚಿತಪಡಿಸಿಕೊಳ್ಳಬೇಕು
  • ಬಸ್​ನಲ್ಲಿ ಪ್ರಯಾಣಿಸೋರಿಗೆ ಬಸ್ ನಿರ್ವಾಹಕ ನೆಗೆಟಿವ್ ರಿಪೋರ್ಟ್ ಪರಿಶೀಲಿಸಿಕೊಳ್ಳಬೇಕು
  • ಖಾಸಗಿ ವಾಹನಗಳಲ್ಲಿ ಬರುವವರಿಗೆ ನೆಗೆಟಿವ್ ರಿಪೋರ್ಟ್ ಪರಿಶೀಲನೆಗಾಗಿ ಚೆಕ್ ಪೋಸ್ಟ್​ನಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ
  • ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ ವಹಿವಾಟು ಕೆಲಸಕ್ಕಾಗಿ ಬರುವವರು ಪ್ರತಿ 15 ದಿನಕ್ಕೊಮ್ಮೆ ಆರ್​ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ತರಬೇಕು

The post ಮಹಾರಾಷ್ಟ್ರ ಮಾತ್ರವಲ್ಲ, ಕೇರಳದಿಂದ ಬರೋರಿಗೂ ಕಠಿಣ ಕೊರೊನಾ ಷರತ್ತು appeared first on News First Kannada.

Source: newsfirstlive.com

Source link