ರಾಜ್ಯದಲ್ಲಿ ಇಂದು 3203 ಮಂದಿಗೆ ಕೊರೊನಾ.. 94 ಸೋಂಕಿತರು ಸಾವು

ರಾಜ್ಯದಲ್ಲಿ ಇಂದು 3203 ಮಂದಿಗೆ ಕೊರೊನಾ.. 94 ಸೋಂಕಿತರು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 36,475 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,19,603 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,56,078 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 3203 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,47,013ಕ್ಕೆ ಏರಿಕೆಯಾಗಿದೆ.

ಇಂದು 14,302ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 27,46,544 ಮಂದಿ ಗುಣಮುಖರಾದಂತಾಗಿದೆ. ಇಂದು 94 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 35,134ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 35134ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 676 ಹೊಸ ಪ್ರಕರಣಗಳು ದಾಖಲಾಗಿ, 18 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬೆಳಗಾವಿ 114, ಚಿಕ್ಕಮಗಳೂರು 98, ದಕ್ಷಿಣ ಕನ್ನಡ 285, ಹಾಸನ 281, ಕೊಡಗು 167, ಮೈಸೂರು 366, ಶಿವಮೊಗ್ಗದಲ್ಲಿ 194, ತುಮಕೂರಲ್ಲಿ 157 ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ 2.08%ಕ್ಕೆ ಬಂದು ನಿಂತಿದೆ. ಮೃತಪಟ್ಟವರ ಶೇಕಡವಾರು ಪ್ರಮಾಣ ಶೇಕಡಾ 2.93ಕ್ಕೆ ನಿಂತಿದೆ.

blank

The post ರಾಜ್ಯದಲ್ಲಿ ಇಂದು 3203 ಮಂದಿಗೆ ಕೊರೊನಾ.. 94 ಸೋಂಕಿತರು ಸಾವು appeared first on News First Kannada.

Source: newsfirstlive.com

Source link