ರೇಖಾ ಮರ್ಡರ್ ಕೇಸ್: ಪೀಟರ್ & ಟೀಂ ಮತ್ಯಾರಿಗೋ ಹಾಕಿದ ಸ್ಕೆಚ್ ರೇಖಾಳತ್ತ ತಿರುಗಿದ್ದು ಹೇಗೆ..?

ರೇಖಾ ಮರ್ಡರ್ ಕೇಸ್: ಪೀಟರ್ & ಟೀಂ ಮತ್ಯಾರಿಗೋ ಹಾಕಿದ ಸ್ಕೆಚ್ ರೇಖಾಳತ್ತ ತಿರುಗಿದ್ದು ಹೇಗೆ..?

ಕಳೆದ ವಾರ ಮಾಜಿ ಕಾರ್ಪೋರೇಟರ್‌ ರೇಖಾ ಕದಿರೇಶ್‌ ಹತ್ಯೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದಾಗ, ದಿನಕ್ಕೊಂದು ತಿರುವುಗಳನ್ನ ಪಡೆದುಕೊಳ್ಳುತ್ತಿತ್ತು. ಆದ್ರೆ ಈಗ ಸಿಕ್ಕಿರೋ ಮಾಹಿತಿ ಪೊಲೀಸರನ್ನೇ ಒಂದು ಕ್ಷಣ ದಂಗಾಗುವಂತೆ ಮಾಡಿಬಿಟ್ಟಿತ್ತು. ಹಂತಕರು ಮಾಡಿದ್ದು ಒಂದೇ ಕೊಲೆಯಾದ್ರೂ ಅವರ ಪ್ಲಾನ್‌ ಬೇರೆಯದ್ದೇ ಆಗಿತ್ತು. ಅಂದುಕೊಂಡಿದ್ದೇ ಒಂದು ಆಗಿದ್ದು ಮತ್ತೊಂದು ಅಂದ್ರೆ ಅದಲು ಬದಲಾಗಿಬಿಟ್ಟಿತ್ತು.

ಅಂದು ಹಾಡಹಗಲಲ್ಲೇ ಬೆಂಗಳೂರಿನ ಛಲವಾದಿ ಪಾಳ್ಯದಲ್ಲಿ ಮಾಜಿ ಕಾರ್ಪೋರೇಟ್‌ ರೇಖಾ ಕದಿರೇಶ್‌ ಭೀಕರ ಹತ್ಯೆಯಾಗುತ್ತೆ. ಹತ್ಯೆಗೂ ಮುನ್ನ ಆರೋಪಿಗಳು ರೇಖಾ ಚಲನವಲನ ಗಮನಿಸಿರುತ್ತಾರೆ. ಎಷ್ಟು ಗಂಟೆಗೆ ಊಟ ಮಾಡುತ್ತಾರೆ, ಎಷ್ಟು ಗಂಟೆಗೆ ಆಫೀಸ್‌ ಹೋಗುತ್ತಾರೆ, ಎಷ್ಟು ಗಂಟೆಗೆ ಆಫೀಸಿನಿಂದ ವಾಪಸ್‌ ಆಗುತ್ತಾರೆ ಅನ್ನೋದನೆಲ್ಲಾ ಪಿನ್‌ ಟು ಪಿನ್‌ ಮಾಹಿತಿ ಕಲೆ ಹಾಕಿರುತ್ತಾರೆ.

blank

ರಸ್ತೆಯಲ್ಲಿ ಎಲ್ಲೆಲ್ಲಿ ಸಿಸಿಟಿವಿಗಳು ಇವೆ, ಎಲ್ಲಿ ಕೊಲೆ ಮಾಡಬೇಕು ಅನ್ನೋದನ್ನು ಪಕ್ಕಾ ಪ್ಲಾನ್‌ ಮಾಡಿರುತ್ತಾರೆ. ಹೀಗಾಗಿ ಕೊಲೆ ಮಾಡುವ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಮೇಲ್ಮುಖವಾಗಿ ತಿರುಗಿಸಿ ಇಟ್ಟಿರುತ್ತಾರೆ. ಆದ್ರೆ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು 24 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸುತ್ತಾರೆ. ಇದೀಗ ಆರೋಪಿಗಳು ನೀಡುತ್ತಿರುವ ಹೇಳಿಕೆಯಿಂದಾಗಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಅಸಲಿಗೆ ರೇಖಾ ಕದಿರೇಶ್​​ ಟಾರ್ಗೆಟ್‌ ಆಗಿರಲೇ ಇಲ್ಲ

ಒಬ್ಬ ಹೆಣ್ಣು ಅನ್ನೋದನ್ನೂ ನೋಡದೆ ಭೀಕರವಾಗಿ ರೇಖಾ ಅವರನ್ನು ಡ್ಯಾಗರ್​​ಗಳಿಂದ ತಿವಿದು ಕೊಲೆ ಮಾಡಲಾಗಿತ್ತು. ಅದನ್ನ ನೋಡಿದಾಗ ಎಂಥವರಿಗೂ ಅದೆಷ್ಟು ದ್ವೇಷ ಇತ್ತಪ್ಪ ಅಂತಾ ಅಂದುಕೊಳ್ಳುವಂತಾಗಿತ್ತು. ಆದ್ರೆ, ಹಂತಕರು ಈಗ ಬಾಯಿ ಬಿಟ್ಟಿರುವ ಪ್ರಕಾರ ಅವರಿಗೆ ರೇಖಾ ಟಾರ್ಗೆಟ್‌ ಆಗಿರಲೇ ಇಲ್ಲವಂತೆ. ಆವರು ಸ್ಕೆಚ್‌ ಹಾಕಿದ್ದು ಮೂವರ ಕೊಲೆಗೆ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ ಮೂವರ ಕೊಲೆ ಅದಾಲೇ ನಡೆದಿರಬೇಕಿತ್ತು. ಅಷ್ಟಕ್ಕೂ ಅವರು ಯಾರು?

ಕದಿರೇಶ್‌ ಹಂತಕರೇ ಟಾರ್ಗೆಟ್‌ ಆಗಿದ್ರು
ಮೂವರನ್ನು ಹತ್ಯೆ ಮಾಡಲು ಸ್ಕೆಚ್‌ ಆಗಿತ್ತು

ಹೌದು, ಹಂತಕರಿಗೆ ರೇಖಾ ಟಾರ್ಗೆಟ್‌ ಆಗಿರಲೇ ಇಲ್ಲ. ಅವರು ಪ್ಲಾನ್‌ ಮಾಡಿದ್ದೇ ಒಂದಾಗಿತ್ತು. ಆದ್ರೆ, ಆ ಪ್ಲಾನ್‌ ತಿರುಗಿದ್ದು ಮಾತ್ರ ರೋಚಕ. ರೇಖಾ ಕೊಲೆಯ ಪ್ರಮುಖ ಆರೋಪಿಯಾಗಿರೋ ಪೀಟರ್‌ಗೆ ರೇಖಾ ಪತಿ ಕದಿರೇಶ್‌ ಅಂದ್ರೆ ಪ್ರಾಣವಾಗಿತ್ತು. ಇಬ್ಬರು ತುಂಬಾ ತುಂಬಾ ಆಪ್ತರಾಗಿಯೇ ಇದ್ರು. ಕದಿರೇಶ್‌ಗೆ ಪಕ್ಕಾ ಬಾಡಿಗಾರ್ಡ್‌ ರೀತಿ ಪೀಟರ್‌ ಕೆಲಸ ಮಾಡುತ್ತಿದ್ದ. ಆದ್ರೆ, ಒಂದು ದಿನ ಕದಿರೇಶ್‌ ಅವರನ್ನು ಹತ್ಯೆ ಮಾಡಿ ಬಿಡಲಾಗುತ್ತೆ. ಅಂದಿನಿಂದ ಪೀಟರ್‌ ಏನೋ ಕಳೆದುಕೊಂಡವರಂತೆ ಆಡುತ್ತಿದ್ದ. ಮರೆಯಲ್ಲಿಯೇ ಹಂತಕರಿಗೆ ಕತ್ತಿ ಮಸೆಯುತ್ತಿದ್ದ.

ಮೂವರ ಹತ್ಯೆಗೂ ರೆಡಿಯಾಗಿತ್ತು ಸ್ಕೆಚ್‌

ಕದಿರೇಶ್ ಹತ್ಯೆಗೆ ಕಾರಣರಾಗಿದ್ದ ಗಾರ್ಡನ್ ಶಿವ ಮತ್ತು ಅವನ ಮಕ್ಕಳಾದ ನವೀನ್, ವಿನಯ್ ಅನ್ನೋದು ಪೀಟರ್‌ಗೆ ತಿಳಿಯುತ್ತೆ. ಹೀಗಾಗಿಯೇ ಪೀಟರ್‌ ಅಂಡ್‌ ಟೀಮ್‌ ಈ ಮೂವರಿಗೆ ಸ್ಕೆಚ್‌ ಹಾಕುತ್ತಾರೆ. ಹೇಗಾದ್ರೂ ಮಾಡಿ ಮೂವರನ್ನು ಹತ್ಯೆ ಮಾಡಲೇಬೇಕು ಅಂದುಕೊಂಡಿರುತ್ತಾರೆ. ಅವರ ಚಲನವಲನದ ಬಗ್ಗೆಯೂ ನಿಗಾ ಇಟ್ಟಿರುತ್ತಾರೆ. ಎಲ್ಲಿ ಹತ್ಯೆ ಮಾಡಬೇಕು? ಹೇಗೆ ಹತ್ಯೆ ಮಾಡಬೇಕು ? ಅನ್ನೋದನೆಲ್ಲಾ ಚರ್ಚೆ ಮಾಡಾ ಇರ್ತಾರೆ. ಮೂವರು ಒಂದೇ ಕಡೆ ಎಲ್ಲಿಯಾದ್ರೂ ಸಿಕ್ತಾರಾ, ಎಲ್ಲರನ್ನೂ ಒಂದೇ ಕಡೆ ಹತ್ಯೆ ಮಾಡಬಹುದಾ ಅಂತಲೂ ಜಾಲಾಡಿರುತ್ತಾರೆ. ಆದ್ರೆ, ಸಡನ್‌ ಆಗಿ ಟಾರ್ಗೆಟ್‌ ಚೇಂಚ್‌ ಆಗಿ ಬಿಡುತ್ತೆ. ಆ ಮೂವರನ್ನು ಬಿಟ್ಟು ಮೊದಲು ರೇಖಾ ಕೊಲೆ ಮಾಡಲು ನಿರ್ಧರಿಸಿ ಬಿಡುತ್ತಾರೆ.

blank

ರೇಖಾ ಟಾರ್ಗೆಟ್‌ ಆಗಲು ಕಾರಣ ಏನು?

ಪೀಟರ್‌ ಅಂಡ್‌ ಟೀಮ್‌ ಕದಿರೇಶ್‌ ಹಂತಕರಿಗೆ ಸ್ಕೆಚ್‌ ಹಾಕಿ ಕುಳಿತಿರುತ್ತಾರೆ. ಇದಕ್ಕೆ ರೇಖಾ ಸಹಕಾರ ಕೇಳಿದ್ದಾರೆ. ಆದ್ರೆ, ರೇಖಾ ತಾನು ಸಹಕಾರ ನೀಡಲ್ಲ ಅಂದು ಬಿಟ್ಟಿದ್ದಾಳೆ. ಪೀಟರ್‌ ಹಲವು ಬಾರಿ ಈ ವಿಷಯವನ್ನು ರೇಖಾ ಬಳಿ ಚರ್ಚೆ ನಡೆಸಿದ್ದಾನೆ. ನೀವು ಸ್ವಲ್ಪ ಸಹಕಾರ ಕೊಡಿ ಸಾಕು ನಾನು ಆ ಮೂವರನ್ನು ಹತ್ಯೆ ಮಾಡ್ತೀನಿ ಅಂತ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಆದ್ರೆ, ರೇಖಾ ಮಾತ್ರ ತಾನು ಯಾವುದೇ ಸಹಕಾರ ನೀಡಿಲ್ಲ, ಈ ಬಗ್ಗೆ ತನ್ನ ಹತ್ತಿರ ಮಾತೇ ಆಡಬೇಡಿ ಅಂತ ಖಡರ್‌ ಸೂಚನೆ ಕೊಟ್ಟಿದ್ದಾಳೆ. ಇದರಿಂದ ರೇಖಾ ವಿರುದ್ಧವೇ ಪೀಟರ್‌ ಕ್ರುದ್ಧನಾಗಿ ಬಿಡ್ತಾನೆ.

ಜೈಲಿಂದ ಹೊರಬಂದ ಅರುಳ್‌ ಹೇಳಿದ್ದೇನು?
ಟಾರ್ಗೆಟ್‌ ರೇಖಾ ಕಡೆ ತಿರುಗಲು ಇದೇ ಕಾರಣ ಆಯ್ತಾ?

ಹೌದು, ರೇಖಾ ಸಹಕಾರ ನೀಡದ್ದಕ್ಕೆ ಪೀಟರ್‌ ಅಸಾಯಕನಾಗಿ ಬಿಟ್ಟಿದ್ದ. ಆದ್ರೆ, ಯಾವುದೋ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಕದಿರೇಶ್‌ ಸಹೋದರಿ ಮಾಲಾ ಮಗ ಬಿಡುಗಡೆ ಆಗ್ತಾನೆ. ಒಂದು ದಿನ ಪೀಟರ್‌ ಜೊತೆ ಸೇರಿ ಅರುಳ್‌, ಮಾಲಾ ಸಭೆ ನಡೆಸುತ್ತಾರೆ. ಆ ಸಭೆಯಲ್ಲಿ ಹಲವಾರು ವಿಷಯಗಳು ಸ್ಫೋಟವಾಗುತ್ತವೆ. ಕದಿರೇಶ್‌ ಹತ್ಯೆ ಮಾಡಿದವರ ಕಥೆ ಮುಗಿಸಲು ರೇಖಾ ಸಹಕಾರ ನೀಡುತ್ತಿಲ್ಲ ಅಂತ ಪೀಟರ್‌ ತಿಳಿಸುತ್ತಾನೆ. ಈ ಸಂದರ್ಭದಲ್ಲಿ ಅರುಳ್‌ ಮಧ್ಯಪ್ರವೇಶಿಸಿ ಕದಿರೇಶ್‌ ಕೊಲೆಗೆ ರೇಖಾ ಕಾರಣ ಅಂತ ಹೇಳಿ ಬಿಡ್ತಾನೆ. ಅಷ್ಟೇ ಅಲ್ಲ, ಕದಿರೇಶ್‌ ಹಂತಕರಾದ ನವೀನ್‌, ವಿನಯ್‌ಗೆ ರೇಖಾ ಸಹಾಯ ನೀಡಿದ್ದಾಳೆ ಅಂತ ಹೇಳ್ತಾನೆ. ಆ ವಿಷಯ ಕೇಳಿದವನೇ ಪೀಟರ್‌ ಕ್ರುದ್ಧನಾಗಿ ಬಿಡ್ತಾನೆ. ಅದೇ ಕಾರಣಕ್ಕೆ ರೇಖಾ ತನಗೆ ಸಹಕಾರ ನೀಡುತ್ತಿಲ್ಲ ಅಂತ ಅನುಮಾನಿಸುತ್ತಾನೆ. ಆಗಲೇ ನೋಡಿ ಪ್ಲಾನ್‌ ಚೇಂಚ್‌ ಆಗಿ ರೇಖಾ ಟಾರ್ಗೆಟ್‌ ಆಗಿ ಬಿಡ್ತಾಳೆ.

ಮೊದಲು ರೇಖಾ ಆಮೇಲೆ ಶಿವ, ನವೀನ್‌, ವಿನಯ್‌
ಹಂತಕರ ಪ್ಲಾನ್‌ ಸಂಪೂರ್ಣ ಬದಲು

ಹೌದು, ಹಂತಕರಿಗೆ ಮೊದಲು ರೇಖಾ ಹತ್ಯೆ ಮಾಡಬೇಕು ಅನ್ನೋ ಯೋಚನೆಯೇ ಇರಲಿಲ್ಲ. ಆದ್ರೆ, ಯಾವಾಗ ಕದಿರೇಶ್‌ ಹತ್ಯೆಗೆ ರೇಖಾ ಕಾರಣ ಅಂತ ಚರ್ಚೆ ಆಯ್ತೋ ಸಂಪೂರ್ಣ ಪ್ಲಾನ್‌ ಬದಲಾಗಿ ಬಿಡುತ್ತೆ. ಮೊದಲು ರೇಖಾ ಕಥೆ ಮುಗಿಸೋಣ. ಆಮೇಲೆ ಗಾರ್ಡನ್‌ ಶಿವ, ನವೀನ್‌, ವಿನಯ್‌ ಹತ್ಯೆ ಮಾಡೋಣ ಅಂಥ ತೀರ್ಮಾನಿಸುತ್ತಾರೆ. ಇದನ್ನೆಲ್ಲಾ ಕೇಳ್ತಾ ಹೋದ್ರೆ ಯಾರಿಗೋ ಸ್ಕೆಚ್‌ ಹಾಕಿ ಮತ್ಯಾರನ್ನೋ ಹತ್ಯೆ ಮಾಡಿದ ಹಾಗಿದೆ ಈ ಪ್ರಕರಣ.

blank

ಕದಿರೇಶ್‌ ಹತ್ಯೆಗೆ ರೇಖಾ ಸಪೋರ್ಟ್‌ ಮಾಡಿದ್ದು ನಿಜನಾ?
ಪೀಟರ್‌ಗೆ ಅರುಳ್‌ ಸುಳ್ಳು ಹೇಳಿದ್ನಾ?

ಇದೊಂದು ಎಲ್ಲಾ ರೀತಿಯಲ್ಲಿಯೂ ಅನುಮಾನ ಹುಟ್ಟಿಸಿರುವ ಪ್ರಶ್ನೆಯಾಗಿ ಬಿಟ್ಟಿದೆ. ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಯಾಗಿ ಕರಿದೇಶ್‌ ಹತ್ಯೆಯಾಗುತ್ತೆ. ಆದ್ರೆ, ಅಲ್ಲಿ ರೇಖಾ ಕೈವಾಡ ಇತ್ತು ಅನ್ನೋದಕ್ಕೆ ಯಾವುದೇ ಪುರಾವೆ ಇಲ್ಲ. ಅದು ಎಷ್ಟರ ಮಟ್ಟಿಗೆ ಸತ್ಯವೋ ತಿಳಿಯದು. ಆದ್ರೆ, ಆ ವಿಷ್ಯವನ್ನು ಪೀಟರ್‌ ತಲೆಗೆ ಅರುಳ್‌ ತುರುಕಿದ್ದ. ಇದರ ಹಿಂದೆ ಮಾಲಾ ಮತ್ತು ಅರುಳ್‌ ಅವರದ್ದು ಬೇರೆಯದೇ ಪ್ಲಾನ್‌ ಇದ್ದರೂ ಇರಬಹುದು. ಪೀಟರ್‌ಗೆ ಹೀಗೆ ಹೇಳಿ ಹತ್ಯೆ ಮಾಡಿಸಿದರೆ, ರಾಜಕೀಯವಾಗಿ ತಮ್ಮ ಕುಟುಂಬಕ್ಕೆ ಸಹಾಯವಾಗುತ್ತೆ ಅನ್ನೋ ಯೋಚನೆ ಇದ್ದರೂ ಇರಬಹುದು.

ರೇಖಾ ಕದಿರೇಶ್‌ ಕೊಲೆ ದಿನಕ್ಕೊಂದು ಟ್ವಿಸ್ಟ್‌ ಪಡೆಯುತ್ತಿದೆ. ಕಾರಣ ಏನೇ ಇರಲಿ, ಒಬ್ಬ ಹೆಣ್ಣು ಮಗಳನ್ನು ಅಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ್ದು ಖಂಡನೀಯ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ಮೇಲೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು.

The post ರೇಖಾ ಮರ್ಡರ್ ಕೇಸ್: ಪೀಟರ್ & ಟೀಂ ಮತ್ಯಾರಿಗೋ ಹಾಕಿದ ಸ್ಕೆಚ್ ರೇಖಾಳತ್ತ ತಿರುಗಿದ್ದು ಹೇಗೆ..? appeared first on News First Kannada.

Source: newsfirstlive.com

Source link