ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಮತ್ತಷ್ಟು ಲಾಕ್​ಡೌನ್​ ಸಡಿಲಿಕೆ.. ಇಳಿಯಿತು ಪಾಸಿಟಿವಿಟಿ ರೇಟ್

ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಮತ್ತಷ್ಟು ಲಾಕ್​ಡೌನ್​ ಸಡಿಲಿಕೆ.. ಇಳಿಯಿತು ಪಾಸಿಟಿವಿಟಿ ರೇಟ್

ದಕ್ಷಿಣ ಕನ್ನಡ: ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕ್ಯಾಟಗರಿ 1 ಕ್ಕೆ ಸೇರ್ಪಡೆಯಾಗಿದ್ದು ಇಂದಿನಿಂದ ಜಿಲ್ಲೆಯಲ್ಲಿ ಲಾಕ್​ಡೌನ್ ಮತ್ತಷ್ಟು ಸಡಿಲಿಕೆಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕೇಸ್ ಕಡಿಮೆಯಾಗುತ್ತಿರುವ ಹಿನ್ನೆಲೆ.. ಹೆಚ್ಚುವರಿ ಕಾರ್ಯ ಚಟುವಟಿಕೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು.. ಜುಲೈ 5ರ ಬೆಳಗ್ಗೆ 5 ಗಂಟೆಯವರೆಗೆ ಅನ್ವಯವಾಗಲಿದೆ. ಬಸ್, ಆಟೋ ಸೇರಿದಂತೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಶನಿವಾರ, ಭಾನುವಾರ ಎಂದಿನಂತೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

The post ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಮತ್ತಷ್ಟು ಲಾಕ್​ಡೌನ್​ ಸಡಿಲಿಕೆ.. ಇಳಿಯಿತು ಪಾಸಿಟಿವಿಟಿ ರೇಟ್ appeared first on News First Kannada.

Source: newsfirstlive.com

Source link