ಇಸ್ರೇಲ್ ಬತ್ತಳಿಕೆಗೆ ಹೊಸ ಬೇಟೆಗಾರ; ಸೀ ಬ್ರೇಕರ್​​ನ ಮೇಕ್​​ ಇನ್ ಇಂಡಿಯಾ ಮಾಡಲು ಒಲವು

ಇಸ್ರೇಲ್ ಬತ್ತಳಿಕೆಗೆ ಹೊಸ ಬೇಟೆಗಾರ; ಸೀ ಬ್ರೇಕರ್​​ನ ಮೇಕ್​​ ಇನ್ ಇಂಡಿಯಾ ಮಾಡಲು ಒಲವು

ಆ ದೇಶದ ಜನ ಸಂಖ್ಯೆ ಹೆಚ್ಚೆಂದರೆ 1 ಕೋಟಿ.. ಅದರ ವಿಸ್ತೀರ್ಣ ಕರ್ನಾಟಕಕ್ಕಿಂತ ಕಡಿಮೆ.. ಆದ್ರೆ ಈ ಪುಟ್ಟ ದೇಶದ ಹೆಸರು ಕೇಳಿದ್ರೆ ಸಾಕು ಘಟಾನುಘಟಿ ದೇಶಗಳು ಬೆಚ್ಚಿ ಬೀಳುತ್ತವೆ.. ಆದ್ರೆ ಈ ದೇಶ ಮಾತ್ರ ಸದಾ ಕಾಲ ಭಾರತದ ರಕ್ಷಣೆಗೆ ಎಲ್ಲ ರೀತಿಯ ಸಹಾಯ ನೀಡುತ್ತಲೇ ಇರುತ್ತೆ.. ತನ್ನ ಕಷ್ಟ ಕಾಲದಲ್ಲೂ ಭಾರತಕ್ಕೆ ಸಹಾಯ ಮಾಡೋದನ್ನ ಇದನ್ನು ಮರೆಯಲ್ಲ.. ಇಂಥ ಪುಟ್ಟ ದೇಶ ಮತ್ತೊಂದು ಸಾಧನೆ ಮಾಡಿದ್ದು.. ಭಾರತಕ್ಕೂ ಸೂಪರ್ ಆಫರ್ ಕೊಟ್ಟಿದೆ..

blankಭಾರತದ ಆ ಮಿತ್ರ.. ಎಂದೂ ಯೇ ದೋಸತಿ ಹಮ್​ ನಹೀ ಛೋಡೆಂಗೆ ಅಂತ ಹಾಡು ಹಾಡಿಲ್ಲ.. ನಮ್ಮ ಸ್ನೇಹ ಕರ್ಣ-ದುರ್ಯೋಧನರಂತೆ ಅಂತಾ ಡೈಲಾಗ್ ಹೇಳಿಲ್ಲ.. ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅಂತ ಸಂದೇಶ ಕಳಿಸಿಲ್ಲ.. ಆದ್ರೆ.. ಅವಶ್ಯಕತೆ ಬಿದ್ದಾಗಲೆಲ್ಲ.. ಯೇ ದೋಸ್ತ ನಾ ಇದ್ದೀನಿ ಬಿಡೋ.. ಅಂತಾ ಓಡಿಬರೋ ಜಿಗರಿ ದೋಸ್ತ್​​ನಂತೆ.. ಸದಾಕಾಲ ಭಾರತದ ಸಹಾಯಕ್ಕೆ ಬರುತ್ತೆ..

ಅದು ಕೃಷಿ ವಲಯದಲ್ಲೇ ಇರಲಿ.. ರಕ್ಷಣಾ ವಲಯದಲ್ಲೇ ಇರಲಿ.. ಸಂಶೋಧನಾ ವಲಯವೇ ಆಗಿರಲಿ.. ಗುಪ್ತಚರ ಮಾಹಿತಿ ಹಂಚಿಕೆಯಲ್ಲೇ ಇರಲಿ… ಅದು ಕಾರ್ಗಿಲ್ ಯುದ್ಧವಾಗಿರಲಿ.. ಅಥವಾ ಟೆರರಿಸ್ಟ್​ಗಳ ವಿರುದ್ಧದ ಹೋರಾಟ ಆಗಿರಲಿ.. ಮೊದಲು ಬರೋದೇ ಆ ದೇಶ.. ಎಂಥ ಕಷ್ಟ ಸಮಯದಲ್ಲೂ ಸಹಾಯಕ್ಕೆ ಧಾವಿಸೋದೇ ಆ ದೇಶ.. ಅದೂ ಎಷ್ಟರ ಮಟ್ಟಿಗೆ ಅಂದ್ರೆ ಈ ಬಾರಿ ಕೊರೊನಾ ಎರಡನೇ ಅಲೆ ವೇಳೆ.. ತನ್ನ ದೇಶದಲ್ಲಿ ಯುದ್ಧದದಂತೆ ಸನ್ನಿವೇಶ ಎದುರಾಗಿದ್ರೂ.. ದುಷ್ಟ ಉಗ್ರರು ನಿರಂತರ ಬಾಂಬ್ ದಾಳಿ ನಡೆಸುತ್ತಿರೋವಾಗಲೂ.. ಭಾರತಕ್ಕೆ ಆಕ್ಸಿಜೆನ್​​ ಕಾನ್ಸಂಟ್ರೇಟರ್, ವೆಂಟಿಲೇಟರ್ಸ್, ವೈದ್ಯಕೀಯ ಪರಿಕರಗಳನ್ನು ನೀಡಿತ್ತು ಆ ದೇಶ.. ಆ ದೇಶ ಈಗ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದ್ದು.. ಭಾರತಕ್ಕೂ ಅದರ ಸವಲತ್ತು ನೀಡಲು ಮುಂದೆ ಬಂದಿದೆ.

blank
ಕೇವಲ 1 ಕೋಟಿಯಷ್ಟು ಜನ ಸಂಖ್ಯೆ ಹೊಂದಿರೋ ಆ ರಾಷ್ಟ್ರದ ಸುತ್ತ ವೈರಿಗಳೇ ತುಂಬಿದ್ದಾರೆ. ಅದರ ವಿಸ್ತೀರ್ಣ ಕರ್ನಾಟಕಕ್ಕಿಂತ ಚಿಕ್ಕದು.. ಹೀಗಿದ್ದೂ.. ಇಂದು ಇಸ್ರೇಲ್ ಅಂದ್ರೆ ಘಟಾನುಘಟಿ ದೇಶಗಳೂ ಬೆಚ್ಚಿ ಬೀಳುತ್ತವೆ.. ಯಾಕೆ ಬೇಕಪ್ಪಾ ಆ ಇಸ್ರೇಲ್​​ ಜೊತೆ ಕಿರಿಕ್? ಭಯ ಬೀಳ್ತಾರೆ.. ಮೇಲ್ನೋಟಕ್ಕೆ ಇಸ್ರೇಲ್​​ ವಿರುದ್ಧ ಬೆಂಕಿ ಉಗುಳುವಂತೆ ನಟಿಸೋ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​ ಖಾನ್ ಕೂಡ, ಸಿಕ್ರೇಟ್​ ಆಗಿ ತನ್ನ ದೂತನನ್ನ ಕಳಿಸಿ ಇಸ್ರೇಲ್​​ ಕೋಪ ಮಾಡಿಕೊಳ್ಳದಂತೆ ಬೇಡಿಕೊಳ್ತಾರೆ.. ಈ ಇಸ್ರೇಲ್​ ಇಷ್ಟು ಸ್ಟ್ರಾಂಗ್ ಆಗಿದ್ದು ಹೇಗೆ? ಅಂತಾ ಕೇಳಿದ್ರೆ ಅದಕ್ಕೆ ಬರೋ ಉತ್ತರವೆಂದ್ರೆನೇ ಸಂಶೋಧನೆ.. ಸಂಶೋಧನೆ ಮತ್ತು ಸಂಶೋಧನೆ.. ಅಂಥದ್ದೊಂದು ಸಂಶೋಧನೆಯ ಫಲವಾಗಿಯೇ ಈಗ ಇಸ್ರೇಲ್​ ಮತ್ತೊಂದು ಮಿಸೈಲ್​ ಅಭಿವೃದ್ಧಿ ಪಡಿಸಿದ್ದು.. ಮೇಕ್​ ಇನ್​ ಇಂಡಿಯಾ ಕಾರ್ಯಕ್ರಮದ ಅಡಿ ಭಾರತದಲ್ಲೂ ತಯಾರಿಸುವ ಸೂಚನೆ ನೀಡಿದೆ..!

ಇಸ್ರೇಲ್​ ಬತ್ತಳಿಕೆ ಸೇರಿತು 5th ಜನರೇಶನ್ ಮಿಸೈಲ್
ಸೀ ಬ್ರೇಕರ್​​ ಗುರಿ ಇಟ್ರೆ ಶತ್ರು ನೆಲೆ ಸಂಪೂರ್ಣ ಫಿನಿಶ್

ಮಿಲಿಟರಿ ಟೆಕ್ನಾಲಜಿ ಇಂದು ರಭಸದಿಂದ ಹರಿಯುವ ನೀರಿನಂತೆ.. ಈಗಷ್ಟೇ ಲೇಟೆಸ್ಟ್ ಆಗಿದ್ದ ಟೆಕ್ನಾಲಜಿ.. ಔಟ್​ ಆಫ್​ದಿ ರೇಸ್​ ಆಗೋಕೆ ಸಮಯವೇ ಬೇಡ.. ಹೀಗಾಗಿ ದೇಶದ ಭದ್ರತೆ ಕಾಪಾಡಿಕೊಳ್ಳಬೇಕಾದ್ರೆ.. ಶತ್ರುಗಳಿಗಿಂತ ಸದಾ ಕಾಲ ಒಂದು ಹೆಜ್ಜೆ ಮುಂದಿಡಬೇಕಾದ್ರೆ.. ಹೊಸ ಹೊಸ ಅಸ್ತ್ರಗಳು ಸೇನೆಯ ಬತ್ತಳಿಕೆ ಸೇರುತ್ತಲೇ ಇರಬೇಕು.. ಈ ವಿಷಯದಲ್ಲಿ ಭಾರತವೂ ಕಮ್ಮಿ ಏನಲ್ಲ.. ಆದ್ರೆ ಅದರ ವೇಗ ಅಷ್ಟು ಸಾಲಲ್ಲ.. ಶತ್ರು ರಾಷ್ಟ್ರ ಚೀನಾ ಎಷ್ಟುವೇಗವಾಗಿ ಭಾರತದ ಭದ್ರತೆಗೆ ರಿಸ್ಕ್​ ಒಡ್ಡಲು ಸಿದ್ಧವಾಗುತ್ತೋ.. ಅಷ್ಟು ವೇಗವಾಗಿ ಭಾರತದ ಟೆಕ್ನಾಲಜಿ ಅಭಿವೃದ್ಧಿ ಆಗ್ತಿಲ್ಲ.. ಆದ್ರೆ ಈ ವಿಷಯದಲ್ಲಿ ಇಸ್ರೇಲ್​ ಬಹುತೇಕ ಎಲ್ಲ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದೆ.. ಈ ಗ ಅದೇ ಇಸ್ರೇಲ್​​ ಫಿಫ್ತ್ ಜನರೇಶನ್​ ಮಿಸೈಲ್​ ಒಂದನ್ನು ಇತ್ತೀಚೆಗಷ್ಟೇ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ..

blank
ಸೀ ಬ್ರೇಕರ್ ಹೆಸರಿನ ಈ ಹೊಸ ಮಿಸೈಲ್​ ಸಾಮಾನ್ಯವಲ್ಲ.. ಇದು ಗುರಿ ಇಟ್ಟರೆ ಶತ್ರುವಿನ ಕತೆ ಫಿನಿಶ್.. ಶತ್ರುವಿನ ಆ ಅಸೆಟ್​​​ಗೆ ಎಷ್ಟೇ ಭದ್ರತೆ ಇರಲಿ.. ಎಲ್ಲಿಯೇ ಅವಿತಿರಲಿ.. ಅದು ಭೂಮಿ ಮೇಲೆ ಇರಲಿ ಅಥವಾ ಸಾಗರದಲ್ಲಿ ತೇಲುತ್ತಿರಲಿ.. ಅದು ಎಷ್ಟೇ ದೊಡ್ಡ ಮೌಲ್ಯದ ಟಾರ್ಗೆಟ್ ಆಗಿರಲಿ.. ಉಡೀಸ್ ಮಾಡದೇ ಬಿಡೋದೇ ಇಲ್ಲ ಈ ಮಿಸೈಲ್..!

ಬರೋಬ್ಬರಿ 300 ಕಿಲೋಮೀಟರ್ ದೂರದಲ್ಲಿರೋ ಟಾರ್ಗೆಟ್​​ನ ಹುಡುಕಿ ಹೊಡೆಯುತ್ತವೆ ಈ ಮಿಸೈಲ್​ಗಳು.. ಆ ಟಾರ್ಗೆಟ್​ ನಿಂತಿರುವ ಹಡಗಾಗಿರಲಿ.. ಸಾಗುತ್ತಿರುವ ಹಡಗಾಗಿರಲಿ.. ಬಂಕರ್​ಗಳಾಗಿರಲಿ.. ಶತ್ರುಗಳ ರೆಡಾರ್ ಸಿಸ್ಟಂಗಳಾಗಿರಲಿ.. ಗುಡೌನ್​​ಗಳಾಗಿರಲಿ.. ಇದು ಸಲೀಸಾಗಿ ಹೋಗಿ ಹೊಡೆದು ಹಾಕುತ್ತೆ.. ವಿಶೇಷ ಅಂದ್ರೆ ಈ ಮಿಸೈಲ್​ಗಳನ್ನು ವಾಹನಗಳಿಂದ ಹಾರಿಸಬಹುದು ಅಥವಾ ಯುದ್ಧ ನೌಕೆಗಳಿಂದ ಹಾರಿಸಬಹುದು.. ಅಥವಾ ಎರಡೂ ಕಡೆಯಿಂದ ಒಂದೇ ಟಾರ್ಗೆಟ್​ಗೂ ಹಾರಿಸಬಹುದು.. ಸಿಗ್ನಲ್​ ಕೋ-ಆರ್ಡಿನೇಟ್​ ಮಾಡಿಕೊಂಡು.. ಈ ಮಿಸೈಲ್​ಗಳು ಹೋಗಿ ತಮ್ಮ ಗುರಿಯನ್ನ ಮುಟ್ಟುತ್ತವೆ.. ಮೊಟ್ಟೋದಲ್ಲ ಭಯಂಕರ ಸ್ಫೋಟವನ್ನೇ ಮಾಡಿ ಬಿಡುತ್ತವೆ..!

blank

ಅಯ್ಯೋ ಬರೀ ಮುನ್ನೂರು ಕಿಲೋಮೀಟರಾ? ಅದ್ರಲ್ಲೇನು ವಿಶೇಷ? ಭಾರತದ ಬಳಿಯಲ್ಲೇ ಇದಕ್ಕಿಂತ ದೂರ ಸಾಗುವ ಮಿಸೈಲ್​ಗಳೂ ಇವೆಯಲ್ಲ? ಅದ್ರಲ್ಲೂ ನಮ್ಮ ಅಗ್ನಿ ಮಿಸೈಲ್​ಗಳು 5 ಸಾವಿರ ಕಿಲೋಮೀಟರ್​​​ ಅಷ್ಟು ದೂರ ಬೇಕಾದ್ರೂ ಸಾಗಬಲ್ಲವು.. ಇನ್ನು ವಿಶ್ವದಲ್ಲೇ ಅತ್ಯಂತ ವೇಗವಾಗಿ ಸಾಗುವ ಬ್ರಹ್ಮೋಸ್​ ನಮ್ಮ ಬಳಿಯಲ್ಲಿ ಇದೆ.. ಅದೂ ಇಂಥದ್ದೇ ಕಾರ್ಯ ಮಾಡುತ್ತೆ ಅಲ್ಲವಾ? ಅನ್ನೋ ಪ್ರಶ್ನೆ ಇಂಥ ವೇಳೆ ಬರೋದು ಸಹಜ..

ಸೀ ಬ್ರೇಕರ್ ಮಿಸೈಲ್ ವಿಶೇಷತೆ ಏನ್ ಗೊತ್ತಾ?

ಆದ್ರೆ, ಈ ಮಿಸೈಲ್​​ಗಳು ತನ್ನದೇ ಆದ ವಿಶೇಷತೆಗಳನ್ನೇ ಹೊಂದಿವೆ.. ಪ್ರಮುಖವಾಗಿ ಇದರ ಟೆಕ್ನಾಲಜಿ ಅತ್ಯಾಧುನಿಕವಾಗಿರೋವಂಥದ್ದು.. ಇದು ತನ್ನ ಟಾರ್ಗೆಟ್​​ ಮುಟ್ಟೋವರೆಗೂ ಶತ್ರುಗಳಿಗೆ ಕಾಣೋದೇ ಇಲ್ಲ.. ಅಂದ್ರೆ ರೆಡಾರ್​ ಅಥವಾ ಸೆನ್ಸರ್​ ಬಳಸಿ ಇವುಗಳನ್ನು ಗುರ್ತಿಸೋದು ಕಷ್ಟ.. ಇವು ಕಡಲಾದ್ರೆ ನೀರಿಗೆ ಸನಿಹದಲ್ಲೇ ಹಾರಬಲ್ಲವು.. ಭೂ ತಳಕ್ಕೆ ಹತ್ತಿರದಲ್ಲೇ ಸಾಗಬಲ್ಲವು.. ನದಿ ಮೇಲೆ ಬಚ್ಚಿಟ್ಟುಕೊಂಡು ವೇಗವಾಗಿ ಮುನ್ನುಗ್ಗಬಲ್ಲದು.. ಇನ್​ಫ್ಯಾಕ್ಟ್​ ಸ್ಟೆಲ್ತ್​ ಗುಣವನ್ನ ಹೊಂದಿರೋ ಈ ಮಿಸೈಲ್​​ಗಳನ್ನು ಹುಡುಕಿ ನಾಶ ಮಾಡೋದು ವೈರಿಗಳಿಗೆ ಸುಲಭ ಸಾಧ್ಯವಂತೂ ಅಲ್ಲ..
blankವಿಶೇಷವೆಂದ್ರೆ ಎಲ್ಲ ವಾತಾವರಣದಲ್ಲೂ ಮತ್ತು ಎಲ್ಲ ರೀತಿಯ ಪ್ರದೇಶಗಳಲ್ಲೂ ಇದನ್ನು ಬಳಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ಹೇಳೋದಾದ್ರೆ ಭಾರತದ ಹಿಮಾಲಯ ಮತ್ತು ಲಡಾಖ್​ ಭಾಗದಲ್ಲಿರೋ ವಾತಾವರಣವೇ ಬೇರೆ.. ಅಲ್ಲಿ ಅತಿಯಾದ ಕೋಲ್ಡ್​ ಇರೋದ್ರ ಜೊತೆಗೆ, ಶತ್ರು ಸೇನೆ ಕೂಡ ಎಸ್​​-400 ನಂಥ ಆ್ಯಂಟಿ ಮಿಸೈಲ್​ ಸಿಸ್ಟಂ ಡಿಪ್ಲಾಯ್​ ಮಾಡಿದೆ..

ಇನ್ನು ರಾಜಸ್ಥಾನ, ಗುಜರಾತ್, ಪಂಜಾಬ್​ ರಾಜ್ಯಗಳಿಗೆ ಬಂದ್ರೆ ಇಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತೆ.. ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದತ್ತ ಬಂದ್ರೆ ಇಲ್ಲಿ ಉಪ್ಪಿನಾಂಶ ಇರೋ ವಾತಾವರಣ, ಎಲ್ಲೆಡೆ ಆವರಿಸಿದ ಕಡಲು.. ಇಂಥ ವಿಭಿನ್ನ ವಾತಾವರಣ ಮತ್ತು ವಿಭಿನ್ನ ಸವಾಲುಗಳನ್ನು ಹೊಂದಿರೋ ಭಾರತ ಈ ಎಲ್ಲ ಸಂದರ್ಭದಲ್ಲೂ ಕ್ಷಮತೆಯಿಂದ ಕಾರ್ಯ ನಿರ್ವಹಿಸುವ ಮಷೀನ್​ಗಳು, ಏರ್​ಕ್ರಾಫ್ಟ್​ಗಳು ಅಥವಾ ಮಿಸೈಲ್​ಗಳನ್ನು ಹೊಂದಲು ಬಯಸುತ್ತೆ.. ಇಂಥ ಎಲ್ಲ ವಾತಾವರಣದಲ್ಲೂ ಸೀ ಬ್ರೇಕರ್​​​ ಅತ್ಯಂತ ಸಕ್ಷಮವಾಗಿ ಕಾರ್ಯ ನಿರ್ವಹಿಸುತ್ತೆ..

blank
ಇತ್ತೀಚೆಗೆ ತಾನೆ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿರೋ ಈ ಅಸ್ತ್ರವನ್ನ ಭಾರತಕ್ಕೂ ನೀಡಲು ಇಸ್ರೇಲ್​ ಬಯಸಿದೆ. ಅಷ್ಟು ಮಾತ್ರವಲ್ಲ ಭಾರತದಲ್ಲೇ ಈ ಮಿಸೈಲ್​ಗಳನ್ನು ತಯಾರಿಸಲು ಇದು ಬಯಸಿದೆ. ಇಸ್ರೇಲ್​ನ ರಫಾಯಿಲ್​ ಹೆಸರಿನ ಸಂಸ್ಥೆ ಸೀ ಬ್ರೇಕರ್​​​ ಮಿಸೈಲ್​ ಅಭಿವೃದ್ಧಿ ಪಡಿಸಿದ್ದು, ಅದು ಈಗಾಗಲೇ ಭಾರತದ ಕಲ್ಯಾಣಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ. ಹೀಗಾಗಿ, ಇದನ್ನು ಭಾರತದಲ್ಲೂ ಉತ್ಪಾದಿಸಲು ನಾವು ಸಿದ್ಧ ಅಂತ ಇಸ್ರೇಲ್​ ಹೇಳಿದೆ..

blankಹಾಗೆ ನೋಡಿದ್ರೆ ಈಗಾಗಲೇ ಇಸ್ರೇಲ್ ಮತ್ತು ಭಾರತದ ಸಹಭಾಗಿತ್ವದಲ್ಲಿ ಸಾಕಷ್ಟು ಮಿಲಿಟರಿ ಉತ್ಪನ್ನಗಳನ್ನು ತಯಾರಿಸಲಾಗಿದೆ. ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಹಲವು ಮಿಸೈಲ್​ಗಳನ್ನೂ ಅಭಿವೃದ್ಧಿ ಪಡಿಸಿದೆ. ಈಗಾಗಲೇ ಭಾರತ ಮೇಡ್​ ಇನ್ ಇಸ್ರೇಲ್​​ ಬಂದೂಕೂಗಳು, ಮಿಸೈಲ್​ಗಳನ್ನು ಬಳಸುತ್ತಿದೆ. ಜೊತೆಗೆ ಬರಾಕ್​-8 ಆ್ಯಂಟಿ ಮಿಸೈಲ್​ ಸಿಸ್ಟಂ ಕೂಡ ಭಾರತವನ್ನ ರಕ್ಷಣೆ ಮಾಡ್ತಿದೆ. ಇಂಥ ವೇಳೆಯಲ್ಲಿ ಬ್ರಹ್ಮೋಸ್​ ಮಿಸೈಲ್​​​​​​​ನಷ್ಟಲ್ಲದಿದ್ದರೂ.. ಅದಕ್ಕಿಂತ ಕಡಿಮೆ ದರದ್ದಾಗಿರೋ ಮತ್ತು ಅತ್ಯಾಧುನಿಕವಾಗಿರೋ ಮಿಸೈಲ್​ ಸಿಸ್ಟಂಗಳ ಅವಶ್ಯಕತೆ ಭಾರತಕ್ಕೆ ಇದ್ದೇ ಇದೆ. ಈ ನಿಟ್ಟಿನಲ್ಲಿ ಸೀ ಬ್ರೇಕರ್​ ಖಂಡಿತವಾಗಿ ಭಾರತಕ್ಕೆ ಬೇಕು ಅಂತಾ ಅನಿಸಿದ್ರೆ.. ಇದು ನಿಜಕ್ಕೂ ಉತ್ತಮ ಆಸ್ತಿಯಾಗೋದ್ರಲ್ಲಿ ಸಂಶವೇ ಇಲ್ಲ..

ವಿಶೇಷ ಬರಹ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

 

The post ಇಸ್ರೇಲ್ ಬತ್ತಳಿಕೆಗೆ ಹೊಸ ಬೇಟೆಗಾರ; ಸೀ ಬ್ರೇಕರ್​​ನ ಮೇಕ್​​ ಇನ್ ಇಂಡಿಯಾ ಮಾಡಲು ಒಲವು appeared first on News First Kannada.

Source: newsfirstlive.com

Source link