ನಾನು ಅಧಿಕಾರದಲ್ಲಿದ್ರೆ 10 ಕೆ.ಜಿ.. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 ಕೆ.ಜಿ ಅಕ್ಕಿ ಕೊಡ್ತೀವಿ- ಸಿದ್ದರಾಮಯ್ಯ

ನಾನು ಅಧಿಕಾರದಲ್ಲಿದ್ರೆ 10 ಕೆ.ಜಿ.. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 ಕೆ.ಜಿ ಅಕ್ಕಿ ಕೊಡ್ತೀವಿ- ಸಿದ್ದರಾಮಯ್ಯ

ಮಂಡ್ಯ: ನಾನು ಅಧಿಕಾರದಲ್ಲಿದ್ರೆ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 ಕೆಜಿ ಅಕ್ಕಿ ಕೊಡ್ತೀವಿ ಅನ್ನೋ ಸಿದ್ದರಾಮಯ್ಯ ಹೇಳಿಕೆ ಚರ್ಚೆಗೆ ಗ್ರಾಸವಾಗ್ತಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7KG ಅಕ್ಕಿ ನೀಡಲಾಗುತ್ತೆ ಅಂತ ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ರು,  ಯಡಿಯೂರಪ್ಪಗೆ ಬಡವರ ಕಷ್ಟ ಗೊತ್ತಾಗ್ತಿಲ್ಲ. ಕೊರೊನಾ ಕಾಲದಲ್ಲಿ 7 ಕೆ.ಜಿ‌. ಅಲ್ಲಾ 10 ಕೆ.ಜಿ.ಕೊಡಬೇಕು, ನಾನೇ ಅಧಿಕಾರದಲ್ಲಿದ್ರೆ 10KG ಕೊಡ್ತಿದ್ದೆ. ಜನರಿಗೆ ಕಷ್ಟದ ಕಾಲದಲ್ಲಿ ಭಾಗಿಯಾಗಬೇಕು. ಪ್ರತಿಯೊಬ್ಬರಿಗೂ 10 ಸಾವಿರ ಹಾಗೂ 10 KG ಅಕ್ಕಿ ಕೊಡಿ ಅಂತಾ ಯಡಿಯೂರಪ್ಪಗೆ ಹೇಳಿದ್ದೆ, ಕೊಟ್ಟಿದ್ರೆ ಇವರ ಅಪ್ಪನ ಮನೆ ಗಂಟು ಹೋಗ್ತಿತ್ತಾ..? ಯಾರ ಮನೆಯಿಂದ ಕೊಡ್ತಿದ್ರು, ಸರ್ಕಾರದ ದುಡ್ಡು,
ಯಡಿಯೂರಪ್ಪ ಮಂಡ್ಯದವ, ಆದ್ರೂ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ. ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದಾರೆ ಯಡಿಯೂರಪ್ಪ..? ಜನರಿಂದ ಅಧಿಕಾರಕ್ಕೆ ಬರೋದು, ಅವರಿಗೆ ಕೊಡೋಕೆ ಏನು.? ಅಂತ ಪ್ರಶ್ನೆ ಮಾಡಿದ್ದಾರೆ.

ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏಳು ಕೆಜಿ ಅಕ್ಕಿ ಕೊಡ್ತೀವಿ. ಕೊರೊನಾದಿಂದ ಸಾವನ್ನಪ್ಪಿದವರ ಬಗ್ಗೆನೂ ಸರ್ಕಾರ ಸುಳ್ಳು ಹೇಳ್ತಿದೆ, ಅದ್ರಲ್ಲೂ ರಾಜಕೀಯ.. ಸರ್ಕಾರದಿಂದ ಒಂದು ರೂಪಾಯಿ ಕೊಟ್ಟಿಲ್ಲ ಮಂಡ್ಯ ಜಿಲ್ಲೆಗೆ. ಯಾಕೆ ಅಧಿಕಾರಕ್ಕೆ ಬರ್ತೀರಾ ನೀವೆಲ್ಲಾ..? ಕೋಟ್ಯಾಂತರ ರೂಪಾಯಿ ಕೊಟ್ಟು MLAಗಳನ್ನ ಕೊಂಡುಕೊಂಡು ಈ ಪುರಸತ್ತಿಗೆ ಬರಬೇಕಿತ್ತಾ..? ಮಿಸ್ಟರ್ ಯಡಿಯೂರಪ್ಪ ಬರಬೇಕಿತ್ತೇನ್ರಿ ಇದಕ್ಕೆ.?.ಸಂಪೂರ್ಣ ವಿಫಲರಾಗಿದ್ದಾರೆ ಇವರು ಅಂತ ಮಂಡ್ಯದಲ್ಲಿ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ, ಈ ಕೆಟ್ಟ ಬಿಜೆಪಿ ಸರ್ಕಾರ ನಮ್ಮ ದೇಶದಲ್ಲಿ ಇರಬೇಕಾ..? ಕೇಂದ್ರ ಸರ್ಕಾರದ ನರೇಂದ್ರ ಮೋದಿ ಹೇಳೋ ಸುಳ್ಳನ್ನೇ, ಇವರು ಹೇಳ್ತಾರೆ. ನರೇಂದ್ರ ಮೋದಿ ಹೇಳಿದ್ದೇ ಹೇಳಿದ್ದು ಅಚ್ಚೇದಿನ್ ಆಯೇಗಾ ಅಂತಾ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ದೇಶದ ಆರ್ಥಿಕತೆ ಅಗೋಗತಿ ಆಗೋಯ್ತು. ಪೆಟ್ರೋಲ್-ಡಿಸೇಲ್, ಏರಿಕೆ ಮಾಡಿದ್ದಾರೆ. ಜನರು ಏನು ಮಾಡಬೇಕು ಹೀಗಾದ್ರೆ? ಇದೆಲ್ಲಾ ಯಾರಿಂದ? ನರೇಂದ್ರ ಮೋದಿ ಅವರ ಆರ್ಥಿಕ ನೀತಿಯಿಂದ..

ಈ ಕೆಟ್ಟ ಬಿಜೆಪಿ ಸರ್ಕಾರ ನಮ್ಮ ದೇಶದಲ್ಲಿ ಇರಬೇಕಾ..?
ಜೆಡಿಎಸ್ ನವರು ಇದು ಇಲ್ಲಾ ಅದು ಇಲ್ಲಾ, ಇವರು ಗೆದ್ದೆರೆ ಇವರು, ಅವರು ಗೆದ್ದರೆ ಅವರು ಎನ್ನುವಂತಾಗಿದ್ದಾರೆ..
ಅವರನ್ನೇ ಸಿಎಂ ಮಾಡಿದ್ದೋ.. ಸರ್ಕಾರ ಕೊಟ್ರೂ ಉಳಿಸಿಕೊಂಡಿಲ್ಲಾ ಅವರು. ಬಿಜೆಪಿ ಅವರು ಹಿಂಬಾಗಿಲಿಂದ ಬರ್ತಾರೆ. ಯಡಿಯೂರಪ್ಪಗೆ ಮುಂಬಾಗಿಲಿಂದ ಬರೋದು ಗೊತ್ತಿಲ್ಲ. ಯಾವಗಲೂ ಹಿಂಬಾಗಿಲಿಂದ ಬರ್ತಾರೆ. ಹೋದ ಸಲಾನು ಆಪರೇಷನ್ ಕಮಲ, ಈ ಬಾರಿನೂ ಅಪರೆಷನ್ ಕಮಲ. ಆಪರೇಷನ್ ಕಮಲ ಅಂತಾ ಆಗಿದ್ದು ಯಡಿಯೂರಪ್ಪನಿಂದ, ಈಗ ಆಪರೇಷನ್ ಕೊರೊನಾ ಮಾಡ್ಬಿಟ್ಟಿದ್ದಾರೆ..!

ಕೆಟ್ಟ ಸರ್ಕಾರ ಇದೆ ಈ ದೇಶದಲ್ಲಿ. ಬಿಜೆಪಿ-ಜೆಡಿಎಸ್ ಬಡವರ ಪರ ಇಲ್ಲ, ಕಾಂಗ್ರೆಸ್ ಬಡವರ ಪರ ಇರುವ ಸರ್ಕಾರ, ಎಲ್ಲಾ ಜಾತಿಯವರನ್ನ ಒಟ್ಟಿಗೆ ಕರೆದುಕೊಂಡು ಹೊಗ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತನ್ನಿ.. ಬಡವರ ಪರ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಹೆಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳ್ತಾರೆ. ಅವರು ಸುಳ್ಳು ಹೇಳ್ತಾರೆ, ಸುಳ್ಳು ಹೇಳೋದಕ್ಕೆಲ್ಲ ಉತ್ತರ ಕೊಡೊಲ್ಲ. ಮನ್ಮುಲ್ ಹಗರಣ ಸಿಐಡಿಗೆ ವಹಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಸಿಐಡಿಗೆ ವಹಿಸಬೇಕು ಅಂತ ಒತ್ತಾಯ ಮಾಡಿದ್ದೆವು. ಬಹಳ ಜಾಗರೂಕವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದಿದ್ದಾರೆ.

The post ನಾನು ಅಧಿಕಾರದಲ್ಲಿದ್ರೆ 10 ಕೆ.ಜಿ.. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 ಕೆ.ಜಿ ಅಕ್ಕಿ ಕೊಡ್ತೀವಿ- ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link