ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಕೋವಿಡ್​ ಸಭೆ ಮುಂದೂಡಿಕೆ
ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನೆ ದಿನೇ ಇಳಿಮುಖವಾಗ್ತಿದ್ದು ಅನ್​​​ಲಾಕ್​ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಈ ಮಧ್ಯೆ ಸಿಎಂ ನೇತೃತ್ವದಲ್ಲಿ ಇಂದು ಸಂಜೆ 5.30 ಕ್ಕೆ ಸಿಎಂ ಬಿಎಸ್​​​ವೈ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಯನ್ನ ಮುಂದೂಡಲಾಗಿದೆ. ಕೋವಿಡ್​ ಬಗ್ಗೆ ಇನ್ನಷ್ಟು ಮಾಹಿತಿ ಕ್ರೋಢೀಕರಿಸುವ ಸಲುವಾಗಿ ಸಭೆಯನ್ನ ಮುಂದೂಡಲಾಗಿದೆ. ಇನ್ನು ಜುಲೈ 5ರ ಬೆಳಿಗ್ಗೆವರೆಗೂ ಅನ್‌ಲಾಕ್ 2.0 ಜಾರಿಯಲ್ಲಿರುವ ಕಾರಣ ಶನಿವಾರ ಸಭೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ.

2. ಆಗಸ್ಟ್​ 22ಕ್ಕೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
1 ರಿಂದ 8ನೇ ತರಗತಿಗಳ ಶಾಲಾ ಶಿಕ್ಷಕರ ನೇಮಕಾತಿಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ದಿನಾಂಕ ನಿಗದಿ ಆಗಿದೆ. ಆಗಸ್ಟ್​ 22ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ ಅಂತ ಶಿಕ್ಷಣ ಸಚಿವ ಸುರೇಶ್​ಕುಮಾರ್​ ಹೇಳಿದ್ದಾರೆ. 1 ರಿಂದ 5ನೇ ತರಗತಿ ಶಿಕ್ಷಕರಿಗೆ ಪಿಯುಸಿ, ಡಿ.ಇಡಿ, ಹಾಗೂ 6 ರಿಂದ 8ನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು, ಪದವಿ ಮತ್ತು ಡಿ.ಇಡಿ, ಬಿಇಡಿ ಅಥವಾ ಬಿ.ಎ.ಇಡಿ, ಬಿ.ಎಸ್.ಸಿ.ಇಡಿಯಲ್ಲಿ ಉತ್ತೀರ್ಣರಾಗಿರಬೇಕು ಅಂತ ತಿಳಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಜುಲೈ 20 ಕೊನೆ ದಿನಾಂಕವಾಗಿದೆ.

3. ಕೇರಳ ಪ್ರಯಾಣಿಕರಿಗೆ ಕರ್ನಾಟಕ ಷರತ್ತು
ಕೋವಿಡ್​ ಹಿನ್ನೆಲೆ , ಕೇರಳದಿಂದ ಬರುವ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರ ಷರತ್ತು ವಿಧಿಸಿದೆ. ಬಸ್, ವಿಮಾನ, ರೈಲು, ಟ್ಯಾಕ್ಸಿ, ಖಾಸಗಿ ವಾಹನಗಳಲ್ಲಿ ರಾಜ್ಯಕ್ಕೆ ಎಂಟ್ರಿ ಕೊಡುವ ಕೇರಳಿಗರಿಗೆ 72 ಗಂಟೆಗಳ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ವಿದ್ಯಾಭ್ಯಾಸ , ಕಚೇರಿ ಕೆಲಸ, ವ್ಯಾಪಾರ ವಹಿವಾಟು ಕೆಲಸಕ್ಕಾಗಿ ಬರುವವರು ಪ್ರತಿ 15 ದಿನಕ್ಕೊಮ್ಮೆ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ತರಬೇಕು ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶಿಸಿದ್ದಾರೆ.

4. ರೈತರ ಜೊತೆ ಚರ್ಚೆಗೆ ಸಿದ್ಧ ಎಂದ ಕೃಷಿ ಸಚಿವ
ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಸರ್ಕಾರ ಚರ್ಚೆಗೆ ಸಿದ್ಧವಿದೆ. ಆದರೆ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ದೇಶದ ಹಲವು ಕೃಷಿ ಸಂಘಟನೆಗಳು ಈ ಕಾಯ್ದೆಯನ್ನು ಬೆಂಬಲಿಸಿವೆ ಅಂತ ಪ್ರತಿಪಾದಿಸಿದ್ರು. ದೆಹಲಿ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಾನಿರತ ಕೃಷಿಕರ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ.

5. ಜೂನ್‌ನಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆ
ಕೊರೊನಾ ಎರಡನೇ ಅಲೆಯ ಹೊಡೆತದ ತೀವ್ರತೆ ಕೊನೆಗೂ ಕಡಿಮೆಯಾಗುತ್ತಿದೆ. ಮೇ ತಿಂಗಳಿನಲ್ಲಿ ಶೇಕಡಾ 11.9 ರಷ್ಟಿದ್ದ ನಿರುದ್ಯೋಗ ಪ್ರಮಾಣ ಜೂನ್‌ನಲ್ಲಿ ಶೇಕಡಾ 9.19ಕ್ಕೆ ಇಳಿಕೆಯಾಗಿದೆ ಎಂದು ಸಿಎಂಐಇ ವರದಿಯು ತಿಳಿಸಿದೆ. ಕಳೆದ ಮೂರು ವಾರಗಳಲ್ಲಿ ನಿರುದ್ಯೋಗ ದರ ಶೇ.8.9 ಶೇ.9.4ರ ಒಳಗಿತ್ತು. ಸರಾಸರಿ ದರ ಶೇ.8.9ರಷ್ಟಿತ್ತು. ಹೀಗಾಗಿ ಮೇ ತಿಂಗಳಿನ ಶೇ.11.9ರ ಸರಾಸರಿಗೆ ಹೋಲಿಸಿದರೆ ಇಳಿಕೆಯಾದಂತಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿಯ ಮುಖ್ಯಸ್ಥ ಮಹೇಶ್‌ ವ್ಯಾಸ್‌ ತಿಳಿಸಿದ್ದಾರೆ.

6. ನೂರು ದೇಶಗಳಲ್ಲಿ ಡೆಲ್ಟಾ ತಳಿ ಪತ್ತೆ
ಡೆಲ್ಟಾ ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ. ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದ್ದು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೊನಾ ತಳಿ ಎನಿಸಿಕೊಳ್ಳಲಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ಬೆನ್ನಲ್ಲೇ ಡೆಲ್ಟಾ ಪ್ಲಸ್‌ ಮಾರಣಾಂತಿಕ ಎನ್ನುವುದಕ್ಕೆ ಪುರಾವೆಗಳಿಲ್ಲ ಅಂತ ಏಮ್ಸ್‌ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಡೆಲ್ಟಾ ಪ್ಲಸ್‌ ರೂಪಾಂತರಿ ವೈರಾಣು ಅತಿ ಹೆಚ್ಚು ಪ್ರಮಾಣದಲ್ಲಿ ಸಾವಿಗೆ ಕಾರಣವಾಗುವ ಬಗ್ಗೆ ನಿಖರ ದಾಖಲೆಗಳಿಲ್ಲ. ಲಸಿಕೆಗಳ ನಿಯಂತ್ರಣಕ್ಕೂ ಸಿಗದೆಯೇ ರೂಪಾಂತರಿಗಳು ಪಾರಾಗುವ ಬಗ್ಗೆಯೂ ಸಾಕಷ್ಟು ಮಾಹಿತಿಗಳು ನಮ್ಮೆದುರಿಲ್ಲ ಅಂತ ಗುಲೇರಿಯಾ ಹೇಳಿದ್ದಾರೆ.

7. 5 ಲಕ್ಷದ ಚಿನ್ನದ ಮಾಸ್ಕ್​ ಧರಿಸಿದ ಗೋಲ್ಡನ್​ ಬಾಬಾ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಮನೋಜನಂದ ಮಹಾರಾಜ್​ ಎಂದು ಕರೆಯಲ್ಪಡುವ ಮನೋಜ್​ ಸೆಂಗಾರ್​ ಎಂಬ ವ್ಯಕ್ತಿ ಕೊರೊನಾದಿಂದ ರಕ್ಷಿಸಿಕೊಳ್ಳಲು 5 ಲಕ್ಷದ ಚಿನ್ನದ ಮಾಸ್ಕನ್ನು ಧರಿಸಿದ್ದಾರೆ. ಇನ್ನುಈ ಮಾಸ್ಕ್ ಅನ್ನು ಮೂರು ಚಿನ್ನದ ಲೇಪನಗಳಿಂದ ಮಾಡಲಾಗಿದ್ದು ಆಗಾಗ ಸ್ಯಾನಿಟೈಸರ್​ ಸಹ ಮಾಡಬಹುದು, ಅಲ್ಲದೆ 3 ವರ್ಷಗಳ ಈ ಚಿನ್ನದ ಮಾಸ್ಕ್​ ಕೆಲಸ ಬಳಕೆ ಮಾಡಬಹುದ ಅಂತಾ ಮನೋಜ್​​ ಸೆಂಗಾರ್​ ಹೇಳಿದ್ದಾರೆ. ಸದ್ಯ ಈತನ ಮಾಸ್ಕ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ.

8. ದೇಶದ ನಿಯಮಕ್ಕೆ ಬದ್ಧ ಎಂದ ‘ಕೂ’
ದೇಶದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿರುವ ಸಾಮಾಜಿಕ ಮಾಧ್ಯಮ ಕೂ ಇದೀಗ ಕಾಂಪ್ಲಿಯೆನ್ಸ್ ವರದಿಯನ್ನ ಪ್ರಕಟಿಸಿದೆ. ದೇಶದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನ ಅಳವಡಿಸಿಕೊಂಡು, ಮೊದಲ ಬಾರಿಗೆ ಕಾಂಪ್ಲಿಯೆನ್ಸ್​ ರಿಪೋರ್ಟ್​ ಸಲ್ಲಿಸಿದ ಹೆಗ್ಗಳಿಗೆ ಕೂ ಪಾತ್ರವಾಗಿದೆ. ನೂತನ ಐಟಿ ನಿಯಮಗಳ ಪ್ರಕಾರ.. ಸೋಶಿಯಲ್ ಮೀಡಿಯಾಗಳು ತಿಂಗಳಿಗೊಮ್ಮೆ ಪಾರದರ್ಶಕತೆಯನ್ನ ತೋರಿಸಬೇಕು. ತಿಂಗಳಿಗೆ ಎಷ್ಟು ದೂರುಗಳು ಬಂದಿವೆ, ಅಲ್ಲದೇ ಎಷ್ಟು ವಿವಾದಾತ್ಮಕ ಪೋಸ್ಟ್​ಗಳು ಪಬ್ಲಿಷ್​ ಆಗಿದ್ದವು. ಅನ್ನೋದ್ರ ವರದಿಯನ್ನ ನೀಡಬೇಕಾಗುತ್ತದೆ ಅದರಂತೆ ಕೂ, ಇಂದು ಜೂನ್ ತಿಂಗಳ ತೆಗೆದುಕೊಂಡಿರುವ ಕ್ರಮಗಳ ಕುರಿತ ವರದಿಯನ್ನ ಪ್ರಕಟಿಸಿದೆ.

9. ಟೋಕಿಯೋ ಒಲಿಂಪಿಕ್ಸ್​ಗೆ ಆಯ್ಕೆಯಾದ ಜಾಬಿರ್‌
ಭಾರತೀಯ ನೌಕಾಪಡೆಯ ಅಥ್ಲೀಟ್‌ ಎಂಪಿ ಜಾಬಿರ್‌ 400 ಮೀ. ಹರ್ಡಲ್ಸ್​ನಲ್ಲಿ ಟೋಕಿಯೋ ಒಲಿಂಪಿಕ್ಸ್​ಗೆ ಆಯ್ಕೆ ಆಗಿದ್ದಾರೆ. ಪಟಿಯಾಲದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್​ನಲ್ಲಿ ಜಾಬಿರ್‌ 49.78 ಸೆಂಕೆಂಡ್​ಗಳಲ್ಲಿ ಗುರಿ ತಲುಪಿದ್ದಾರೆ ಎಂದು ಭದ್ರತಾ ವಕ್ತಾರರು ತಿಳಿಸಿದ್ದಾರೆ. ವಿಶ್ವ ಱಂಕಿಂಗ್‌ ಕೋಟಾದಲ್ಲಿ ಒಟ್ಟು 14 ಸ್ಥಾನಗಳಿದ್ದು, ಇದರನ್ವಯ ಜಾಬಿರ್‌ ಆಯ್ಕೆಯಾಗಿದ್ದಾರೆ. ಜಾಬಿರ್‌ ವಿಶ್ವಮಟ್ಟದಲ್ಲಿ 34ನೇ ಸ್ಥಾನದಲ್ಲಿದ್ದಾರೆ.

10. ಧೋನಿ ಹುಟ್ಟುಹಬ್ಬದ ಡಿಪಿ ರಿಲೀಸ್ ಮಾಡಿದ ಕಿಚ್ಚ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಅದರಲ್ಲೂ ಎಂ.ಎಸ್ ಧೋನಿಯ ಅಪ್ಪಟ ಅಭಿಮಾನಿ. ಇದೀಗ ಧೋನಿ ಹುಟ್ಟುಹಬ್ಬ ಸಮೀಪಿಸುತ್ತಿದ್ದು, ಹೀಗಾಗಿ ಸುದೀಪ್, ವಿಶೇಷವಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಧೋನಿ ಹುಟ್ಟುಹಬ್ಬ ಕಾಮನ್ ಡಿಪಿಯನ್ನ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್ ಧೋನಿ ಕಾಮನ್ ಡಿಪಿ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ಅಂತ ವಿಷ್​​​ ಮಾಡಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link