ಚಾ. ನಗರ ದುರಂತಕ್ಕೆ 2 ತಿಂಗಳು: ಇಂದು ಕಾಂಗ್ರೆಸ್, ಎಸ್​ಡಿಪಿಐನಿಂದ ಪ್ರತಿಭಟನೆ

ಚಾ. ನಗರ ದುರಂತಕ್ಕೆ 2 ತಿಂಗಳು: ಇಂದು ಕಾಂಗ್ರೆಸ್, ಎಸ್​ಡಿಪಿಐನಿಂದ ಪ್ರತಿಭಟನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ಇಂದಿಗೆ ಎರಡು ತಿಂಗಳಾಗಿದ್ದು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಲಿದೆ.

ಜಿಲ್ಲಾಸ್ಪತ್ರೆಯ ಮುಂದೆ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದ್ದು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರೂ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಲಿದೆ.

ಇತ್ತ ಎಸ್​ಡಿಪಿಐ ಸಂಘಟನೆ ವತಿಯಿಂದಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆಯಂತೆ. ಘಟನೆ ಸಂಬಂಧ ಸರ್ಕಾರ ಇದುವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ.. ಹೀಗಾಗಿ ಪ್ರತಿಭಟನಾಕಾರರು ದುರಂತಕ್ಕೆ ಕಾರಣರಾದವರ ಮೇಲೆ ಕ್ರಮಕ್ಕೆ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.

The post ಚಾ. ನಗರ ದುರಂತಕ್ಕೆ 2 ತಿಂಗಳು: ಇಂದು ಕಾಂಗ್ರೆಸ್, ಎಸ್​ಡಿಪಿಐನಿಂದ ಪ್ರತಿಭಟನೆ appeared first on News First Kannada.

Source: newsfirstlive.com

Source link