ಮಹತ್ವದ ಸಭೆ ನಡೆಸಲಿದ್ದಾರಂತೆ ಜಾರಕಿಹೊಳಿ ಬ್ರದರ್ಸ್- ಕುತೂಹಲ ಕೆರಳಿಸಿದ ರಮೇಶ್ ನಡೆ

ಮಹತ್ವದ ಸಭೆ ನಡೆಸಲಿದ್ದಾರಂತೆ ಜಾರಕಿಹೊಳಿ ಬ್ರದರ್ಸ್- ಕುತೂಹಲ ಕೆರಳಿಸಿದ ರಮೇಶ್ ನಡೆ

ಬೆಳಗಾವಿ: ಇತ್ತೀಚೆಗೆ ಮತ್ತೆ ಸಿಎಂ ಯಡಿಯೂರಪ್ಪ ನೇತೃತ್ವದ ಸಂಪುಟ ಸೇರಲು ಭಾರೀ ಸರ್ಕಸ್​​ ನಡೆಸುತ್ತಿರುವ ಮಾಜಿ ಸಚಿವ ಮತ್ತು ಬಿಜೆಪಿ ಪ್ರಭಾವಿ ರಾಜಕಾರಣಿ ರಮೇಶ್​​ ಜಾರಕಿಹೊಳಿಯವರ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಜಾರಕಿಹೊಳಿ ಬ್ರದರ್ಸ್​​ ಜೊತೆಗಿನ ಸಮಾಲೋಚನೆ ಬಳಿಕ ರಮೇಶ್​ ಅವರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಭೇಟಿ ನಂತರ ಈಗ ಗೋಕಾಕ್​​​ಗೆ ತೆರಳಿ ತಮ್ಮ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಮತ್ತು ಸಂಬಂಧಿ ಅಂಬಿರಾವ್ ಪಾಟೀಲ್ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ರಮೇಶ್​​ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ. ನಿನ್ನೆ ಸಂಜೆ ಗೋಕಾಕ್ ತಲುಪಿರುವ ರಮೇಶ್ ಜಾರಕಿಹೊಳಿ ತನ್ನ ಸಹೋದರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ನಂತರ ಇನ್ನೆರಡು ದಿನಗಳಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಜಾರಕಿಹೊಳಿ ಬ್ರದರ್ಸ್ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

The post ಮಹತ್ವದ ಸಭೆ ನಡೆಸಲಿದ್ದಾರಂತೆ ಜಾರಕಿಹೊಳಿ ಬ್ರದರ್ಸ್- ಕುತೂಹಲ ಕೆರಳಿಸಿದ ರಮೇಶ್ ನಡೆ appeared first on News First Kannada.

Source: newsfirstlive.com

Source link