‘ನನ್ನ ಒಂದು ಮಾತು ಕೇಳಬಹುದಿತ್ತು’.. ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ?

‘ನನ್ನ ಒಂದು ಮಾತು ಕೇಳಬಹುದಿತ್ತು’.. ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ?

ಬೆಂಗಳೂರು: ಸಚಿವ ಶ್ರೀರಾಮುಲು ಆಪ್ತ ರಾಜಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ವೈ. ವಿಜಯೇಂದ್ರ ನಡೆಗೆ ಸಚಿವ ಶ್ರೀ ರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜಣ್ಣ ತಪ್ಪು ಮಾಡ್ತಿದ್ದಾನೆ ಅಂದ್ರೆ ನನ್ನ ಬಳಿ ಹೇಳಬಹುದಿತ್ತು.. ನಾನು ಅವನ ಮೇಲೆ ಕ್ರಮ ಕೈಗೊಳ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿದ್ದಾರೆ ಎಂದು ಈ ಬಗ್ಗೆ ಅಸಮಾಧಾನ ಶ್ರೀ ರಾಮುಲು ಹೊರಹಾಕಿದ್ದಾರೆ ಎನ್ನಲಾಗಿದೆ.

ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಈ ವಿದ್ಯಮಾನಗಳಿಂದ ಬೇಸರಗೊಂಡಿರೊ ಶ್ರೀ ರಾಮುಲು.. ನನ್ನ ಆಪ್ತ ಮೋಸ ಮಾಡ್ತಿದ್ರೆ, ಇಂಥ ಕೃತ್ಯಗಳಲ್ಲಿ ತೊಡಗಿದ್ರೆ ನನ್ನ ಗಮನಕ್ಕೆ ತರಬಹುದಿತ್ತು. ಇದರಲ್ಲಿ ನನ್ನ ತೇಜೋವಧೆಗೆ ಇಳಿದಿರಬಹುದು ಅನ್ನಿಸ್ತಿದೆ. ನನ್ನ ಆಪ್ತ ನನ್ನ ಆಪ್ತ ಅಂತಾ ಬಹಿರಂಗವಾಗಿ ಡ್ಯಾಮೇಜ್ ಮಾಡುವ ರೀತಿಯಿಂದ ಬೇಸತ್ತ ಶ್ರೀ ರಾಮುಲು ನಿನ್ನೆ ರಾತ್ರಿ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರಂತೆ.

The post ‘ನನ್ನ ಒಂದು ಮಾತು ಕೇಳಬಹುದಿತ್ತು’.. ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ? appeared first on News First Kannada.

Source: newsfirstlive.com

Source link