ಮತ್ತೆ ಕಾಣಿಸಿಕೊಂಡ ಪಾಕ್​ ಡ್ರೋನ್: BSF ಯೋಧರಿಂದ ಫೈರಿಂಗ್

ಮತ್ತೆ ಕಾಣಿಸಿಕೊಂಡ ಪಾಕ್​ ಡ್ರೋನ್: BSF ಯೋಧರಿಂದ ಫೈರಿಂಗ್

ಜಮ್ಮು ಕಾಶ್ಮೀರ: ಇತ್ತೀಚೆಗೆ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಇದೀಗ ಆರ್ನಿಯಾ ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಮತ್ತೆ ಡ್ರೋನ್ ಸಂಚಾರ ಕಂಡುಬಂದಿದೆ. ಡ್ರೋನ್​ ಕಂಡು ಎಚ್ಚೆತ್ತ ಗಡಿ ಭದ್ರತಾ ದಳದ ಸಿಬ್ಬಂದಿ ಡ್ರೋನ್​ನತ್ತ ಗುಂಡುಹಾರಿಸಿದ್ದಾರೆ.

ಡ್ರೋನ್​ಗೆ ಹಲವು ಸುತ್ತು ಗುಂಡುಹಾರಿಸಿದ್ದು ಡ್ರೋನ್ ವಾಪಸ್ಸಾಗಿದೆ ಎನ್ನಲಾಗಿದೆ. ಇಂದು ಮುಂಜಾನೆ ಸುಮಾರು 04:25 ರ ವೇಳೆಗೆ ಡ್ರೋನ್ ಕಂಡುಬಂದಿದೆ. ಡ್ರೋನ್ ಪಾಕಿಸ್ತಾನಕ್ಕೆ ಸೇರಿದ್ದು ಎನ್ನಲಾಗಿದ್ದು ಬಿಎಸ್​ಎಫ್ ಯೋಧರು ಗುಂಡುಹಾರಿಸಿದ ವೇಳೆ ವಾಪಸ್ಸಾಗಿದೆ. ಆರ್ನಿಯಾ ಸೆಕ್ಟರ್​ನ ಕಣ್ಗಾವಲಿಗಾಗಿ ಪಾಕ್​ ಇದನ್ನ ಬಳಸಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: IAF ಏರ್​ಪೋರ್ಟ್​ನಲ್ಲಿ ಸ್ಫೋಟ: ಬಾಂಬ್ ಎಸೆಯಲು ಫಸ್ಟ್​ ಟೈಂ ಡ್ರೋಣ್ ಬಳಸಿದ ಉಗ್ರರು

 

The post ಮತ್ತೆ ಕಾಣಿಸಿಕೊಂಡ ಪಾಕ್​ ಡ್ರೋನ್: BSF ಯೋಧರಿಂದ ಫೈರಿಂಗ್ appeared first on News First Kannada.

Source: newsfirstlive.com

Source link