ಕಳೆದ 4 ವಾರಗಳಿಂದ ಮತ್ತಷ್ಟು ಡೇಂಜರಸ್​ ಆಗ್ತಿದೆ ಡೆಲ್ಟಾ ವೇರಿಯಂಟ್​​.. ಯಾವ ದೇಶದಲ್ಲಿ ಎಷ್ಟು ಕೇಸ್​​?

ಕಳೆದ 4 ವಾರಗಳಿಂದ ಮತ್ತಷ್ಟು ಡೇಂಜರಸ್​ ಆಗ್ತಿದೆ ಡೆಲ್ಟಾ ವೇರಿಯಂಟ್​​.. ಯಾವ ದೇಶದಲ್ಲಿ ಎಷ್ಟು ಕೇಸ್​​?

ಕೊರೊನಾ ಸಂಕಷ್ಟದಿಂದ ಭಾರತದಿಂದ ಸೇರಿದಂತೆ ಹಲವು ದೇಶಗಳು ಈಗಷ್ಟೇ ಹೊರ ಬರುತ್ತಿದೆ. ಆದರೆ ಕೊರೊನಾ ಡೆಲ್ಟಾ ವೇರಿಯಂಟ್ ವೈರಸ್​​ ವೇಗವಾಗಿ ಹರಡಲು ಆರಂಭವಾಗಿದ್ದು, ಹಲವು ರಾಷ್ಟ್ರಗಳು ಸೋಂಕಿನ ನಿಯಂತ್ರಣಕ್ಕೆ ಪ್ರವಾಸಿಗರ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿವೆ.

ಹಾಂಕ್​​​ಕಾಂಗ್​, ಸ್ಪೇನ್​​, ಪೋರ್ಚುಗಲ್​ ದೇಶಗಳು ಯುಕೆಯಿಂದ ಬರುವ ಪ್ರಯಾಣಿಕರ ಮೇಲೆ ನಿನ್ನೆಯಷ್ಟೇ ನಿಷೇಧ ವಿಧಿಸಿವೆ. ಇತ್ತ ಜಮರ್ನಿ ಕಳೆದ ಶುಕ್ರವಾರವೇ ಪೋರ್ಚುಗಲ್​​​ನಿಂದ ಆಗಮಿಸುವ ಪ್ರಯಾಣಿಕರಿಗೆ ತಡೆ ನೀಡಿದೆ. ಇನ್ನು ರಷ್ಯಾದಿಂದ ಆಗಮಿಸುವವರಿಗೆ ಕ್ವಾರಂಟೀನ್ ಇರಲು ಸೂಚನೆ ನೀಡಿದೆ.

ಸದ್ಯ ಪೋರ್ಚುಗಲ್​​​ನಲ್ಲಿ ಡೆಲ್ಟಾ ಕೊರೊನಾ ವೈರಸ್​ನ ತೀವ್ರತೆ ಹೆಚ್ಚಾಗಿದ್ದು, ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ಪೋರ್ಚುಗಲ್​​ನಲ್ಲಿ ಬರೋಬ್ಬರಿ 616 ಡೆಲ್ಟಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿದೆ. ಇದುವರೆಗೂ ಡೆಲ್ಟಾ ವೈರಸ್​ ಸೋಂಕು ವಿಶ್ವದ 80ಕ್ಕೂ ಹೆಚ್ಚು ದೃಢವಾಗಿದೆ.

ಭಾರತ ಸೇರಿದಂತೆ ಯುಕೆ ಮತ್ತು ಯುಎಸ್​​ಗಳಲ್ಲಿ ಮೊದಲು ಕಂಡು ಬಂದ ಡೆಲ್ಟಾ ವೈರಸ್​​ ಕಳೆದ ನಾಲ್ಕು ವಾರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಭಾರತದಲ್ಲೂ ಸೋಂಕಿನ ಹರಡುವಿಕೆಯ ವೇಗ ಹೆಚ್ಚಾಗುತ್ತಿದೆ. ವಿಶ್ವದ ಯಾವ ಯಾವ ದೇಶಗಳಲ್ಲಿ ಡೆಲ್ಟಾ ಸೋಂಕಿನ ಪ್ರಮಾಣ ಹೇಗಿದೆ ಎಂದು ನೋಡುವುದಾದರೆ..

4 ವಾರಗಳ ಡೆಲ್ಟಾ ಸೋಂಕಿನ ಪ್ರಮಾಣ..

 • ಅಮೆರಿಕ; 39,438 ಪಾಸಿಟಿವ್ ಕೇಸ್​​.. ಶೇ.92.3
 • ಯುಕೆ; 1,472 ಪಾಸಿಟಿವ್ ಕೇಸ್.. ಶೇ.21.7
 • ಪೋರ್ಚುಗಲ್​​; 616 ಪಾಸಿಟಿವ್ ಕೇಸ್.. ಶೇ.56.0
 • ಜರ್ಮನಿ; 506 ಪಾಸಿಟಿವ್ ಕೇಸ್.. ಶೇ.12.5
 • ಸ್ಪೇನ್; 290 ಪಾಸಿಟಿವ್ ಕೇಸ್.. ಶೇ.21.8
 • ಸಿಂಗಾಪುರ; 265 ಪಾಸಿಟಿವ್ ಕೇಸ್.. ಶೇ.95.0
 • ಭಾರತ; 232 ಪಾಸಿಟಿವ್ ಕೇಸ್.. ಶೇ.98.3
 • ದಕ್ಷಿಣ ಆಫ್ರಿಕಾ; 232 ಪಾಸಿಟಿವ್ ಕೇಸ್ .. ಶೇ.42.9
 • ರಷ್ಯಾ; 226 ಪಾಸಿಟಿವ್ ಕೇಸ್.. ಶೇ.87.9
 • ಇಂಡೋಮೇಷಿಯಾ; 181 ಪಾಸಿಟಿವ್ ಕೇಸ್.. ಶೇ.87.4
 • ಉಗಾಂಡ; 34 ಪಾಸಿಟಿವ್ ಕೇಸ್.. ಶೇ.97.1

blank

The post ಕಳೆದ 4 ವಾರಗಳಿಂದ ಮತ್ತಷ್ಟು ಡೇಂಜರಸ್​ ಆಗ್ತಿದೆ ಡೆಲ್ಟಾ ವೇರಿಯಂಟ್​​.. ಯಾವ ದೇಶದಲ್ಲಿ ಎಷ್ಟು ಕೇಸ್​​? appeared first on News First Kannada.

Source: newsfirstlive.com

Source link