ಎಲ್ಲರೆದುರೇ ಅರವಿಂದ್‌ನ ಒಂದೊಂದೇ ತಪ್ಪು ಹೇಳಿದ ದಿವ್ಯಾ.. ಕೆ.ಪಿ.ಕಣ್ಣೀರು!

ಎಲ್ಲರೆದುರೇ ಅರವಿಂದ್‌ನ ಒಂದೊಂದೇ ತಪ್ಪು ಹೇಳಿದ ದಿವ್ಯಾ.. ಕೆ.ಪಿ.ಕಣ್ಣೀರು!

ಯಾವುದೇ ರಿಲೇಷನ್‌ಶಿಪ್ ಆಗ್ಬಹುದು. ಅದು ಫ್ರೆಂಡ್‌ಶಿಪ್ ಆಗಿರಲಿ, ಲವ್ವೇ ಆಗಿರಲಿ.. ಅಥವಾ ಮತ್ತೊಂದೇ ಆಗಿರಲಿ. ಒಮ್ಮೊಮ್ಮೆ ಹೀಗೂ ಆಗಿಬಿಡುತ್ತೆ. ಹೇಗಂದ್ರೆ, ತುಸು ಮುನಿಸು, ತುಸು ಕೋಪ, ತುಸು ಮನಸ್ತಾಪ. ಆದ್ರೆ, ಸ್ಟ್ರಾಂಗ್ ಅಲ್ಲ. ಆಗಾಗ ಬಂದು ಹೋಗೋ ಅಲೆಗಳ ಥರಾ. ಶಾಶ್ವತ ಅಲ್ಲ.. ಆದ್ರೆ, ರಿಯಲ್‌. ದಿವ್ಯಾ ಉರುಡುಗ ಹಾಗೂ ಕೆ.ಪಿ.ಅರವಿಂದ್‌ ನಡುವೆಯೂ ಹೀಗೇ ಆಗೋಯ್ತು.

ಅದ್ಯಾಕೋ ಏನೋ.. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಕೆ.ಪಿ.ಅರವಿಂದ್‌ ಮುಂಗೋಪ ಪ್ರದರ್ಶನವಾಗ್ತಿದೆ. ಮೊದಲಿದ್ದಷ್ಟು ಶಾಂತ ಮನಸ್ಥಿತಿ ಸ್ವಲ್ಪಮಟ್ಟಿಗೆ ಕಣ್ಮರೆಯಾಗಿದೆ. ಇದು ದಿವ್ಯಾ ಉರುಡುಗ ಮೇಲೂ ಪರಿಣಾಮ ಬೀರಿದೆ ಅನ್ನೋದು ಸುಳ್ಳಲ್ಲ ಬಿಡಿ. ಆರಂಭದ ದಿನಗಳಲ್ಲಿ ಟಾಸ್ಕ್‌ಗಳ ವಿಚಾರಕ್ಕೆ ದಿವ್ಯಾ ಕಣ್ಣೀರಿಟ್ಟಿದ್ದರು. ಅಲ್ಲಿಂದ ಯಾಕೋ ದಿವ್ಯಾ ಮಂಕಾಗಿದ್ದರು.

ಇದೆಲ್ಲಾ ಶುರುವಾಗಿದ್ದೇ ಥರಾಥರಾ ಟಾಸ್ಕ್‌ನಿಂದ. ಥರಾಥರಾ ಈ ಎತ್ತರ ಟಾಸ್ಕ್​ನಲ್ಲಿ ಮೊದಲ ಸುತ್ತನ್ನು ಅರವಿಂದ ತಂಡ ಗೆದ್ದಿತ್ತು. ಎರಡನೇ ಸುತ್ತಲ್ಲಿ ಟೈ ಆಯಿತು. ಇದು ಕ್ಯಾಪ್ಟನ್​ ಅರವಿಂದ ಮುನಿಸಿಗೆ ಕಾರಣವಾಗಿತ್ತು. ಅರವಿಂದ ಟಾಸ್ಕ್​ ಪ್ರಾಪರ್ಟಿ ತರಲು ಹೋಗಿ ಸ್ಟೋ ರೂಂನಲ್ಲಿಯೇ ಸಿಕ್ಕಾಕಿಕೊಳ್ಳುತ್ತಾರೆ. ಇದರಿಂದ ಟಾಸ್ಕ್​ ಟೈ ಆಗುತ್ತದೆ. ನಂತರ ಹೊರ ಬಂದ ಅರವಿಂದ ತಂಡದ ಸದಸ್ಯರಿಗೆ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಏನೇ ಸಮಾಜಾಯಿಷಿ ಕೊಟ್ಟರೂ, ಅವರ ಕೋಪ ಮಾತ್ರ ತಣ್ಣಗಾಗೋದಿಲ್ಲ. ಇತ್ತ ಅವರನ್ನು ಸಮಾಧಾನ ಮಾಡಲು ಬಂದ ದಿವ್ಯಾ ಅವರು ಭಾವುಕರಾಗಿ ಕಣ್ಣೀರಿಡುತ್ತಾರೆ. ನಂತರ ಅರವಿಂದ್‌ ದಿವ್ಯಾ ಸಮಾಧಾನ ಮಾಡಿದರು. ಆದ್ರೆ, ದಿವ್ಯಾ ಮನಸ್ಸಿಗೆ ಸ್ವಲ್ಪಮಟ್ಟಿಗೆ ಘಾಸಿಯಾಗಿದ್ದು ಸುಳ್ಳಲ್ಲ.

ಇದೊಂದೇ ಅಲ್ಲ, ನಿಧಿ ಸುಬ್ಬಯ್ಯಗೆ ಸ್ವಲ್ಪ ಮುಚ್ಚು ಅಂತಾ ಅರವಿಂದ್ ಹೇಳಿದ್ದು ದಿವ್ಯಾ ಉರುಡುಗಾಗೆ ಕೊಂಚವೂ ಇಷ್ಟ ಆಗಿಲ್ಲ. ಆ ಜಾಗದಲ್ಲಿ ನಾನೇ ಇದ್ದಿದ್ದರೂ ನಾನು ಆ ಮಾತನ್ನ ಒಪ್ಪಿಕೊಳ್ಳುತ್ತಿರಲಿಲ್ಲ ಅಂತಾ ನಿನ್ನೆ ಅಸಮಾಧಾನ ಹೊರಹಾಕಿದರು. ಇದಕ್ಕೂ ಟಾಸ್ಕೇ ಕಾರಣವಾಗಿತ್ತು.

ನಿನ್ನೆಯ ಚೆಂಡು ಟಾಸ್ಕ್‌ನಲ್ಲಿ ಬಾಲನ್ನ ಎರಡು ಸೆಕೆಂಡ್‌ ರಂಧ್ರದಲ್ಲಿಯೇ ಇರಿಸಿಕೊಳ್ಳಬೇಕಿತ್ತು. ಆದ್ರೆ, ಶಮಂತ್‌ ಹಾಗೂ ಅರವಿಂದ್ ಈ ಕಡೆ ಗಮನ ಕೊಟ್ಟಿರಲಿಲ್ಲ. ದಿವ್ಯಾ ಹಲವು ಬಾರಿ ಹೇಳಿದರೂ ಅರವಿಂದ್ ತಲೆಕೆಡಿಸಿಕೊಳ್ಳಲಿಲ್ಲ. ಅವರಿವರದ್ದು ಕೇಳ್ಬೇಡಿ ನೀವು ಆರಾಮಾಗಿ ಆಡಿ ಅಂತಾ ಕೋಪದಲ್ಲೇ ಹೇಳ್ತಾರೆ. ಕೊನೆಗೆ ಏನಾಯ್ತು ಅಂದ್ರೆ.. ಅರವಿಂದ್ 175 ಪಾಯಿಂಟ್ ಪಡೆದಿದ್ದರೂ ಸೋತರು. ಮಂಜು ಟೀಮ್‌ 133 ಪಾಯಿಂಟ್ಸ್ ಪಡೆದು ಗೆದ್ದರು. ಕಾರಣ 2 ಸೆಕೆಂಡ್‌ ಬಾಲ್‌ನ ರಂಧ್ರದಲ್ಲಿ ಇರಿಸದಿದ್ದದ್ದು. ಇದನ್ನ ದಿವ್ಯಾ ಒತ್ತಿ ಒತ್ತಿ ಹೇಳಿದ್ದರು.

ಈ ಗೇಮ್ ಆದ್ಮೇಲೆ ಕೊನೆಗೂ ಅರವಿಂದ್ ಹಾಗೂ ಟೀಮ್ ಸದಸ್ಯರ ಮುಂದೆ ತಮ್ಮ ಅಸಮಾಧಾನ ಹೊರ ಹಾಕಿಯೇ ಬಿಟ್ಟರು.
‘ಟಾಸ್ಕ್ ಅಂತಾ ತೆಗೆದುಕೊಂಡರೆ ನೀವು ಹೇಳಿದ್ದು ಕರೆಕ್ಟ್‌ ಕಾನ್ಫಿಡೆನ್ಸ್ ಇಲ್ಲ ಅಂದ್ರೆ ಹೇಗೇ ಆಡೋದು ಅಂತಾ. ಹಾಗಂತಾ ಮಂಜುಗೂ ಎಲ್ಲಾ ಹಾಡು ಗೊತ್ತಿತ್ತಾ ? ಇಲ್ಲಾ. ಇದು ವೈಯಕ್ತಿಕ ಆಟವಲ್ಲ ಗ್ರೂಪ್‌ಗೋಸ್ಕರ ಆಡಿದ್ದು. ರಾಂಗ್‌ ಪ್ರೆಸ್ ಆಗಿ ತಪ್ಪಾಗಿದ್ದಿದ್ರೆ ಮೈನಸ್‌ ಪಾಯಿಂಟ್ ಆಗಿದ್ದ್ದಿದ್ರೆ ನಿಮ್ಮ ಪಾಯಿಂಟ್ ಕರೆಕ್ಟ್. ಆದ್ರೆ, ಮೈನಸ್ ಪಾಯಿಂಟ್ಸ್ ಆಗ್ತಿರಲಿಲ್ಲ. ತಪ್ಪಾಗಿದ್ರೆ ಅವರಿಗೆ ಶಿಫ್ಟ್ ಆಗಿತ್ತು ಅಷ್ಟೇ.

ಇಲ್ಲಾಂದ್ರೆ ನಮಗೆ ಪಾಯಿಂಟ್ಸ್ ಸಿಕ್ತಿತ್ತು. ಇದು ನನಗೆ ಬೇಜಾರ್ ಆಯ್ತು. ಇನ್ನೊಂದು ನಿಧಿ ಮಿಸ್ ಆಗಿ ಮಾತನಾಡಿದ್ಲು ನಾನು ಕ್ಯಾಪ್ಟನ್ ಹತ್ತಿರ ಮಾತನಾಡ್ತಿದ್ದೇನೆ ನೀವು ಮುಚ್ಕೊಂಡು ಇರು ಅಂತಾ ಹೇಳಿದ್ದು, ಒಂದು ವೇಳೆ ಮಂಜು ನನಗೆ ಹೇಳಿದ್ರೆ ನಾನು ಅದನ್ನ ತೆಗೆದುಕೊಳ್ಳಲ್ಲ. ಟೀಮ್ ಅವರಾಗಿ ನೀವು ಸುಮ್ಮನಿರ್ತಿದ್ರೋ ಏನೋ ಆದ್ರೆ ನನ್ನ ಕೈಯಲ್ಲಿ ತೆಗೆದುಕೊಳ್ಳೋಕೆ ಆಗ್ತಿರಲಿಲ್ಲ. ಅದು ನನಗೆ ತಪ್ಪು ಅಂತಾ ಅನಿಸಿತು. ನೀವೆಲ್ಲಾ ಸಜೆಷನ್ ಹೇಳ್ತಿದ್ದೀರಾ ಅಂದ್ರೆ ಟೀಮ್ ಒಳ್ಳೆದಕ್ಕೆ ಹೇಳ್ತಿದ್ದೀರಾ ಅಂತಾ ಅರ್ಥ. ಅದನ್ನ ಒಂಚೂರು ಪರಿಗಣಿಸಬಹುದಿತ್ತು. ಹೀಗೇ ಮಾಡಿದ್ದಿದ್ರೆ ಎಲ್ಲಾ ಗೇಮ್ ನಾವು ಗೆಲ್ಲಬಹುದಿತ್ತು.’ ಅಂತಾ ದಿವ್ಯಾ ತಮ್ಮ ಅಸಮಾಧಾನವನ್ನ ಎಲ್ಲರ ಸಮ್ಮುಖದಲ್ಲಿಯೇ ಹೇಳಿಬಿಟ್ಟರು.

ಇದೆಲ್ಲಾ ಕೇಳಿಸಿಕೊಂಡ ಅರವಿಂದ್‌ ಕಣ್ಣೀರಿಟ್ಟರು. ನಂತರ ದಿವ್ಯಾ ಉರುಡುಗ ಅರವಿಂದ್‌ನ ಸಮಾಧಾನ ಮಾಡಿದರು. ಕೊನೆಗೆ ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಂತೆ ಇಬ್ಬರು ಡ್ಯಾನ್ಸ್ ಕೂಡ ಮಾಡಿದರು. ನಂತರ ಮನಸ್ಸಿನಲ್ಲಿದ್ದ ಎಲ್ಲಾ ಮನಸ್ತಾಪ, ಅಸಮಾಧಾನ ತಣ್ಣಗಾಯ್ತು. ಕಣ್ಣೀರಿಟ್ಟು ಅರವಿಂದ್ ನಿರಾಳರಾದರು, ಎಲ್ಲಾವನ್ನೂ ಹೇಳಿ ದಿವ್ಯಾ ಮನಸ್ಸನ್ನ ಹಗುರ ಮಾಡಿಕೊಂಡರು.

The post ಎಲ್ಲರೆದುರೇ ಅರವಿಂದ್‌ನ ಒಂದೊಂದೇ ತಪ್ಪು ಹೇಳಿದ ದಿವ್ಯಾ.. ಕೆ.ಪಿ.ಕಣ್ಣೀರು! appeared first on News First Kannada.

Source: newsfirstlive.com

Source link