ದಾದಾ ನಿವೃತ್ತಿ ಬಳಿಕ ಯುವಿ ಕರಿಯರ್ ಮಂಕು- ಯುವರಾಜ್​ ಬೆನ್ನಿಗೆ ನಿಲ್ಲಲಿಲ್ವಾ ನಂತರದ ನಾಯಕ?

ದಾದಾ ನಿವೃತ್ತಿ ಬಳಿಕ ಯುವಿ ಕರಿಯರ್ ಮಂಕು- ಯುವರಾಜ್​ ಬೆನ್ನಿಗೆ ನಿಲ್ಲಲಿಲ್ವಾ ನಂತರದ ನಾಯಕ?

ಯುವರಾಜ್ ಸಿಂಗ್, ವಿಶ್ವ ಕ್ರಿಕೆಟ್​ನ ಸಿಕ್ಸರ್​ ಕಿಂಗ್. ಭಾರತೀಯ ಕ್ರಿಕೆಟ್​​ನ ಯುವರಾಜ. ಟಿ20, ಏಕದಿನ ವಿಶ್ವಕಪ್ ಗೆಲುವಿನ ಹೀರೋ, ಟೀಮ್ ಇಂಡಿಯಾ ಸಕ್ಸಸ್​ ಹಿಂದೆ ಈತನ ಪಾಲು ದೊಡ್ಡದಿದೆ. ಆದ್ರೆ ಈತ ಸಕ್ಸಸ್​​ಫುಲ್ ಕ್ರಿಕೆಟರ್​ ಎನಿಸಿದರೂ, ಟೆಸ್ಟ್​ ಕ್ರಿಕೆಟ್​​ನಲ್ಲಿ ಮಾತ್ರ ಈತ ನತದೃಷ್ಟ ಆಟಗಾರ​.

ಟಿ-ಟ್ವೆಂಟಿ ಕ್ರಿಕೆಟ್​​ನ ಶ್ರೇಷ್ಠ ಆಟಗಾರರನ್ನ ಪಟ್ಟಿ ಮಾಡಿದ್ರೆ, ಯುವರಾಜ್ ಸಿಂಗ್ ಹೆಸರು ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತೆ. ಸುಮಾರು ಒಂದು ದಶಕದ ಕಾಲ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಟ್ರಂಪ್ ಕಾರ್ಡ್ ಆಗಿದ್ದ ಯುವಿ, ಏಕದಿನ, ಟಿ20 ಕ್ರಿಕೆಟ್​ನಲ್ಲಿ, ಸಿಡಿಲಬ್ಬರದ ಬ್ಯಾಟಿಂಗ್​​ನಿಂದಲೇ ಗುರುತಿಸಿಕೊಂಡವರು.

blank

ಬೌಲಿಂಗ್, ಫೀಲ್ಡಿಂಗ್​​​ನೊಂದಿಗೆ ಕಮಾಲ್ ಮಾಡ್ತಿದ್ದ ಯುವರಾಜ್, ಟೀಮ್ ಇಂಡಿಯಾ ಪಾಲಿಗೆ ಎವರ್​​ಗ್ರೀನ್ ಹೀರೋ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವೇ, ಇದಕ್ಕೆ ಕಾರಣ..! ಯುವರಾಜ್ ತೆರೆಮರೆಗೆ ಸರಿದ ಬಳಿಕ, ಇದುವರೆಗೂ ಯುವಿಗೆ ಸೂಕ್ತ ಉತ್ತರಾಧಿಕಾರಿಯೇ ಸಿಕ್ಕಿಲ್ಲ.. ಹೀಗೆ ಟೀಮ್ ಇಂಡಿಯಾದ ಯಶಸ್ವಿ ಕ್ರಿಕೆಟರ್ ಆಗಿರುವ ಪಂಜಾಬ್​​ ಕಾ ಪುತ್ತರ್​, ನತದೃಷ್ಟ ಕ್ರಿಕೆಟರ್​​ ಅಂದ್ರೆ ತಪ್ಪಾಗೋದಿಲ್ಲ.

ಹೌದು, ಶಾರ್ಟರ್​ ಫಾರ್ಮೆಟ್​ನಲ್ಲಿ ಯಶಸ್ವಿ ಕ್ರಿಕೆಟರ್ ಆಗಿದ್ದ ಸಿಕ್ಸರ್​ ಕಿಂಗ್, ಟೆಸ್ಟ್ ಕ್ರಿಕೆಟ್​​ ವಿಚಾರಕ್ಕೆ ಬಂದರೆ ನತದೃಷ್ಟರಲ್ಲಿ ನತದೃಷ್ಟ..! ಯುವಿಯ ಜರ್ಸಿ ನಂಬರ್​​ನಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ ಈತ, ಆಡೋ ಹನ್ನೋಂದರಲ್ಲಿ ಕಾಣಿಸಿಕೊಳ್ಳೋ ಬದಲು, 12TH ಮ್ಯಾನ್ ಆಗಿದ್ದೇ ಹೆಚ್ಚು.

ಯುವರಾಜ್ ಸಿಂಗ್ ಬ್ಯಾಕ್​​​ಅಪ್ ಆಟಗಾರನಾಗಿದ್ದೆ ಹೆಚ್ಚು!
2003ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಯುವಿ, ಒಂದು ದಶಕದಲ್ಲಿ ಆಡಿದ್ದು ಕೇವಲ 40 ಟೆಸ್ಟ್​ ಪಂದ್ಯಗಳನ್ನ ಮಾತ್ರ. 1900 ರನ್ ಗಳಿಸಿರುವ ಯುವರಾಜ್ ಸಿಂಗ್, ಹೆಚ್ಚು ಬ್ಯಾಟ್​ ಬೀಸಿರೋದು 6ನೇ ಕ್ರಮಾಂಕದಲ್ಲಿ ಮೂರು ಶತಕ, 11 ಅರ್ಧಶತಕ ದಾಖಲಿಸಿರುವ ಯುವಿ, ತಾನು ಸಿಡಿಸಿದ ಮೂರೂ ಶತಕಗಳು​​ ಪಾಕ್ ವಿರುದ್ಧವೇ ಆಗಿರೋದು ವಿಶೇಷ.!

ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಈ 40 ಪಂದ್ಯಗಳಲ್ಲಿ ಬಹುಪಾಲು ಆಡಿರೋದು ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲೇ. ಗಂಗೂಲಿ ಅಲಭ್ಯರಾಗಿದ್ದಾಗ, ಸಚಿನ್ ತೆಂಡುಲ್ಕರ್​​​ ಇಂಜುರಿಯಾಗಿದ್ದಾಗ, ದ್ರಾವಿಡ್ ಓಪನರ್ ಆಗಿ ಆಡಿದ್ದಾಗ, ಲಕ್ಷಣ್​ ಅನುಪಸ್ಥಿತಿ ಕಾಡಿದಾಗ ಮಾತ್ರವೇ, ಯುವರಾಜ್ ಪ್ಲೇಯಿಂಗ್​ ಇಲವೆನ್​​ನಲ್ಲಿ ಕಾಣಿಸಿಕೊಂಡಿದ್ದರು.

blank

ಆಟಗಾರರ ಅನುಪಸ್ಥಿತಿ ಯುವಿ ಆಡಿದ ಪಂದ್ಯಗಳು
ಆಟಗಾರ                   ಪಂದ್ಯ
ಗಂಗೂಲಿ                    28
ಸಚಿನ್                       05
ದ್ರಾವಿಡ್                    04
ಲಕ್ಷ್ಮಣ್                      02
ಪಾರ್ಥಿವ್ ಪಟೇಲ್     01

ಸೌರವ್​ ಗಂಗೂಲಿ ಅನುಪಸ್ಥಿಯಲ್ಲಿ 28 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್​ಗೆ ಇಂಜುರಿ ಕಾಡಿದ್ದಾಗ, 5 ಪಂದ್ಯಗಳಲ್ಲಿ ಬ್ಯಾಕ್ ಆಪ್ ಆಗಿ ಬ್ಯಾಟ್​ ಬೀಸಿದ್ದರು. ಇನ್ನು ರಾಹುಲ್ ದ್ರಾವಿಡ್ ಆರಂಭಿಕರಾಗಿ ಕಣಕ್ಕಿಳಿದಾಗ, 4 ಪಂದ್ಯಗಳಲ್ಲಿ ಯುವಿಗೆ ಅವಕಾಶ ಒಲಿದಿತ್ತು. ಲಕ್ಷ್ಮಣ್ ಅನುಪಸ್ಥಿತಿಯಲ್ಲಿ 2 ಪಂದ್ಯ ಮತ್ತು ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಇನ್ನಿಂಗ್ಸ್​ ಆರಂಭಿಸಿದ್ದಾಗ ಒಂದು ಪಂದ್ಯದಲ್ಲಿ, ಅವಕಾಶ ಗಿಟ್ಟಿಸಿದ್ದರು.

ಸಚಿನ್, ರಾಹುಲ್ ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್, ಸೌರವ್​ ಗಂಗೂಲಿ ತಂಡದಲ್ಲಿದ್ದ ಕಾರಣ, ಟೆಸ್ಟ್​ ತಂಡದ ಪ್ರತಿಯೊಂದು ಸ್ಲಾಟ್​ಗೂ ಪರ್ಫೆಕ್ಟ್​ ಟೀಮ್ ಕಾಂಬಿನೇಷನ್ ಫಿಕ್ಸ್ ಆಗಿತ್ತು. ಈ ವೇಳೆ ತಂಡದಲ್ಲಿ ಸ್ಥಾನ ಪಡೆಯೋದು ಯುವರಾಜ್​ ಸಿಂಗ್​ಗೆ ಕಷ್ಟ ಸಾಧ್ಯವಾಗ್ತಿತ್ತು. ಆದ್ರೆ ಸಿಕ್ಕ ಅಲ್ಪ ಅವಕಾಶಗಳಲ್ಲಿ ಯುವರಾಜ್ ಸಿಂಗ್, 6ನೇ ಕ್ರಮಾಂಕದಲ್ಲಿ ಅದ್ಬುತ ಪ್ರದರ್ಶನವನ್ನೇ ನೀಡಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಇತರೆ ಆಟಗಾರರ ಅಂಕಿಅಂಶಗನ್ನ ಗಮನಿಸಿದ್ರೆ, ಯುವರಾಜ್ ಬೆಸ್ಟ್ ಪರ್ಫಾರ್ಮರ್​ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.

blank

6ನೇ ಕ್ರಮಾಂಕದಲ್ಲಿ ಯುವರಾಜ್!
ಅವಧಿ          ಇನ್ನಿಂಗ್ಸ್​          ರನ್​
ಯುವರಾಜ್      2003-12        44                 1484
ಲಕ್ಷ್ಮಣ್             2003-11        36                 1477
ರೈನಾ                2010-12        22                   701
ಗಂಗೂಲಿ          2003-08         19                  577
ಧೋನಿ             2006-11         11                 518

ಗಂಗೂಲಿ ನಿವೃತ್ತಿ ಬಳಿಕ ಯುವಿ ಟೆಸ್ಟ್ ಕರಿಯರ್ ಖತಂ!
ಗಂಗೂಲಿ ನಿವೃತ್ತಿ ನಂತರ, 2008ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಯುವಿ ಸಜ್ಜಾಗಿದ್ದರು. ಹಿಂದಿನ ಏಕದಿನ ಸರಣಿಯ ಪ್ರದರ್ಶನದ ಕಾರಣ, 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವ ಅವಕಾಶ ಪಡೆದ ಯುವಿ, ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಟೆಸ್ಟ್ ನಲ್ಲೇ ಅಜೇಯ 85 ರನ್ ಸಿಡಿಸಿದರು. ಇದು ತಂಡದ ಗೆಲುವಿಗೂ ಕಾರಣವಾಯ್ತು. ಇನ್ನೇನು ಯುವರಾಜ್ ಸಿಂಗ್ ಟೆಸ್ಟ್​ ಕರಿಯರ್ ಶೈನ್​ ಆಗ್ತಿದೆ ಎಂಬ ಮಾತುಗಳು ಕೇಳಿ ಬರುವಾಗಲೇ, ಬರ ಸಿಡಿಲು ಬಡಿದಿತ್ತು.

blank

ಯುವಿ ಮೇಲೆ ಕರುಣೆ ತೋರಲಿಲ್ವಾ ನಂತರದ ನಾಯಕ!
2010ರಲ್ಲಿ ಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ್ದ ಯುವರಾಜ್, ನಂತರ ಇಂಜುರಿ ಕಾರಣ 2ನೇ ಟೆಸ್ಟ್​ನಿಂದ ಹೊರಗೆ ಉಳಿಯಬೇಕಾಯ್ತು. ಈ ವೇಳೆ ಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ ಸುರೇಶ್ ರೈನಾ, ಚೊಚ್ಚಲ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿದರು.. ಹೀಗಾಗಿ ಧೋನಿ, ಸುರೇಶ್​ ರೈನಾರನ್ನೇ ಮುಂದುವರಿಸಿದ್ದರು. ಇದು ಯುವರಾಜ್ ಪಾಲಿಗೆ ದುರಾದೃಷ್ಟವೇ ಆಗಿತ್ತು.

ಗಂಗೂಲಿ ನಿವೃತ್ತಿ ಬಳಿಕ 6ನೇ ಕ್ರಮಾಂಕದಲ್ಲಿ!
ಇನ್ನಿಂಗ್ಸ್​           ರನ್
ಯುವರಾಜ್      23                 800
ಸುರೇಶ್​ ರೈನಾ   22                 701
ವಿರಾಟ್ ಕೊಹ್ಲಿ  09                 404

ಒಟ್ಟಿನಲ್ಲಿ ಶಾರ್ಟರ್​ ಫಾರ್ಮೆಟ್​ನಲ್ಲಿ ಮಿಂಚಿದ ಯುವರಾಜ್,​ ಟೆಸ್ಟ್​ ಕ್ರಿಕೆಟ್​ನ ಪ್ರಮುಖ ಘಟ್ಟದಲ್ಲೇ ಬೆಂಚ್​​ಗೆ ಸೀಮಿತಗೊಂಡಿದ್ದು ವಿಪರ್ಯಾಸವೇ ಸರಿ.

The post ದಾದಾ ನಿವೃತ್ತಿ ಬಳಿಕ ಯುವಿ ಕರಿಯರ್ ಮಂಕು- ಯುವರಾಜ್​ ಬೆನ್ನಿಗೆ ನಿಲ್ಲಲಿಲ್ವಾ ನಂತರದ ನಾಯಕ? appeared first on News First Kannada.

Source: newsfirstlive.com

Source link