ಡೆಲ್ಟಾ ವೇರಿಯಂಟ್​ಗೆ ಜಾನ್ಸನ್ & ಜಾನ್ಸನ್ ರಾಮಬಾಣ: ಡೇಟಾ ಹೇಳೋದೇನು..?

ಡೆಲ್ಟಾ ವೇರಿಯಂಟ್​ಗೆ ಜಾನ್ಸನ್ & ಜಾನ್ಸನ್ ರಾಮಬಾಣ: ಡೇಟಾ ಹೇಳೋದೇನು..?

ನವದೆಹಲಿ: ವಿಶ್ವದಲ್ಲೆಡೆ ಮಾರಕ ಕೋವಿಡ್​​-19 ಡೆಲ್ಟಾ ಪ್ಲಸ್ ರೂಪಾಂತರಿಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಭಾರತದಲ್ಲಂತೂ ಇದುವರೆಗೂ ನೂರಕ್ಕೂ ಹೆಚ್ಚು ಕೇಸ್​​ ಪತ್ತೆಯಾಗಿವೆ. ಇದರ ಕುರಿತು ಎನ್​​ಸಿಡಿಸಿ ಸೇರಿದಂತೆ ನೂರಾರು ಸಂಸ್ಥೆಗಳು ವಿಶ್ವದಲ್ಲಿ ಅಧ್ಯಯನದಲ್ಲಿ ತೊಡಗಿವೆ.

ಹೀಗಿರುವಾಗಲೇ ಜಾನ್ಸನ್ ಮತ್ತು ಜಾನ್ಸನ್ ಸಂಸ್ಥೆಯೂ ಲಸಿಕೆ ಪಡೆದವರ ಕುರಿತು ಡೇಟಾ ಬಿಡುಗಡೆ ಮಾಡಿದೆ. ಇದುವರೆಗೂ ಕೋವಿಡ್​​-19 ಡೆಲ್ಟಾ ಪ್ಲಸ್ ಪತ್ತೆಯಾದ ರೋಗಿಗಳಿಗೆ ನೀಡಲಾದ ಒಟ್ಟು ಲಸಿಕೆ ಕುರಿತಾದ ಡಾಟಾ ಇದಾಗಿದೆ. ಅದರಲ್ಲೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎನ್ನುವುದರ ಬಗ್ಗೆ ವಿವರಿಸಲಾಗಿದೆ.

ಅಮೆರಿಕಾವೊಂದರಲ್ಲೇ ಸುಮಾರು 11 ಮಿಲಿಯನ್​​ ಮಂದಿಗೆ ಜಾನ್ಸನ್ ಮತ್ತು ಜಾನ್ಸನ್ ಲಸಿಕೆ ನೀಡಲಾಗಿದೆಯಂತೆ. ಈ ಲಸಿಕೆಯು ತುಂಬಾ ಪರಿಣಾಮಕಾರಿ ಹಾಗೂ ಇಂತಹ ಗಂಭೀರ ಕಾಯಿಲೆಗಳಿಗೆ ಉತ್ತಮ ಮದ್ದು ಎನ್ನಲಾಗಿದೆ. ಈ ರೀತಿಯ ವೈರಸ್​​ಗಳ ವಿರುದ್ಧ ಹೋರಾಡಲು ಜಾನ್ಸನ್ ಅಂಡ್ ಜಾನ್ಸನ್ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದ ಜನರಲ್ಲಿ ಸುಮಾರು ಎಂಟು ತಿಂಗಳವರೆಗೂ ರೋಗನಿರೋಧಕ ಶಕ್ತಿ ಹೋರಾಟ ನಡೆಸಿರುವುದು ಕಂಡುಬಂದಿದೆ ಎನ್ನಲಾಗಿದೆ.

The post ಡೆಲ್ಟಾ ವೇರಿಯಂಟ್​ಗೆ ಜಾನ್ಸನ್ & ಜಾನ್ಸನ್ ರಾಮಬಾಣ: ಡೇಟಾ ಹೇಳೋದೇನು..? appeared first on News First Kannada.

Source: newsfirstlive.com

Source link