ಬಳ್ಳಾರಿಯಲ್ಲಿ ಇನ್ನೂ ನಿಂತಿಲ್ಲ ಕೊರೊನಾ ಅಬ್ಬರ: ಕಳೆದ 20 ದಿನಗಳಲ್ಲಿ 179 ಮಂದಿ ಬಲಿ

ಬಳ್ಳಾರಿಯಲ್ಲಿ ಇನ್ನೂ ನಿಂತಿಲ್ಲ ಕೊರೊನಾ ಅಬ್ಬರ: ಕಳೆದ 20 ದಿನಗಳಲ್ಲಿ 179 ಮಂದಿ ಬಲಿ

ಬಳ್ಳಾರಿ: ಜಿಲ್ಲೆಯಲ್ಲಿ ಮಾರಕ ಕೊರೊನಾ ವೈರಸ್​ ಆರ್ಭಟ ಜೋರಾಗಿದೆ. ಜಿಲ್ಲೆಯೊಂದಲ್ಲೇ ಪ್ರತಿನಿತ್ಯ ಸುಮಾರು 30 ಕೋವಿಡ್​​ ಕೇಸ್​ಗಳು ಪತ್ತೆಯಾಗುತ್ತಿವೆ. ಜೊತೆಗೆ 8-10 ಜನ ಈ ಕೋವಿಡ್​​ಗೆ ಅಸುನೀಗುತ್ತಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ 21 ದಿನಗಳಲ್ಲಿ 179 ಜನ ಹೆಮ್ಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಜಿಲ್ಲಾಡಳಿತ ಜೂನ್​​​ ತಿಂಗಳ 20 ದಿನಗಳಲ್ಲಿ ಸಂಭವಿಸಿದ ಸೋಂಕಿತರ ಸಾವಿನ ಕುರಿತಾಗಿ ಬಿಡುಗಡೆಗೊಳಿಸಿದ ವರದಿಯಲ್ಲಿ ಈ ಭಯಾನಕ ಅಂಶ ಹೊರಬಿದ್ದಿದೆ.

ಇನ್ನು, ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್​ಗೆ ಬಲಿಯಾದವರ ಸಂಖ್ಯೆ 1,613. ಸದ್ಯ 604 ಸಕ್ರಿಯ ಪ್ರಕರಣಗಳು ಇವೆ. ದಿನದಿಂದ ದಿನಕ್ಕೆ ಡೆತ್ ರೇಟಿಂಗ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

The post ಬಳ್ಳಾರಿಯಲ್ಲಿ ಇನ್ನೂ ನಿಂತಿಲ್ಲ ಕೊರೊನಾ ಅಬ್ಬರ: ಕಳೆದ 20 ದಿನಗಳಲ್ಲಿ 179 ಮಂದಿ ಬಲಿ appeared first on News First Kannada.

Source: newsfirstlive.com

Source link