ದೂರವಾಯ್ತಾ ಮುನಿಸು..? ಪ್ರಧಾನಿ ಮೋದಿಗೆ ಸ್ಪೆಷಲ್ ಮಾವಿನ ಹಣ್ಣು ಕಳುಹಿಸಿದ ದೀದಿ

ದೂರವಾಯ್ತಾ ಮುನಿಸು..? ಪ್ರಧಾನಿ ಮೋದಿಗೆ ಸ್ಪೆಷಲ್ ಮಾವಿನ ಹಣ್ಣು ಕಳುಹಿಸಿದ ದೀದಿ

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರಿಗೆ ಬಂಗಾಳದಲ್ಲಿ ಸಿಗುವ ವಿಶೇಷ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.

2011ರಲ್ಲಿ ಆರಂಭದಲ್ಲಿ ಸಂಪ್ರಾದಾಯವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರು, ಹಿಮ್ಸಾಗರ್, ಮಾಲ್ಡಾ ಮತ್ತು ಲಕ್ಷ್ಮನ್‌ಭೋಗ್ ತಳಿಯ ಮಾವಿನ ಹಣ್ಣುಗಳನ್ನು ಗಿಫ್ಟ್​ ನೀಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆಸಿದ್ದ ಟಿಎಂಸಿ ಹಾಗೂ ಬಿಜೆಪಿ ಪಕ್ಷಗಳ ಪರ ಇಬ್ಬರೂ ನಾಯಕರು ಬಿರುಸಿನ ಪ್ರಚಾರ ನಡೆಸಿ, ಪರಸ್ಪರ ವಾಗ್ದಾಳಿಯನ್ನು ನಡೆಸಿದ್ದರು. ಮತ್ತೆ ಸಿಎಂ ಆಗಿ ಮಮತಾ ಬ್ಯಾನರ್ಜಿ ಆಯ್ಕೆಯಾದ ಬಳಿಕ ಇಬ್ಬರ ನಡುವಿನ ಮುನಿಸು ಮುಂದುವರಿದಿತ್ತು. ಇದರ ನಡುವೆಯೇ ಮಮತಾ ಮಾವಿನ ಹಣ್ಣುಗಳನ್ನು ಗಿಫ್ಟ್ ನೀಡಿದ್ದಾರೆ.

ಅಂದಹಾಗೆ ಪ್ರಧಾನಿ ಮೋದಿ ಮಾತ್ರವಲ್ಲದೇ. ರಾಷ್ಟ್ರಪತಿ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್​​, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೂ ಮಮತಾ ಬ್ಯಾನರ್ಜಿ ಅವರು ಮಾವಿನ ಹಣ್ಣು ಗಿಫ್ಟ್​ ನೀಡಿದ್ದಾರೆ.

2019ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ ಅವರು, ಮಮತಾ ಬ್ಯಾನರ್ಜಿ ಅವರು ನನಗೆ ಪ್ರತಿ ವರ್ಷ ಕುರ್ತಾಗಳನ್ನು ಗಿಫ್ಟ್ ನೀಡುತ್ತಾರೆ. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ವರ್ಷಕ್ಕೆ ಒಮ್ಮೆ ಅಥವಾ ಎರಡು ಭಾರೀ ಸಿಹಿ ಕಳುಹಿಸುತ್ತಾರೆ ಎಂದು ಹೇಳಿದ್ದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ದೀದಿ, ನಾನು ಇಂತಹ ಗಿಫ್ಟ್​​​ಗಳನ್ನು ಎಲ್ಲರಿಗೂ ಕಳುಹಿಸುತ್ತೇನೆ. ಇದು ಬಂಗಾಳದ ಸಂಸ್ಕೃತಿಯ ಒಂದು ಭಾಗ ಎಂದಿದ್ದರು.

The post ದೂರವಾಯ್ತಾ ಮುನಿಸು..? ಪ್ರಧಾನಿ ಮೋದಿಗೆ ಸ್ಪೆಷಲ್ ಮಾವಿನ ಹಣ್ಣು ಕಳುಹಿಸಿದ ದೀದಿ appeared first on News First Kannada.

Source: newsfirstlive.com

Source link