ಕೊಹ್ಲಿ ಬಾಯ್ಸ್​ ಕಾಲೆಳೆದ ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು..?

ಕೊಹ್ಲಿ ಬಾಯ್ಸ್​ ಕಾಲೆಳೆದ ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು..?

ಕೊನೆಗೂ ಇಂಗ್ಲೆಂಡ್​​ ನೆಲದಲ್ಲಿ ದಿಟ್ಟವಾಗಿ ಹೋರಾಡೋ ಭಾರತದ ಒಂದು ತಂಡ ಸಿಕ್ಕಿದೆಯಂತೆ. ಅದು ಕೊಹ್ಲಿ ಪಡೆಯಲ್ಲ ಬದಲಾಗಿ ಮಿಥಾಲಿ ರಾಜ್​ ನೇತೃತ್ವದ ಮಹಿಳಾ ಪಡೆಯಂತೆ. ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಮೈಕಲ್​ ವಾನ್​ ಹೀಗೆ ಹೇಳಿದ್ದೇಕೆ? ಕೊಹ್ಲಿ ಪಡೆಗೆ ಆಂಗ್ಲರ ನಾಡಲ್ಲಿ ಹೋರಾಡೋ ಸಾಮರ್ಥ್ಯವಿಲ್ವಾ? ಈ ಕುರಿತ ಒಂದು ಸ್ಪೆಷಲ್​ ರಿಪೋರ್ಟ್​ ಇಲ್ಲಿದೆ….

ಇಂಗ್ಲೆಂಡ್​​ ವಿರುದ್ಧದ ಸರಣಿಗಾಗಿ ಟೀಮ್​ ಇಂಡಿಯಾ ಪುರುಷರ ಹಾಗೂ ಮಹಿಳೆಯರ ತಂಡ ಆಂಗ್ಲರ ನಾಡಲ್ಲಿ ಬೀಡು ಬಿಟ್ಟಿದೆ. ಏಕೈಕ ಟೆಸ್ಟ್​ ಸರಣಿಯಲ್ಲಿ ಡ್ರಾ ಸಾಧಿಸಿದ ಮಿಥಾಲಿ ರಾಜ್​ ನೇತೃತ್ವದ ವನಿತೆಯರ ಪಡೆ, ಏಕದಿನ ಸರಣಿತ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಪಂದ್ಯದಲ್ಲಿ ಮಿಥಾಲಿ ರಾಜ್​ ಪಡೆ ಸೋಲುಂಡರೂ ತೋರಿದ ದಿಟ್ಟ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಂಗ್ಲೆಂಡ್​ನಲ್ಲಿ ಭಾರತ ವನಿತೆಯರ ಹೋರಾಟ
ಕೊಹ್ಲಿ ಪಡೆಗೆ ಮೈಕಲ್ ​ವಾನ್​ ಪರೋಕ್ಷ ಟಾಂಗ್​

ಏಕೈಕ ಟೆಸ್ಟ್​ ಪಂದ್ಯದ ಮೊದಲ 3 ದಿನದ ಆಟ ನೋಡಿ, ಟೀಮ್​ ಇಂಡಿಯಾ ವನಿತೆಯರ ಪಡೆ ಸೋಲುಂಡಿತು ಎಂದೇ ಹಲವರು ಅಂದುಕೊಂಡಿದ್ರು. ಆದ್ರೆ ಉಳಿದ 2 ದಿನಗಳಲ್ಲಿ ನಡೆಸಿದ ವಿರೋಚಿತ ಹೋರಾಟದ ಫಲವಾಗಿ, ಪಂದ್ಯ ಅಚ್ಚರಿಯ ರೀತಿಯಲ್ಲಿ ಡ್ರಾನಲ್ಲಿ ಅಂತ್ಯವಾಯ್ತು. ನಂತರ ನಡೆದ 2 ಏಕದಿನ ಪಂದ್ಯಗಳೂ ವನಿತೆಯರ ಹೋರಾಟಕ್ಕೆ ಸಾಕ್ಷಿಯಾದ್ವು. ಇದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಇದನ್ನೇ ಉಲ್ಲೇಖಿಸಿ ಇಂಗ್ಲೆಂಡ್​​ ಮಾಜಿ ಕ್ರಿಕೆಟಿಗ ಮೈಕಲ್​ ವಾನ್​ ಮಾಡಿರುವ ಟ್ವೀಟ್​, ಇದೀಗ ಹಾಟ್​ ಸಬ್ಜೆಕ್ಟ್​​​ ಆಗಿ ಮಾರ್ಪಟ್ಟಿದೆ.

blank

‘ಒಂದು ಭಾರತೀಯ ತಂಡವಾದ್ರೂ ಆಡ್ತಿದೆ’
‘ಭಾರತೀಯ ಮಹಿಳೆಯರ ತಂಡ ಇಂದು ಅಮೋಘ ಪ್ರದರ್ಶನವನ್ನ ನೀಡಿತು..ಕನಿಷ್ಟ ಒಂದು ಭಾರತೀಯ ತಂಡವಾದ್ರೂ, ಇಂಗ್ಲೆಂಡ್​ ವಾತಾವರಣದಲ್ಲಿ ಆಡಬಲ್ಲದು ಅನ್ನೋದನ್ನ ನೋಡೋದಕ್ಕೆ ಖುಷಿಯಾಗುತ್ತದೆ’’

ಮೈಕಲ್​ ವಾನ್​, ಇಂಗ್ಲೆಂಡ್​ ಮಾಜಿ ಕ್ರಿಕೆಟಿ

ಯೆಸ್​​..! ಮೈಕಲ್​ ವಾನ್​ ಮಾಡಿರುವ ಇದೇ ಟ್ವೀಟ್​​ ಇದೀಗ ಚರ್ಚೆಗೆ ಕಾರಣವಾಗಿದೆ. ವನಿತೆಯರ ತಂಡದ ಹೋರಾಟದ ಮನೋಭಾವವನ್ನ ಹೊಗಳಿರುವ ವಾನ್​, ಇಂಗ್ಲೆಂಡ್ ವಾತಾವರಣದಲ್ಲಿ ಭಾರತೀಯ ಪುರುಷರ ತಂಡ ಆಡಲ್ಲ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಇದನ್ನ ಟೆಸ್ಟ್​​ ಚಾಂಪಿಯನ್​​ ಶಿಪ್​ ಫೈನಲ್​ನಲ್ಲಿ ನೀರಸ ಪ್ರದರ್ಶನ ನೀಡಿದ​ ಪುರುಷರ ತಂಡಕ್ಕೆ, ವಾನ್​ ನೀಡಿರುವ ಟಾಂಗ್​ ಎಂದೇ ಹೇಳಲಾಗ್ತಿದೆ. ಒಂದರ್ಥದಲ್ಲಿ ವಾನ್​ ಹೇಳಿಕೆ ಸರಿಯಾಗಿಯೇ ಇದೆ. ಇತಿಹಾಸ ಕೂಡ ಆಂಗ್ಲರ ನಾಡಲ್ಲಿ ಟೀಮ್​ ಇಂಡಿಯಾ ಡಮ್ಮಿ ಅನ್ನೋದನ್ನ ಸಾರಿ ಹೇಳ್ತಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆದ್ದೇ ಗೆಲ್ತೀವಿ ಎಂಬ ಅಪಾರ ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್​ ಫ್ಲೈಟ್​​ ಹತ್ತಿದ ಟೀಮ್​ ಇಂಡಿಯಾ, ಎಡವಿದ ತಾಜಾ ಉದಾಹರಣೆ ಎದುರಲ್ಲೇ ಇದೆ. ಪಂದ್ಯದಲ್ಲಿ ಸ್ವಲ್ಪ ಮಟ್ಟಿನ ಹೋರಾಟದ ಮನೋಭಾವ ತೋರಿದ್ರೂ, ಟೀಮ್​ ಇಂಡಿಯಾಗೆ ಡ್ರಾ ಸಾಧಿಸಬಹುದಾದ ಅವಕಾಶವಿತ್ತು. ಆದ್ರೆ, ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ನ್ಯೂಜಿಲೆಂಡ್​ ಬೌಲರ್​​ಗಳನ್ನ ದಿಟ್ಟವಾಗಿ ಎದುರಿಸುವ ಗೋಜಿಗೆ ಹೋಗಲಿಲ್ಲ.

blank

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಮಾತ್ರವಲ್ಲ. 2018ರ ಇಂಗ್ಲೆಂಡ್​ ಪ್ರವಾಸವೂ ಟೀಮ್​ ಇಂಡಿಯಾದ ಕಳಪೆ​ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಆಡಿದ 5 ಪಂದ್ಯಗಳ ಟೆಸ್ಟ್​ನಲ್ಲಿ ಗೆದ್ದಿದ್ದು, ಕೇವಲ 1 ಮಾತ್ರ. ಬ್ಯಾಟಿಂಗ್​ನಲ್ಲಿ ವಿರಾಟ್​ ಕೊಹ್ಲಿ , ಬೌಲಿಂಗ್​ನಲ್ಲಿ ಇಶಾಂತ್​ ಶರ್ಮಾ ಹೊರತುಪಡಿಸಿದ್ರೆ, ಉಳಿದೆಲ್ಲಾ ಆಟಗಾರರದ್ದೂ ಕಂಪ್ಲೀಟ್​ ಪ್ಲಾಫ್​ ಷೋ.

2014ರಲ್ಲಿ ಪ್ರವಾಸ ಕೈಗೊಂಡಾಗಲೂ ಭಾರತ ಸರಣಿ ಸೋಲಿಗೆ ಗುರಿಯಾಗಿತ್ತು. ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ಸು ಕಂಡ ಭಾರತ, 2ನೇ ಪಂದ್ಯವನ್ನ ಗೆದ್ದಿತ್ತು. ಆದ್ರೆ ನಂತರದ 3 ಪಂದ್ಯಗಳಲ್ಲಿ ಆಂಗ್ಲರಿಗೆ ಶರಣಾಗಿತ್ತು. ಅದರಲ್ಲೂ ಕೊನೆಯ 2 ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಅನುಭವಿಸಿದ್ದು, ಇನ್ನಿಂಗ್ಸ್​ ಸೋಲು.

ಇಷ್ಟೇ ಅಲ್ಲ, ಇತಿಹಾಸದಲ್ಲೇ ಇಂಗ್ಲೆಂಡ್​​ ವಿರುದ್ಧ ಈವರೆಗೆ ಆಡಿದ 62 ಟೆಸ್ಟ್​ ಪಂದ್ಯಗಳಲ್ಲಿ ಗೆದ್ದಿರೋದು, ಕೇವಲ 7 ಪಂದ್ಯಗಳಲ್ಲಿ ಮಾತ್ರ ಅಂದ್ರೆ ನೀವು ನಂಬಲೇಬೇಕು.

ಇಂಗ್ಲೆಂಡ್​ನಲ್ಲಿ ಭಾರತದ ಟೆಸ್ಟ್​ ಸಾಧನೆ
ಪಂದ್ಯ      –    62
ಗೆಲುವು    –   07
ಸೋಲು   –    34
ಡ್ರಾ         –   21

ಇಂಗ್ಲೆಂಡ್​​ನಲ್ಲಿ ಈವರೆಗೆ 62 ಟೆಸ್ಟ್​ ಪಂದ್ಯಗಳನ್ನಾಡಿರುವ ಭಾರತ 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 34 ಪಂದ್ಯಗಳಲ್ಲಿ ಸೋಲುಂಡಿದ್ರೆ, 21 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇತಿಹಾಸವನ್ನ ಗಮನಿಸಿದ್ರೆ ಟೀಮ್​ ಇಂಡಿಯಾ ಗೆದ್ದಿದ್ದಕ್ಕಿಂತ ಆಂಗ್ಲರ ನಾಡಲ್ಲಿ ಸೋತಿರೋದೇ ಹೆಚ್ಚು..! ಈ ಸೋಲಿನ ಟ್ರ್ಯಾಕ್​​ ರೆಕಾರ್ಡ್​ ನಡುವೆಯೇ ಮತ್ತೊಂದು ಅಗ್ನಿ ಪರೀಕ್ಷೆಗೆ ಕೊಹ್ಲಿ ಪಡೆ ಸಜ್ಜಾಗ್ತಿದೆ. ಈ ಬಾರಿಯಾದ್ರೂ ಟೀಮ್​ ಇಂಡಿಯಾಗೆ ಸರಣಿ ಗೆದ್ದು ಬೀಗುತ್ತಾ..? ಕಾದು ನೋಡಬೇಕಿದೆ.

The post ಕೊಹ್ಲಿ ಬಾಯ್ಸ್​ ಕಾಲೆಳೆದ ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು..? appeared first on News First Kannada.

Source: newsfirstlive.com

Source link