ಒಂಟಿ ಮಹಿಳೆಗೆ ಟೇಪ್​​ ಸುತ್ತಿ ದರೋಡೆ- ಟೇಪ್​ ಕೊಟ್ಟ ಕ್ಲ್ಯೂನಿಂದಲೇ ಆರೋಪಿಗಳು ಅಂದರ್

ಒಂಟಿ ಮಹಿಳೆಗೆ ಟೇಪ್​​ ಸುತ್ತಿ ದರೋಡೆ- ಟೇಪ್​ ಕೊಟ್ಟ ಕ್ಲ್ಯೂನಿಂದಲೇ ಆರೋಪಿಗಳು ಅಂದರ್

ಇದು ಒಂದು ಟೇಪ್​ನ ಕಥೆ.. ಆ ಒಂದೇ ಒಂದು ಟೇಪ್​ ಅರೋಪಿಗಳನ್ನು ಹಿಡಿದು ಖಾಕಿ ಕೆಡ್ಡಾಕ್ಕೆ ಕೆಡವಿದೆ, ಆ ಟೇಪ್​ನಿಂದ ಜಸ್ಟ್​ ಒಂದೇ ಒಂದು ದಿನದಲ್ಲಿ ದರೋಡೆಕೋರರು ಪೊಲೀಸರ ಅತಿಥಿಯಾಗಿದ್ದಾರೆ. ಹೌದು ಇದೇನಿದು ಟೇಪ್​ನ ಕಥೆ ಅಂತೀರಾ ಈ ಸ್ಟೋರಿ ಓದಿ..

ಇತ್ತೀಚಿಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಕಿಚನ್​ನಲ್ಲಿದ್ದ ಜಯಶ್ರೀ ಎಂಬ ಒಂಟಿ ಮಹಿಳೆಯ ಮೇಲೆ ಅಟ್ಯಾಕ್​ ಮಾಡಿ ಬಾಯಿಗೆ ಟೇಪ್​ ಹಾಕಿ ದರೋಡೆ ಮಾಡಿದ ಪ್ರಕರಣವೊಂದು ದಾಖಲಾಗಿತ್ತು. ಟೇಪ್​ ಕೊಟ್ಟ ಕ್ಲ್ಯೂನಿಂದ ಆರೋಪಿಗಳು ಜಸ್ಟ್​ ಒಂದೇ ದಿನದಲ್ಲಿ ಅಂದರ್​ ಆಗಿದ್ದಾರೆ

ಅಷ್ಟಕ್ಕೂ ನಡೆದದ್ದಾದ್ರೂ ಏನು.?

ಜಯಶ್ರೀ ಅವರ ಮಗ ಅಮೆರಿಕಾದಲ್ಲಿ ನೆಲೆಸಿದ್ದು ಕೆಳಗಡೆ ಖಾಲಿ ಇರುವ ಮನೆಯನ್ನು ಅರವಿಂದ್​ ಎಂಬಾತನಿಗೆ ಬಾಡಿಗೆ ನೀಡಿದ್ದರು. ಮುಂದೆ ಆತನೇ ಇವರಿಗೆ ಮುಳುವಾಗುತ್ತಾನೆ ಎಂದು ಅವರು ಅಂದುಕೊಡಿರಲಿಲ್ಲ. ಅಂದು ಬೆಳಿಗ್ಗೆ ಜಯಶ್ರೀ ಪತಿ ದಿನನಿತ್ಯದಂತೆ ಬೆಳಿಗ್ಗೆ ವಾಕಿಂಗ್​ ಹೋಗಿದ್ದಾರೆ. ಇದನ್ನರಿತ ಅರವಿಂದ್​ ತನ್ನ ಸಹೋದರನಿಗೆ ಮಾಹಿತಿ ನೀಡಿದ್ದಾನೆ. ಈ ಸಮಯದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಜಯಶ್ರೀ ಅವರ ಮೇಲೆ ಇವರಿಬ್ಬರೂ ದಾಳಿ ಮಾಡಿ ಬಾಯಿಗೆ ಟೇಪ್​ ಹಾಕಿ ದರೋಡೆ ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಿರದ ಈ ಆಸಾಮಿಗಳು ಡೌಟ್ ಬರದಂತೆ ಮಾಡಲು ತಾವೇ ಖುದ್ದು ಜಯಶ್ರೀ ಪತಿಗೆ ಕಾಲ್​ ಮಾಡಿ ದರೋಡೆ ನಡೆದಿರುವ ಕುರಿತು ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ಬಂದ ಜಯಶ್ರೀ ಪತಿ ಸುಭಾಷ ದರೋಡೆಯಾಗಿರುವದನ್ನು ಕಂಡು ಪೊಲೀಸರಿಗೆ ದೂರು ನೀಡುತ್ತಾರೆ.

blank

ಪ್ರಕರಣಕ್ಕೆ ಟ್ವಿಸ್ಟ್​ ನೀಡಿದ ಟೇಪ್​..

ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನ ಆರಂಭಿಸಿದ ಪೊಲೀಸರು ಮೊದಲು ಸುತ್ತಿದ ಟೇಪ್​ ಮತ್ತು ಮನೆಯ ಸುತ್ತಮುತ್ತ ಇರುವ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ ಅರವಿಂದ ಮತ್ತು ಅವಿನಾಶ್​ ಮನೆಯ ಕಾರ್ನರ್​ ಬಳಿ ಮೂರು ಸಲ ಭೇಟಿಯಾಗಿದ್ದು ಕಂಡು ಬಂದಿದೆ. ಪೊಲೀಸರಿಗೆ ಇಲ್ಲೇ ಅನುಮಾನ ಶುರುವಾಗಿದ್ದು. ತನಿಖೆ ಆರಂಭಿಸಿದ ಪೊಲೀಸರು ಕಾರ್ನರ್​ನಲ್ಲಿ ಮಾತನಾಡಿಸಿದ ವ್ಯಕ್ತಿ ಯಾರೆಂದು ಕೇಳಿದಾಗ ಅರವಿಂದ್​ನನ್ನು ಕೇಳಿದಾಗ, ಆತ ನನ್ನ ಸಹೋದರ ಬಸವನಗುಡಿಯಿಂದ ನನ್ನ ಮಾತನಾಡಿಸಲು ದಿನಾ ಬರುತ್ತಾನೆ ಎಂದು ಹೇಳಿದ್ದಾನೆ.

ಯಾರೂ ಸುಮ್ಮನೇ ಅಷ್ಟು ದೂರದಿಂದ ಮಾತನಾಡಿಸಲು ಬರುವುದಿಲ್ಲ ಮತ್ತು ಕಾರ್ನರ್​ನಲ್ಲಿ ನಿಂತು ಯಾಕೆ ಮಾತಾಡುತ್ತಾರೆ ಎಂದು ಅನುಮಾನ ವ್ಯಕ್ತಪಡಿಸದ ಪೊಲೀಸರು, ದಿಢೀರನೆ ಅರವಿಂದ್​ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ಬಟ್ಟೆಗೆ ಸುತ್ತಿದ್ದ ಟೇಪ್​ ಪತ್ತೆಯಾಗಿದೆ, ಇದನ್ನು ವಶಪಡಿಸಿಕೊಂಡ ಪೊಲೀಸರು ಅರವಿಂದ್​ ಮನೆಯಲ್ಲಿ ಸಿಕ್ಕ ಟೇಪ್​ಗೂ ಜಯಶ್ರೀ ಬಾಯಿಗೆ ಹಾಕಿದ ಟೇಪ್​ಗೂ ತಾಳೆ ಮಾಡಿದಾಗ ಆರೋಪಿ ಪಕ್ಕಾ ಅಂದರ್​ ಆಗಿದ್ದಾನೆ. ಒಂದು ಮಗುವಿನ ತಂದೆಯಾಗಿರುವ ಅರವಿಂದ್​ ತನ್ನ ಪತಿ ದರೋಡೆಕೋರ ಎಂದು ತಿಳಿದು ಶಾಕ್​​ಗೆ ಒಳಗಾಗಿ ಡಿಪ್ರೆಷನ್​ಗೆ ಹೋಗಿದ್ದು, ಸದ್ಯ ಬೇರೆ ಮನಗೆ ಶಿಫ್ಟ್ ಆಗಲು ಯೋಚಿಸುತ್ತಿದ್ದಾರೆ ಅಂತ ನ್ಯೂಸ್​ ಫಸ್ಟ್​ಗೆ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

The post ಒಂಟಿ ಮಹಿಳೆಗೆ ಟೇಪ್​​ ಸುತ್ತಿ ದರೋಡೆ- ಟೇಪ್​ ಕೊಟ್ಟ ಕ್ಲ್ಯೂನಿಂದಲೇ ಆರೋಪಿಗಳು ಅಂದರ್ appeared first on News First Kannada.

Source: newsfirstlive.com

Source link