WTC ಫೈನಲ್​ನ ಜಡೇಜಾ ಆಟಕ್ಕೆ ಟೀಕೆ-ಟಿಪ್ಪಣಿ.. ಆದ್ರು ಇಂಗ್ಲೆಂಡ್​ ಬೇಕೆ ಬೇಕು ಎಡಗೈ ಸ್ಪಿನ್ನರ್!

WTC ಫೈನಲ್​ನ ಜಡೇಜಾ ಆಟಕ್ಕೆ ಟೀಕೆ-ಟಿಪ್ಪಣಿ.. ಆದ್ರು ಇಂಗ್ಲೆಂಡ್​ ಬೇಕೆ ಬೇಕು ಎಡಗೈ ಸ್ಪಿನ್ನರ್!

ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಸೋಲಿನ ಬಳಿಕ ಪ್ಲೇಯಿಂಗ್​ ಇಲೆವೆನ್​ನಲ್ಲಿ, ರವೀಂದ್ರ ಜಡೇಜಾಗೆ ಸ್ಥಾನ ನೀಡಿದ ವಿಚಾರ ತೀವ್ರ ಚರ್ಚೆಗೆ ಕಾರಣವಾಯ್ತು. ಮುಂಬರುವ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಾದ್ರೂ ಜಡೇಜಾರನ್ನ ಕೈ ಬಿಡಬೇಕು ಎಂದು ಈಗಾಗಲೇ ಹಲವರು ಸಲಹೆ ನೀಡ್ತಿದ್ದಾರೆ. ಯಾರು ಏನೇ ಹೇಳಿದ್ರೂ ಜಡೇಜಾ ಆಡೋ 11ರ ಬಳದಲ್ಲಿ ಇರಲೇಬೇಕು. ಯಾವ ಕಾರಣಕ್ಕಾಗಿ..? ಇಲ್ಲಿದೆ ನೋಡಿ ಡಿಟೇಲ್ಸ್​​..

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ಪರಾಮರ್ಷೆಗಳು ಇನ್ನೂ ನಿಂತಿಲ್ಲ. ಫೈನಲ್​ ಪಂದ್ಯಕ್ಕೆ ತಂಡವನ್ನ ಆಯ್ಕೆ ಮಾಡಿದ ವಿಚಾರವಂತೂ ಇನ್ನೂ ಹಾಟ್​ ಸಬ್ಜೆಕ್ಟ್​ ಆಗೇ ಉಳಿದಿದೆ. ಅದರಲ್ಲೂ ಜಡೇಜಾರನ್ನ ಪ್ಲೇಯಿಂಗ್​ ಇಲೆವೆನ್​ಗೆ ಆಯ್ಕೆ ಮಾಡಿದ ವಿಚಾರವೂ ಪರ-ವಿರೋಧಕ್ಕೆ ಕಾರಣವಾಗಿದೆ. ಸೋಲಿನ ಬಳಿಕ ಈ ಬಗ್ಗೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ ಹಾಲಿ ವಿಶ್ಲೇಷಕ ಸಂಜಯ್​ ಮಂಜ್ರೇಕರ್​ ಜಡೇಜಾ ಆಯ್ಕೆಯೇ ಅನಗತ್ಯವಾಗಿತ್ತು ಎಂಬರ್ಥದ ಹೇಳಿಕೆ ನೀಡಿದ್ರು.

blank

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಈಗ​ ಮುಗಿದ ಅಧ್ಯಾಯ. ಇದೀಗ ಎಲ್ಲರ ಚಿತ್ತ ಮುಂಬರು ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯತ್ತ ನೆಟ್ಟಿದೆ. ಇಲ್ಲೂ ಜಡೇಜಾ ಆಯ್ಕೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಜಡ್ಡು ಸ್ಥಾನದಲ್ಲಿ ಹನುಮ ವಿಹಾರಿಗೆ ಅವಕಾಶ ನೀಡಬೇಕು ಅನ್ನೋದು ಹಲವರ ವಾದವಾಗಿದೆ. ಆದ್ರೆ ತಂಡದ X-ಫ್ಯಾಕ್ಟರ್​ ಪ್ಲೇಯರ್ ಜಡೇಜಾರನ್ನ ಪ್ಲೇಯಿಂಗ್​ ಇಲೆವೆನ್​ನಿಂದ ಕೈ ಬಿಡೋದು, ಅಷ್ಟು ಸುಲಭದ ಮಾತಲ್ಲ.

ಜಡ್ಡುಗಿದೆ ಜೊತೆಯಾಟಕ್ಕೆ ಬ್ರೇಕ್​ ಹಾಕೋ ಸಾಮರ್ಥ್ಯ.!
ಸೌರಾಷ್ಟ್ರದ ಆಲ್​ರೌಂಡರ್​​ಗಿರೋ ಬಿಗ್ಗೆಸ್ಟ್​ ಸ್ಟ್ರೆಂಥ್​​ ಇದು. ಬೌಲಿಂಗ್​ನಲ್ಲಿ ವೇರಿಷಯಶನ್​ ಸ್ಪೆಲ್​ಗಳನ್ನ ಮಾಡಬಲ್ಲ ಲೆಫ್ಟ್​ ಆರ್ಮ್​ ಸ್ಪಿನ್ನರ್​​ ಬಿಗ್​ ಹಿಟ್​​ಗಳನ್ನ ಮಾಡಲು ಅವಕಾಶವನ್ನ ನೀಡಲ್ಲ. ಆಗ ಸಹಜವಾಗಿಯೇ ಒತ್ತಡಕ್ಕೆ ಒಳಗಾಗುವ ಬ್ಯಾಟ್ಸ್​ಮನ್​ಗಳು ರಿಸ್ಕಿ ಶಾಟ್​​ ಪ್ಲೇ ಮಾಡಿ ರನ್​ ಕಲೆ ಹಾಕಲು ಮುಂದಾಗ್ತಾರೆ. ಇದನ್ನ ಅಡ್ವಾಂಟೇಜ್​ ಆಗಿ ತೆಗೆದುಕೊಳ್ಳುವ ಜಡ್ಡು, ತಂಡಕ್ಕೆ ಬ್ರೇಕ್​ ಥ್ರೂ ನೀಡಿದ ಅದೇಷ್ಟೋ ಉದಾಹರಣೆಗಳಿವೆ.

ರೈಟ್​​ ಹ್ಯಾಂಡ್​​ ಬ್ಯಾಟ್ಸ್​ಮನ್​ಗಳಿಗೆ ಜಡೇಜಾ ವಿಲನ್
ಒಬ್ಬ ಸ್ಪಿನ್ನರ್​ ಆಗಿ ಜಡೇಜಾ ಹೆಚ್ಚು ಸಕ್ಸಸ್​ ಕಂಡಿರೋದು ರೈಟ್ ಹ್ಯಾಂಡ್​​ ಬ್ಯಾಟರ್ಸ್​​ಗಳ ವಿರುದ್ಧ. ಈವರೆಗೆ ಟೆಸ್ಟ್​ ಮಾದರಿಯಲ್ಲಿ ಜಡೇಜಾ ಕಬಳಿಸಿರುವ 221 ವಿಕೆಟ್​​ಗಳ ಪೈಕಿ 148 ವಿಕೆಟ್​​ಗಳು ರೈಟ್​​ ಹ್ಯಾಂಡ್​​ ಬ್ಯಾಟ್ಸ್​ಮನ್​ಗಳದ್ದೇ ಆಗಿದೆ. ಇಂಗ್ಲೆಂಡ್​ ಬ್ಯಾಟಿಂಗ್​ ಲೈನ್​ ಅಪ್​ನಲ್ಲೂ ಬಲಗೈ ಬ್ಯಾಟ್ಸ್​ಮನ್​ಗಳೇ ಇರೋದ್ರಿಂದ ಜಡ್ಡು ಅವಶ್ಯಕತೆ ತಂಡಕ್ಕಿದೆ.

blank

ಟೇಲೆಂಡರ್ಸ್​​ಗಳನ್ನೂ ಕಾಡ್ತಾರೆ ಲೆಫ್ಟ್​​ ಆರ್ಮ್​ ಸ್ಪಿನ್ನರ್​​..!
ರೈಟ್​​ ಹ್ಯಾಂಡ್​​ ಬ್ಯಾಟರ್ಸ್​​ಗಳನ್ನ ಮಾತ್ರವಲ್ಲ. ಅಂತಿಮ ಹಂತದಲ್ಲಿ ವಿಕೆಟ್ಸ್​​​​ ಟೂ ವಿಕೆಟ್ಸ್​​ ಬೌಲಿಂಗ್​ ಮಡುವ ಜಡ್ಡು, ಟೇಲೆಂಡರ್ಸ್​ಗಳ ಪಾಲಿಗೆ ಕಂಟಕವಾಗಿದ್ದಾರೆ. ಈವರೆಗೆ 30 ಬಾರಿ 8ನೇ ಕ್ರಮಾಂಕದ ಹಾಗೂ ತಲಾ 17 ಬಾರಿ 9 ಹಾಗೂ 10 ನೇ ಕ್ರಮಾಂಕದಲ್ಲಿ ಬರೋ ಆಟಗಾರರಿಗೆ ಜಡ್ಡು ಗೇಟ್​ಪಾಸ್​ ನೀಡಿದ್ದಾರೆ. ಅದರಲ್ಲೂ ಇಂಗ್ಲೆಂಡ್​​ ಟೇಲೆಂಡರ್ಸ್​​ಗಳನ್ನ ತ್ವರಿತವಾಗಿ ಪೆವಿಲಿಯನ್​ಗಟ್ಟಿದ ಸಾಧನೆಯನ್ನೂ ಜಡ್ಡು ಈ ಹಿಂದೆ ಮಾಡಿದ್ದಾರೆ.

ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್​ಗಳಿಕೆಯ ಸಾಮರ್ಥ್ಯ!
ಲೋಯರ್​ ಆರ್ಡರ್​ನಲ್ಲಿ ಬ್ಯಾಟಿಂಗ್​ಗೆ ಬರೋ ಜಡೇಜಾಗೆ ವೇಗವಾಗಿ ರನ್​ ಕಲೆ ಹಾಕುವ ಸಾಮರ್ಥ್ಯವಿದೆ. ಟೇಲೆಂಡರ್​​​ಗಳು ಬ್ಯಾಟಿಂಗ್​ಗೆ ಬಂದಾಗ ವೇಗವಾಗಿ ರನ್​ಗಳಿಸೋ ಅಗತ್ಯತೆ ತಂಡಕ್ಕೆ ಹೆಚ್ಚುರಿತ್ತೆ. ಅದನ್ನ ಜಡೇಜಾ ಸ್ಪಷ್ಟವಾಗಿಯೇ ಅರಿತಿದ್ದಾರೆ. 7 ಅಥವಾ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿಯೋ ಜಡ್ಡು, 2019 ಬಳಿಕ 55.65ರ ಸ್ಟ್ರೈಕ್​ರೇಟ್​​ನಲ್ಲಿ, 52.81ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ದಾರೆ.

blank

ಬ್ಯಾಟಿಂಗ್​, ಬೌಲಿಂಗ್​ ಮಾತ್ರವಲ್ಲ. ಫೀಲ್ಡಿಂಗ್​ ವಿಚಾರದಲ್ಲೂ ಜಡ್ಡು ತಂಡಕ್ಕೆ ಅತ್ಯಗತ್ಯ. ಹೀಗಾಗಿಯೇ ಜಡೇಜಾ ಟೀಮ್​ ಇಂಡಿಯಾದ 3D ಪ್ಲೇಯರ್​ ಎಂದೇ ಖ್ಯಾತಿಗಳಿಸಿರೋದು. ಇದೆಲ್ಲಕ್ಕಿಂತ ಮುಖ್ಯವಾಗಿ ಟೆಸ್ಟ್​ ಕ್ರಿಕೆಟ್​ನ ಆಲ್​ರೌಂಡರ್​​ಗಳ ಱಂಕಿಂಗ್​ ಪಟ್ಟಿಯಲ್ಲಿ ಜಡೇಜಾಗೆ 2ನೇ​ ಸ್ಥಾನ ಅನ್ನೋದನ್ನ ಮರೆಯುವಂತಿಲ್ಲ. ಜಡ್ಡುಗಿರುವ ಸಾಮರ್ಥ್ಯಕ್ಕೆ ಱಂಕಿಂಗ್​ ಪಟ್ಟಿಯೇ ಸಾಕ್ಷಿಯಾಗಿದೆ.

ಈ ಎಲ್ಲಾ ಪಾಸಿಟಿವ್​ ಅಂಶಗಳನ್ನ ಗಮನಿಸಿದ್ರೆ, ಜಡೇಜಾ ಅವಶ್ಯಕತೆ ಟೀಮ್​ಇಂಡಿಯಾಗೆ ಎಷ್ಟಿದೆ ಅನ್ನೋದು ಸ್ಪಷ್ಟವಾಗುತ್ತೆ. ಹೀಗಾಗಿಯೇ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ರವೀಂದ್ರ ಜಡೇಜಾಗೆ ಅವಕಾಶ ನೀಡಲೇಬೇಕು ಎಂದು ಹೇಳ್ತಿರೋದು. ಹಾಗಂತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಜಡೇಜಾ ನೀಡಿದ ನೀರಸ ಪ್ರದರ್ಶನವನ್ನೂ ಸೈಡ್​ಲೈನ್​ ಮಾಡೋಕಾಗಲ್ಲ. ಆ ತಪ್ಪನ್ನ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ತಿದ್ದಿಕೊಳ್ಳಲಿ ಅನ್ನೋದಷ್ಟೇ ಆಶಯವಾಗಿದೆ.

The post WTC ಫೈನಲ್​ನ ಜಡೇಜಾ ಆಟಕ್ಕೆ ಟೀಕೆ-ಟಿಪ್ಪಣಿ.. ಆದ್ರು ಇಂಗ್ಲೆಂಡ್​ ಬೇಕೆ ಬೇಕು ಎಡಗೈ ಸ್ಪಿನ್ನರ್! appeared first on News First Kannada.

Source: newsfirstlive.com

Source link