ಕಸ ಬಿಸಾಡುವ ನೆಪದಲ್ಲಿ ಮೊಬೈಲ್​​ ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್​​ ಲೇಡಿ ಕೈಚಳಕ

ಕಸ ಬಿಸಾಡುವ ನೆಪದಲ್ಲಿ ಮೊಬೈಲ್​​ ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್​​ ಲೇಡಿ ಕೈಚಳಕ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಜೊತೆ ಬಂದು ಮೊಬೈಲ್​​ ಕದಿಯಲು ಮುಂದಾದ ಖತರ್ನಾಕ್​ ಲೇಡಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಮಾಗಡಿ ರಸ್ತೆ ಬಳಿ ಈ ಘಟನೆ ನಡೆದಿದ್ದು, ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈಯಲ್ಲಿ ಕಸ ಹಿಡಿದು ಬಿಸಾಡುವ ನೆಪದಲ್ಲಿ ಬಂದ ಖತರ್ನಾಕ್​ ಕಳ್ಳಿ, ಕಿಟಕಿಯ ಬಳಿ ಇಟ್ಟಿದ್ದ ಮೊಬೈಲ್ ಎಗರಿಸಿದ್ದಾಳೆ ಮಾಡಿದ್ದಾಳೆ. ಈ ದೃಶ್ಯವೀಗ ಸಿಸಿಟಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಲಭ್ಯವಿರುವ ಫೋಟೋ ಆಧಾರದ ಮೇರೆಗೆ ಪೊಲೀಸರು ಈಕೆಗಾಗಿ ಬಲೆ ಬೀಸಿದ್ದಾರೆ.

ಕಳ್ಳತನ ಮಾಡುವ ಮುನ್ನ ಈ ಲೇಡಿ ಇಡೀ ಏರಿಯಾ ಒಂದು ರೌಡ್​​ ಹೊಡೆಯುತ್ತಾಳೆ. ಬಳಿಕ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಗೆ ಟಾರ್ಗೆಟ್​​ ಮಾಡುತ್ತಾಳೆ. ನೀರು ಕೇಳುವ, ಕಸ ಬಿಸಾಡುವ ನೆಪದಲ್ಲಿ ಮನೆ ಸಮೀಪ ಹೋಗಿ ನಂತರ ತನ್ನ ಕಾರ್ಯ ಶುರು ಮಾಡುತ್ತಾಳೆ.

ಟಾರ್ಗೆಟ್​ ಮಾಡಿದ ಮನೆ ಬಾಗಿಲನ್ನು ಕುಡಿಯುವ ನೀರಿನ ನೆಪವೊಡ್ಡಿ ತಟ್ಟುತ್ತಾಳೆ. ಆಗ ಯಾರೂ ಇಲ್ಲದಿರುವುದು ಖಾತ್ರಿಯಾದ ಕೂಡಲೇ ಮನೆಯಲ್ಲಿದ್ದ ವಸ್ತುಗಳನ್ನು ಸಿನಿಮೀಯ ರೀತಿಯಲ್ಲಿ ಎಗರಿಸುತ್ತಾಳೆ ಎನ್ನಲಾಗಿದೆ.

ವಿಜಯನಗರ, ಬಸವೇಶ್ವರ ನಗರ, ಕೆಪಿ ಅಗ್ರಹಾರ, ಮಾಗಡಿ ರಸ್ತೆ ಸುತ್ತಮುತ್ತ ಈ ರೀತಿಯ ಹಲವು ಪ್ರಕರಣಗಳು ನಡೆದಿವೆ. ಮೊಬೈಲ್ ಕಳ್ಳರ ಹಾವಳಿಗೆ ಜನ ಕಂಗಾಲಾಗಿದ್ದಾರೆ. ಸಂತೆ, ಜಾತ್ರೆ ಇರುವ ಗದ್ದಲ, ಜನನಿಬಿಡ ಸ್ಥಳಗಳನ್ನು ಈಕೆ ಟಾರ್ಗೆಟ್ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ.

The post ಕಸ ಬಿಸಾಡುವ ನೆಪದಲ್ಲಿ ಮೊಬೈಲ್​​ ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್​​ ಲೇಡಿ ಕೈಚಳಕ appeared first on News First Kannada.

Source: newsfirstlive.com

Source link