ಮರಕ್ಕೆ ನಿರಂತರವಾಗಿ ಒದ್ದ ವ್ಯಕ್ತಿ – ಮುಂದೇನಾಯ್ತು ಗೊತ್ತಾ

ಮರವನ್ನು ಕಾಲಿನಿಂದ ನಿರಂತವಾಗಿ ಒದ್ದ ವ್ಯಕ್ತಿ ಮೇಲೆ ಮರ ಬಿದ್ದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆಪ್ತ ಅರೆಸ್ಟ್ – ವಿಜಯೇಂದ್ರ ವಿರುದ್ಧ ಶೀರಾಮುಲು ಕೆಂಡಾಮಂಡಲ

14 ಸೆಕೆಂಡ್ ಇರುವ ಈ ವೀಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವ್ಯಕ್ತಿಯೋರ್ವ ಮರವನ್ನು ತನ್ನ ಕಾಲಿನಿಂದ ಒದೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿರುವುದನ್ನು ಕಾಣಬಹುದಾಗಿದೆ.

ನಿರಂತರವಾಗಿ ಮರಕ್ಕೆ ಕಾಲಿನಿಂದ ವ್ಯಕ್ತಿ ಒದ್ದಿದ್ದು, ಕೊನೆಗೆ ಮರ ಆತನ ಮೇಲೆಯೇ ಬಿದ್ದು, ಆತನನ್ನು ಗಾಯಗೊಳಿಸಿದೆ. ಹೀಗಾಗಿ ವೀಡಿಯೋ ಜೊತೆಗೆ ಸುಧಾ ರಾಮೆನ್‍ರವರು ನೀವು ಮಾಡುವ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ನಿಮಗೆ ಹಿಂತಿರುಗಿ ಬರುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮಹಾಕಂಟಕ – ಪ್ರತಿನಿತ್ಯ ಬರ್ತಿದ್ದಾರೆ ಸಾವಿರಾರು ಜನ

ಸದ್ಯ ಈ ವೀಡಿಯೋಗೆ ಇಲ್ಲಿಯವರೆಗೂ 14,000ಕ್ಕೂ ಹೆಚ್ಚು ವೀವ್ಸ್ ಬಂದಿದ್ದು, ಹಲವಾರು ಕಮೆಂಟ್ ಹರಿದು ಬಂದಿದೆ.

The post ಮರಕ್ಕೆ ನಿರಂತರವಾಗಿ ಒದ್ದ ವ್ಯಕ್ತಿ – ಮುಂದೇನಾಯ್ತು ಗೊತ್ತಾ appeared first on Public TV.

Source: publictv.in

Source link