ಬೆಂಗಳೂರಿನ ಹಲವೆಡೆ ಕೇಳಿಬಂತು ಭಾರೀ ಸದ್ದು.. ಆತಂಕದಲ್ಲಿ ಜನರು

ಬೆಂಗಳೂರಿನ ಹಲವೆಡೆ ಕೇಳಿಬಂತು ಭಾರೀ ಸದ್ದು.. ಆತಂಕದಲ್ಲಿ ಜನರು

ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ ಬಳಿ ಇದ್ದಕ್ಕಿದ್ದಂತೆ ಢಂ ಅಂತಾ ಭಾರೀ ಸದ್ದು ಕೇಳಿಬಂದ ಘಟನೆ ನಡೆದಿದೆ. ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಈ ಭಾರೀ ಸದ್ದು ಕೇಳಿಬಂದಿದೆ.

ಇದ್ದಕ್ಕಿದ್ದಂತೆ ಕೇಳಿಬಂದ ಸದ್ದಿನಿಂದಾಗಿ ಜನರು ಗಾಬರಿ ಬಿದ್ದಿದ್ದಾರೆ ಎನ್ನಲಾಗಿದೆ ರಾಜ ರಾಜೇಶ್ವರಿ ನಗರದ ಕೆಂಗೇರಿ ಸುತ್ತಮುತ್ತ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಆದರೆ ಎಲ್ಲಿ ಏನಾಗಿದೆ ಎಂಬ ಕಾರಣ ಇನ್ನೂ ಪತ್ತೆಯಾಗಿಲ್ಲ. ಜನರು ಈ ಭಾರೀ ಸದ್ದು ಎಲ್ಲಿಂದ ಬಂತು ಯಾವ ಏರಿಯಾದಿಂದ ಬಂತು ಜನರಲ್ಲಿ ಆತಂಕ ಶುರುವಾಗಿದೆ. ಕುಮಾರಸ್ವಾಮಿ ಲೇಔಟ್​ನಲ್ಲಿಯೂ ಶಬ್ದ ಕೇಳಿಬಂದಿದೆ ಎನ್ನಲಾಗಿದೆ.

ಇನ್ನು ಈ ಕುರಿತು ಭೂಗೋಳ ಶಾಸ್ತ್ರಜ್ಞ ಹೆಚ್ಎಸ್ಎಂ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು..  ಇದು ಸ್ಫೋಟಕದ ರೀತಿಯ ಸದ್ದಾಗಿದ್ದು.. ಭೂಮಿ ಒಳಗಡೆ ಆಗಿದೆಯಾ ಇಲ್ವಾ ಅಂತಾ ಪರಿಶೀಲಿಸಬೇಕು.. ಎಲ್ಲಿ ಆಗಿದೆ ಅನ್ನೋದು ಇಲ್ಲಿತನಕ ಗೊತ್ತಾಗಿಲ್ಲ. ಇದು ಗಾಳಿಯಲ್ಲಿ ಆಗಿರುವ ಸ್ಫೋಟದ ರೀತಿ ಇಲ್ಲ, ಜಾಗ ಎಲ್ಲಿ ಅಂತಾ ಗೊತ್ತಾದ್ರೆ ಹೋಗಿ ಪರಿಶೀಲಿಸಬಹುದು.

The post ಬೆಂಗಳೂರಿನ ಹಲವೆಡೆ ಕೇಳಿಬಂತು ಭಾರೀ ಸದ್ದು.. ಆತಂಕದಲ್ಲಿ ಜನರು appeared first on News First Kannada.

Source: newsfirstlive.com

Source link