ನಗರಸಭೆಯ ಅಧ್ಯಕ್ಷನ ವಿರುದ್ಧ ಉಪಾಧ್ಯಕ್ಷೆಯಿಂದಲೇ ಭ್ರಷ್ಟಾಚಾರ ಆರೋಪ.. ಕೋಟ್ಯಂತರ ರೂ ಗುಳುಂ..?

ನಗರಸಭೆಯ ಅಧ್ಯಕ್ಷನ ವಿರುದ್ಧ ಉಪಾಧ್ಯಕ್ಷೆಯಿಂದಲೇ ಭ್ರಷ್ಟಾಚಾರ ಆರೋಪ.. ಕೋಟ್ಯಂತರ ರೂ ಗುಳುಂ..?

ರಾಯಚೂರು: ನಗರಸಭಾ ಅಧ್ಯಕ್ಷ ಇ.ವಿನಯಕುಮಾರ ಅವರ ಮೇಲೆ ಕೋಟ್ಯಂತರ ರೂ ಹಣವನ್ನ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ.

ನಗರಕ್ಕೆ ವಿದ್ಯುತ್​ ಕಲ್ಪಿಸುವ ನಿಟ್ಟಿನಲ್ಲಿ ಸ್ಟ್ರೀಟ್​ಲೈಟ್​ ಕಾಮಗಾರಿಯ ಯಾವುದೇ ಬಿಲ್​ಗಳನ್ನು ತಮ್ಮ ಗಮನಕ್ಕೆ ತಾರದೇ ಬಿಲ್ ಪಾಸ್​ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಗುಳುಂ ಮಾಡಿದ್ದಲ್ಲದೆ, ಲಕ್ಷ ಲಕ್ಷ ಲಂಚ ಪಡೆದು ನಗರದಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಿದ್ದಾರೆ  ಎಂದು ನಗರಸಭೆ ಉಪಾಧ್ಯಕ್ಷೆ ನರಸಮ್ಮ ಮಾಡಲಗೇರಿ ನಗರಸಭೆಯ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ.

The post ನಗರಸಭೆಯ ಅಧ್ಯಕ್ಷನ ವಿರುದ್ಧ ಉಪಾಧ್ಯಕ್ಷೆಯಿಂದಲೇ ಭ್ರಷ್ಟಾಚಾರ ಆರೋಪ.. ಕೋಟ್ಯಂತರ ರೂ ಗುಳುಂ..? appeared first on News First Kannada.

Source: newsfirstlive.com

Source link