ಪಿಂಕ್ ಸೀರೆ ತೊಟ್ಟು ಫೋಟೋಗೆ ಪ್ರಿಯಾಮಣಿ ಪೋಸ್

ಮುಂಬೈ: ಬಹುಭಾಷಾ ನಟಿ ಪ್ರಿಯಾಮಣಿ ಕಸ್ಟಮ್ ಸೀರೆ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.

ಹೂವಿನ ಮುದ್ರಣದ ಜೊತೆಗೆ ತಮ್ಮ ಹೆಸರನ್ನು ಕೂಡ ಮುದ್ರಿಸಬಹುದಾಗಿರುವ ಪಿಂಕ್ ಕಲರ್‍ನ ಈ ಸೀರೆ ಸದ್ಯ ಹೊಸ ಟ್ರೇಡ್ ಸೃಷ್ಟಿಸಿದೆ. ಹಲವಾರು ನಟಿಯರು ಈ ಸೀರೆಗೆ ಫಿದಾ ಆಗಿದ್ದು, ಖರೀದಿಸುತ್ತಿದ್ದಾರೆ. ಇದೀಗ ನಟಿ ಪ್ರಿಯಾಮಣಿ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ.

ಪ್ರಿಯಾಮಣಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಬೇಬಿ ಪಿಂಕ್ ಕಲರ್‍ನ ತೆಳುವಾದ ಸೀರೆ ತೊಟ್ಟು, ಸೀರೆಗೆ ಮ್ಯಾಚ್ ಆಗುವಂತೆ ದೊಡ್ಡ ಇಯರ್‍ರಿಂಗ್ ಧರಸಿ, ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಪ್ರಿಯಾಮಣಿ ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Priya Mani Raj (@pillumani)

ಇತ್ತೀಚೆಗೆ ನಟಿ ಸಮಂತಾ ಅಕ್ಕಿನೇನಿ, ಕರೀನಾ ಕಪೂರ್ ಸೇರಿದಂತೆ ಅನೇಕ ನಟಿಯರು ಈ ಸೀರೆಯನ್ನು ಖರೀದಿಸಿ ಫೋಟೋ ಶೂಟ್ ಮಾಡಿಸಿದ್ದರು. ಇನ್ನೂ ಲಾಕ್‍ಡೌನ್ ವೇಳೆ ಬಿಡುಗಡೆಗೊಂಡಿದ್ದ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್‍ನಲ್ಲಿ ಮಿಂಚಿದ್ದ ಪ್ರಿಯಾಮಣಿ ಸದ್ಯ ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ.

The post ಪಿಂಕ್ ಸೀರೆ ತೊಟ್ಟು ಫೋಟೋಗೆ ಪ್ರಿಯಾಮಣಿ ಪೋಸ್ appeared first on Public TV.

Source: publictv.in

Source link