‘ಚೀನಾ ತಂಟೆಗೆ ಬಂದವರ ತಲೆ ಒಡೆದು ರಕ್ತ ಸೋರಲಿದೆ’ ಶಿ ಜಿನ್​ಪಿಂಗ್ ವಾರ್ನಿಂಗ್

‘ಚೀನಾ ತಂಟೆಗೆ ಬಂದವರ ತಲೆ ಒಡೆದು ರಕ್ತ ಸೋರಲಿದೆ’ ಶಿ ಜಿನ್​ಪಿಂಗ್ ವಾರ್ನಿಂಗ್

ಚೀನಾದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾಗೆ ಈಗ ನೂರರ ಹರೆಯ.. ರಕ್ತ ಸಿಕ್ತ ಪಕ್ಷದ 100ನೇ ದಿನಾಚರಣೆ ದಿನ ಮಾತನಾಡುತ್ತಿದ್ದ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಮತ್ತೆ ರಕ್ತ ಹರಿಸೋ ಮಾತನ್ನಾಡಿದ್ದಾರೆ.

ಚೀನಾವನ್ನು ಬೆದರಿಸುವ ಕಾಲ ಮುಗಿದೋಯ್ತು. ನಮ್ಮ ವಿರೋಧಿಗಳು ಯಾವುದೇ ಕಾರಣಕ್ಕೂ ನಮ್ಮನ್ನು ಶೋಷಿಸಲು, ಬೆದರಿಸಲು, ಗುಲಾಮರನ್ನಾಗಿ ಕಾಣಲು ಸಾಧ್ಯವಿಲ್ಲ ಎಂದು ತಮ್ಮ ಶತ್ರು ರಾಷ್ಟ್ರಗಳಿಗೆ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ.

blank

ಗುರುವಾರ ಚೀನಾ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಕ್ಸಿ ಜಿನ್​ಪಿಂಗ್, ಮೊದಲಿಗೆ ತಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಆಧುನಿಕ ಚೀನಾದ ಕ್ರಾಂತಿಕಾರಿ ಮಾವೋರನ್ನು ಕೊಂಡಾಡಿದರು. ತಮ್ಮ ಪಕ್ಷದ ಸಾಧನೆಯನ್ನು ಜನರಿಗೆ ಸಾರಿದರು.

ಬಡತನದಿಂದಲೇ ತುಂಬಿ ತುಳುಕುತ್ತಿದ್ದ ಚೀನಾವನ್ನು ಉದ್ದಾರ ಮಾಡಿದ್ದು ಕಮ್ಯುನಿಷ್ಟ್​​ ಪಕ್ಷಗಳೇ ಎಂದು ಶ್ಲಾಘಿಸಿದರು ಕ್ಸಿ ಜಿನ್​ಪಿಂಗ್. ಇದೇ ವೇಳೆ, ತಮ್ಮ ಶತ್ರು ದೇಶಗಳಿಗೆ ವಾರ್ನ್​​ ಮಾಡಿದ ಇವರು, ಅಮೆರಿಕ ಮೊದಲಾದ ದೇಶಗಳು ನಮ್ಮನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಕಿಡಿಕಾರಿದರು.

blank

ಚೀನಾವನ್ನು ಯಾರಿಂದಲೂ ಬೆದರಿಸಲು ಸಾಧ್ಯವಿಲ್ಲ. ಒಂದು ವೇಳೆ ಯಾರದರೂ ಬೆದರಿಸಲು ಬಂದಲ್ಲಿ ತಲೆ ತೆಗೆಯುತ್ತೇವೆ. ಬಳಿಕ 140 ಕೋಟಿಗೂ ಹೆಚ್ಚು ಚೀನಿಗರಿಂದ ನಿರ್ಮಾಣವಾದ ಉಕ್ಕಿನ ಮಹಾಗೋಡೆಯ ಮುಂದೆಯೇ ಅವರ ರಕ್ತಪಾತವಾಗಲಿದೆ ಎಂದು ಅಬ್ಬರಿಸಿದರು.

ಇದೇ ಸಂದರ್ಭದಲ್ಲಿ ತೈವಾನ್-ಚೀನಾದ ಬಗ್ಗೆ ಪ್ರಸ್ತಾಪಿಸಿದರು. ಚೀನಾ ಮತ್ತು ತೈವಾನ್​ನ ಎಲ್ಲ ಜನರೂ ಕೂಡ ಒಟ್ಟಿಗೆ ಕೆಲಸ ಮಾಡಬೇಕು. ಒಗ್ಗಟ್ಟಿನಿಂದಲೇ ಮುಂದುವರಿಯಬೇಕು. ತೈವಾನ್ ದೇಶದ ಸ್ವಾತಂತ್ರ್ಯದ ಧ್ವನಿಯನ್ನು ಹತ್ತಿಕ್ಕಬೇಕು” ಎಂದು ಕರೆ ನೀಡಿದರು.

The post ‘ಚೀನಾ ತಂಟೆಗೆ ಬಂದವರ ತಲೆ ಒಡೆದು ರಕ್ತ ಸೋರಲಿದೆ’ ಶಿ ಜಿನ್​ಪಿಂಗ್ ವಾರ್ನಿಂಗ್ appeared first on News First Kannada.

Source: newsfirstlive.com

Source link