ಡಿಕೆಎಸ್​ಗೂ ಸಿಎಂ ಆಗಬೇಕು ಅಂತಾ ಇದೆ.. ಆದ್ರೆ..- ಶಾಸಕ ಜಮೀರ್ 

ಡಿಕೆಎಸ್​ಗೂ ಸಿಎಂ ಆಗಬೇಕು ಅಂತಾ ಇದೆ.. ಆದ್ರೆ..- ಶಾಸಕ ಜಮೀರ್ 

ಬೆಂಗಳೂರು: ಸಿಎಂ ಆಗ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ, ಆದರೆ ಜನಾಭಿಪ್ರಾಯ ಬೇಕು ಎಂದು ಮಾಜಿ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ವಿಚಾರ ಚರ್ಚೆಯಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಜಮೀರ್ ಅವರು, ಮುಖ್ಯಮಂತ್ರಿ ಆಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಡಿ.ಕೆ.ಶಿವಕುಮಾರ್ ಸೇರಿದಂತೆ ಎಂ.ಬಿ. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ ಎಲ್ಲರಿಗೂ ಸಿಎಂ ಆಗ್ಬೇಕು ಎಂಬ ಆಸೆ ಇದೆ. ಆದರೆ ಜನರು ಹೇಳಬೇಕಲ್ಲ, ಜನರು ನಿರ್ಧಾರ ಮಾಡಬೇಕಲ್ಲ ಎಂದು ಮರು ಪ್ರಶ್ನಿಸಿದರು.

ಇದನ್ನೂ ಓದಿ: ‘ನಾನ್​​​ ಇನ್ನೂ LKG ಮಗು’ ಶಾಸಕ ಜಮೀರ್ ಹೀಗೆ ಅಂದಿದ್ಯಾಕೆ?

ಮುಂದಿನ ಮುಖ್ಯಮಂತ್ರಿ ಹೇಳಿಕೆ ನೀಡದಂತೆ ನಮ್ಮ ನಾಯಕ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಹೇಳಿಕೆಗಳಿಗೆ ಫುಲ್ ಸ್ಟಾಪ್ ಹಾಕಿ ಅಂತ ಹೇಳಿದ್ದಾರೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಹೇಳಿಕೆ ಕೊಡಲ್ಲ, ಆ ಬಗ್ಗೆ ಏನೂ ಮಾತಾಡಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳ ಯಾರೂ ಸಹ ಹಿಂದೆಯೂ ಕೊಟ್ಟಿಲ್ಲ, ಮುಂದೆಯೂ ಕೊಡಲಿಕ್ಕಾಗಲ್ಲ. ನಾವು ಸಿದ್ದರಾಮಯ್ಯನವರ ಫಾಲೋವರ್, ಅವರ ಹೇಳಿಕೆಗೆ ಗೌರವ ಕೊಡಬೇಕು, ಅದಕ್ಕೇ ಮುಂದಿನ‌ ಮುಖ್ಯಮಂತ್ರಿ ಹೇಳಿಕೆ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

The post ಡಿಕೆಎಸ್​ಗೂ ಸಿಎಂ ಆಗಬೇಕು ಅಂತಾ ಇದೆ.. ಆದ್ರೆ..- ಶಾಸಕ ಜಮೀರ್  appeared first on News First Kannada.

Source: newsfirstlive.com

Source link