ತಮ್ಮನ ಬ್ಯಾಟಿಂಗ್ ನೋಡಿ ಎಂಜಾಯ್ ಮಾಡಿದ ‘ಕರನ್ ಬ್ರದರ್ಸ್’​

ತಮ್ಮನ ಬ್ಯಾಟಿಂಗ್ ನೋಡಿ ಎಂಜಾಯ್ ಮಾಡಿದ ‘ಕರನ್ ಬ್ರದರ್ಸ್’​

ಕ್ರಿಕೆಟ್​ ಅಂಗಳದಲ್ಲಿ ಅಬ್ಬರಿಸಿ ಮರೆಯಾದ ಅದೆಷ್ಟೋ ಸಹೋದರರನ್ನ ನೋಡಿದ್ದೇವೆ. ಇಂದಿಗೂ ಕೂಡ ನೆನಪಿನಲ್ಲಿ ಉಳಿಯುವಂತ ಸಹೋದರರಿದ್ದಾರೆ. ಟೀಮ್​ ಇಂಡಿಯಾದ ಯೂಸಫ್​​ ಪಠಾಣ್​ – ಇರ್ಫಾನ್​ ಪಠಾನ್, ಸ್ಟೀವ್​ ವಾ – ಮಾರ್ಕ್​ ವಾ, ಡೇವಿಡ್​ ಹಸ್ಸಿ – ಮೈಕಲ್ ಹಸ್ಸಿ… ಹೀಗೆ ಹಲವರಿದ್ದಾರೆ. ಸದ್ಯ ಪಾಂಡ್ಯ ಬ್ರದರ್ಸ್​ ಹಾರ್ದಿಕ್-ಕೃನಾಲ್ ಪಾಂಡ್ಯ ಮಿಂಚುತಿದ್ರೆ, ಅತ್ತ ಇಂಗ್ಲೆಂಡ್ ಪರ ಟಾಮ್ ಕರನ್-ಸ್ಯಾಮ್ ಕರನ್ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ಕರನ್ ಬ್ರದರ್ಸ್ ಪಟ್ಟಿಯಲ್ಲಿ ಮೂರನೇ ಸಹೋದರ ಕೂಡ ಎಂಟ್ರಿ ಕೊಡಲು ಸಜ್ಜಾಗ್ತಿದ್ದಾರೆ. ಟಾಮ್ ಕರನ್, ಬಳಿಕ ಸ್ಯಾಮ್ ಕರನ್​ ಕ್ರಿಕೆಟ್​​ಗೆ ಎಂಟ್ರಿ ಕೊಟ್ಟಿದ್ರು.

ಇದೀಗ ಅವರ ಸಹೋದರ ಬೆನ್ ಕರನ್ ಕೂಡ ಭರ್ಜರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡದ ಬಾಗಿಲು ಬಡಿಯುತ್ತಿದ್ದಾರೆ. ಪ್ರಸ್ತುತ ನಡೀತಿರುವ ಟಿ20 ಬ್ಲಾಸ್ಟ್‌ನಲ್ಲಿ ಭಾಗವಹಿಸಿರುವ ಬೆನ್ ಕರನ್, ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ನಾರ್ಥಾಂಪ್ಟನ್​ಶೈರ್ ತಂಡದ ಗೆಲುವಿಗೂ ಪ್ರಮುಖ ಪಾತ್ರವಹಿಸಿದ್ದಾರೆ. ಡುರ್ಹಾಮ್ ವಿರುದ್ಧದ ಪಂದ್ಯದಲ್ಲಿ ಬೆನ್ 33 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 62 ರನ್ ಬಾರಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ಬೆನ್ ಬ್ಯಾಟಿಂಗ್​ ಅನ್ನು ಸ್ಯಾಮ್ ಮತ್ತು ಟಾಮ್ ಕರನ್ ಇಬ್ಬರೂ ಟಿವಿಯಲ್ಲಿ ವೀಕ್ಷಿಸಿ ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

 

The post ತಮ್ಮನ ಬ್ಯಾಟಿಂಗ್ ನೋಡಿ ಎಂಜಾಯ್ ಮಾಡಿದ ‘ಕರನ್ ಬ್ರದರ್ಸ್’​ appeared first on News First Kannada.

Source: newsfirstlive.com

Source link