ಕೊನೆಗೂ ಬಯಲಾಯ್ತು ಸಂಚಾರಿ ವಿಜಯ್ ಡೆತ್ ಸೀಕ್ರೆಟ್: ಪೊಲೀಸರ ಮುಂದೆ ನವೀನ್ ಹೇಳಿದ್ದಿದು..

ಕೊನೆಗೂ ಬಯಲಾಯ್ತು ಸಂಚಾರಿ ವಿಜಯ್ ಡೆತ್ ಸೀಕ್ರೆಟ್: ಪೊಲೀಸರ ಮುಂದೆ ನವೀನ್ ಹೇಳಿದ್ದಿದು..

ಬೆಂಗಳೂರು: ನಟ ಸಂಚಾರಿ ವಿಜಯ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಸಂಪೂರ್ಣ ವಿವರವನ್ನ ಸಂಚಾರಿ ವಿಜಯ್ ಸ್ನೇಹಿತ ನವೀನ್ ಜಯನಗರ ಪೊಲೀಸರಿಗೆ ನೀಡಿದ್ದಾರೆ. ಅಪಘಾತದ ಸಂದರ್ಭದಲ್ಲಿ ಏನಾಯ್ತು..? ಅದಕ್ಕೂ ಮುನ್ನ ಯಾಕೆ ಹೊರಗಡೆ ಬಂದರು ಎಲ್ಲದರ ಬಗ್ಗೆಯೂ ಮವೀನ್ ಮಾಹಿತಿ ನೀಡಿದ್ದಾರೆ.

ಜೂ. 12 ನೇ ತಾರೀಖು ವಿಜಯ್ ಸ್ನೆಹಿತನ ಮನೆಯಲ್ಲಿ ತಂಡ ಸಭೆ ಸೇರಿತ್ತು.. ನವೀನ್ ಕೂಡ ತಂಡದ ಸಭೆಯಲ್ಲಿ ಭಾಗಿಯಾಗಿದ್ದ.. ಫುಡ್ ಕಿಟ್ ವಿತರಣೆ ಸಂಬಂಧ ಮಾತುಕತೆಗಾಗಿ ಈ ತಂಡ ಸೇರಿತ್ತು. ಮೆಡಿಸಿನ್ ಮತ್ತು ಫುಡ್ ವಿತರಣೆ ಸಂಬಂಧ ಮಾತುಕತೆ ನಡೆದಿತ್ತು.. ಈ ವೇಳೆ ನವೀನ್​ಗೆ ಪತ್ನಿ ಕರೆ ಮಾಡಿದ್ದಾಳೆ.. ಬರುವಾಗ ಮಾತ್ರೆ ತನ್ನಿ ಅಂತ ನವೀನ್ ಪತ್ನಿ ಹೇಳಿದ್ದಾರೆ. ಹೀಗಾಗಿ ಸಭೆಯಿಂದ ಹೊರಗೆ ಬಂದಿದ್ದ ನವೀನ್.. ಪತ್ನಿಗೆ ಮಾತ್ರೆ ಕೊಡಲು ಹೊರಟಿದ್ದ.. ಆಗ ವಿಜಯ್ ನಾನು ಬರುತ್ತೇನೆ ಎಂದಿದ್ದರು.. ಮನೆ ಬಳಿಯೇ ಇರೋದು ಎಂದು ತಿಳಿದು ಇಬ್ಬರೂ ಹೆಲ್ಮೆಟ್ ಹಾಕಿರಲಿಲ್ಲ.. ಹೋಗುತ್ತಿರುವಾಗ ಸ್ಕಿಡ್ ಆಗಿ ಎಲಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದಿದೆ.. ಈ ವೇಳೆ ಸಂಚಾರಿ ವಿಜಯ್ ಬ್ರೇಕ್ ಹಾಕಿದ ರಭಸಕ್ಕೆ ಎಗರಿ ಬಿದ್ದಿದ್ದಾರೆ ಎಂದು ಪೊಲೀಸರ ಮುಂದೆ ನವೀನ್‌ ಸ್ಟೇಟ್ ಮೆಂಟ್ ನೀಡಿದ್ದಾರೆ.

The post ಕೊನೆಗೂ ಬಯಲಾಯ್ತು ಸಂಚಾರಿ ವಿಜಯ್ ಡೆತ್ ಸೀಕ್ರೆಟ್: ಪೊಲೀಸರ ಮುಂದೆ ನವೀನ್ ಹೇಳಿದ್ದಿದು.. appeared first on News First Kannada.

Source: newsfirstlive.com

Source link