ಕ್ಯಾಪ್ಟನ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ಯಾಕೆ ಆಫ್ ಸ್ಪಿನ್ನರ್​ ಆರ್.ಅಶ್ವಿನ್..?

ಕ್ಯಾಪ್ಟನ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ಯಾಕೆ ಆಫ್ ಸ್ಪಿನ್ನರ್​ ಆರ್.ಅಶ್ವಿನ್..?

ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ ಫೈನಲ್​ಗೆ​ ಮೂರು ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ, ವಿರಾಟ್​​ ಕೊಹ್ಲಿ ಬೆನ್ನಿಗೆ ರವಿಚಂದ್ರನ್​ ಅಶ್ವಿನ್​​ ಧಾವಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ ಮೂರು ಪಂದ್ಯಗಳು ಇರಬೇಕು ಎಂದು ಕೊಹ್ಲಿ ನೀಡಿರುವ ಹೇಳಿಕೆ ವಿಚಾರಕ್ಕೆ, ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅಶ್ವಿನ್, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.

ಕೊಹ್ಲಿ ಮೂರು ಟೆಸ್ಟ್ ಪಂದ್ಯಗಳ ಬೇಡಿಕೆಯನ್ನ ಮುಂದಿಟ್ಟಿಲ್ಲ. ಅದರ ಬದಲಾಗಿ ಮುಂದಿನ ಆವೃತ್ತಿ ಹೇಗಿರಬೇಕು ಎಂಬುದನ್ನ ಸೂಚಿಸಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​ ಫೈನಲ್‌ಗಾಗಿ ಕೊಹ್ಲಿ, ಮೂರು ಟೆಸ್ಟ್‌ಗಳನ್ನು ಆಡಬೇಕೆಂದು ಕೇಳಿಕೊಂಡಿದ್ದಾರೆ ಎಂಬುದು ಸುಳ್ಳು. ವಿರಾಟ್ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಮೂರು ಪಂದ್ಯಗಳನ್ನ ಆಡಿದ್ರೆ, ಉಳಿದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತೆ ಎಂದಷ್ಟೇ ಹೇಳಿದ್ರು.

ಆದರೆ ಅವರು ನೀಡಿರುವ ಹೇಳಿಕೆಯ ಅರ್ಥವನ್ನ ತಿರುಚಿ ಹೇಳಲಾಗ್ತಿದೆ. ಇದರ ಜೊತೆಗೆ ಗೊಂದಲಗಳೂ ಉಂಟಾಗ್ತಿವೆ. ಆದರೆ ಎಂದೂ ಮೂರು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಒತ್ತಾಯಿಸಿಲ್ಲ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

The post ಕ್ಯಾಪ್ಟನ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ಯಾಕೆ ಆಫ್ ಸ್ಪಿನ್ನರ್​ ಆರ್.ಅಶ್ವಿನ್..? appeared first on News First Kannada.

Source: newsfirstlive.com

Source link