ದಾವಣಗೆರೆ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳಿವೆ. ಈಗಾಗಲೇ ಮುಂದಿನ ಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಭಾರೀ ಸರ್ಕಸ್​ ನಡೆಸುತ್ತಿವೆ. ಹೀಗಿರುವಾಗಲೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು? ಎಂಬ ಕೂಗು ಕೇಳಿ ಬಂದಿದೆ.

ಕಾಂಗ್ರೆಸ್​​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನಡುವೆ ಮುಂದಿನ ಸಿಎಂ ವಿಚಾರವಾಗಿ ತೆರೆಮರೆಯಲ್ಲಿ ಕಿತ್ತಾಟ ಶುರುವಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್​ ಶಾಸಕ ಜಮೀರ್​​ ಅವರು ಅಂತೂ ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ಗೆ​​ ಬೇಸರ ಮೂಡಿಸುತ್ತಿದ್ದಾರೆ.

ಡಿ.ಕೆ ಶಿವಕುಮಾರ್​​ ಯಾರು ಹೀಗೆ ಮಾತಾಡಬಾರದು ಎಂದು ಎಷ್ಟೇ ಹೇಳಿದರೂ ಮತ್ತೊಮ್ಮೆ ಇಂದು ಮುಂದಿನ ಸಿಎಂ ಸಿದ್ದರಾಮಯ್ಯ ಜೈ ಎಂದು ಕಾಂಗ್ರೆಸ್​ ಕಾರ್ಯಕರ್ತರು ಕೂಗಿರುವುದು ವಿವಾದಕ್ಕೀಡಾಗಿದೆ.

ದಾವಣಗೆರೆಯಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯರಿಗೆ ಜೈ ಎಂದು ಕಾಂಗ್ರೆಸ್​​​ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಶಾಸಕ ಭೀಮಾನಾಯ್ಕ್, ಶಾಸಕ ಬೈರತಿ ಸುರೇಶ್, ಮಾಜಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ ಹಾಜರಿದ್ದರು ಎನ್ನಲಾಗಿದೆ.

The post ಮತ್ತೆ ‘ಮುಂದಿನ ಸಿಎಂ ಸಿದ್ದರಾಮಯ್ಯರಿಗೆ ಜೈ’ ಎಂದ ಕಾಂಗ್ರೆಸ್​ ಕಾರ್ಯಕರ್ತರು appeared first on News First Kannada.

Source: newsfirstlive.com

Source link