ಕೇಂದ್ರ ಬಾಕಿ ಉಳಿಸಿಕೊಂಡಿರುವ 11,800 ಕೋಟಿ GST ಹಣ ಕೇಳಿದ ಬೊಮ್ಮಾಯಿ

ಕೇಂದ್ರ ಬಾಕಿ ಉಳಿಸಿಕೊಂಡಿರುವ 11,800 ಕೋಟಿ GST ಹಣ ಕೇಳಿದ ಬೊಮ್ಮಾಯಿ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯ ಗೃಹ ಸಚಿವ ಹಾಗೂ ಜಿಎಸ್​ಟಿ ಮಂಡಳಿಯ ಕರ್ನಾಟಕದ ಪ್ರತಿನಿಧಿ ಬಸವರಾಜ್ ಬೊಮ್ಮಾಯಿ ಭೇಟಿಯಾದರು.

ಬೆಂಗಳೂರಿನಲ್ಲಿ ಭೇಟಿಯಾದ ಬೊಮ್ಮಾಯಿ.. ಕೇಂದ್ರ ಸಚಿವರ ಜೊತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆರ್ಥಿಕ ನೆರವಿನ ಬೇಡಿಕೆಯನ್ನ ಇದೇ ವೇಳೆ ಸಚಿವರು ಇಟ್ಟಿದ್ದಾರೆ.

ಜೊತೆಗೆ ರಾಜ್ಯದ ಪಾಲಿನ ಜಿಎಸ್​ಟಿ ಪರಿಹಾರ ಬಾಕಿ 11,800 ಕೋಟಿ ಹಣವನ್ನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

The post ಕೇಂದ್ರ ಬಾಕಿ ಉಳಿಸಿಕೊಂಡಿರುವ 11,800 ಕೋಟಿ GST ಹಣ ಕೇಳಿದ ಬೊಮ್ಮಾಯಿ appeared first on News First Kannada.

Source: newsfirstlive.com

Source link