‘ಯಶ್​​ಗೆ ನೋಯಿಸೋದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದ್ರು ನಂದ ಕಿಶೋರ್

‘ಯಶ್​​ಗೆ ನೋಯಿಸೋದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದ್ರು ನಂದ ಕಿಶೋರ್

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್​​ ಹಾಗೂ ನಂದ ಕಿಶೋರ್​ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ‘ರಾಣ’ ಟೈಟಲ್​​ ಮೂಲಕ ಸೆಟ್ಟೇರಿದೆ. ಈ ನಡುವೆಯೇ ಟೈಟಲ್​​ ಈಗಾಗಲೇ ಯಶ್​ ಸಿನಿಮಾಗೆ ಫಿಕ್ಸ್​ ಆಗಿದ್ದ ಕುರಿತು ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.

ಟೈಟಲ್​ ಈಗಾಗಲೇ ರಿಜಿಸ್ಟರ್​ ಆಗಿತ್ತು. ಇದು ಮಂಜಣ್ಣ ಅವರ ಬಳಿಯೇ ಇತ್ತು. ಸಿನಿಮಾ ಮಾಡೋವಾಗ ಯಾವ ಯಾವ ಟೈಟಲ್​ ಇದೇ ಎಂದು ನೋಡಿದಾಗ ರಾಣ ಟೈಟಲ್ ಇದ್ದ ಕಾರಣದಿಂದ ಹೊಸ ಪ್ರತಿಭೆಗೆ ಹೆಚ್ಚು ಸೂಕ್ತ ಆಗಲಿದೆ ಎಂಬ ಕಾರಣಕ್ಕೆ ಟೈಟಲ್ ತೆಗೆದುಕೊಂಡಿದ್ದೇವೆ. ಯಶ್ ನೋಯಿಸೋದು ನಮ್ಮ ಉದ್ದೇಶ ಆಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಂದಹಾಗೇ, ರಾಣ ಟೈಟಲ್​ನಲ್ಲಿ ನಿರ್ದೇಶಕ ಹರ್ಷ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್​​ನಲ್ಲಿ ಕೆಲ ವರ್ಷಗಳ ಹಿಂದೆ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಟೇಕ್ ಆಫ್​ ಆಗಿರಲಿಲ್ಲ. ಸದ್ಯ ಇದೇ ಟೈಟಲ್​​ನಲ್ಲಿ ಶ್ರೇಯಸ್​ ಅಭಿಮಾನಿಗಳು ಎದುರು ಬರಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:

The post ‘ಯಶ್​​ಗೆ ನೋಯಿಸೋದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದ್ರು ನಂದ ಕಿಶೋರ್ appeared first on News First Kannada.

Source: newsfirstlive.com

Source link