ನನ್ನ & ಕೊಹ್ಲಿ ಸ್ನೇಹ ಕ್ರಿಕೆಟ್​​ಗಿಂತ ದೊಡ್ಡದು- ಕೇನ್ ವಿಲಿಯಮ್ಸನ್

ನನ್ನ & ಕೊಹ್ಲಿ ಸ್ನೇಹ ಕ್ರಿಕೆಟ್​​ಗಿಂತ ದೊಡ್ಡದು- ಕೇನ್ ವಿಲಿಯಮ್ಸನ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದ ಸೋಲು ಅಸಂಖ್ಯ ಭಾರತೀಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಹಾಗಿದ್ದೂ ಭಾರತೀಯ ಅಭಿಮಾನಿಗಳು ಕೂಡ ನ್ಯೂಜಿಲೆಂಡ್​ ತಂಡವನ್ನ ಸಂಭ್ರಮಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ನ್ಯೂಜಿಲೆಂಡ್​ ತಂಡ ಸಭ್ಯಸ್ಥರೆನಿಸಿಕೊಂಡಿರೋದೇ ಇದಕ್ಕೆ ಕಾರಣವಾಗಿದೆ. ಫ್ಯಾನ್ಸ್​ ಭಾವನೆಗೆ ತಕ್ಕಂತೆ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್​ಸನ್​ ಕೂಡ ಪಂದ್ಯದ ಬಳಿಕ ನಡೆದುಕೊಂಡರು. ಗೆಲುವಿನ ನಂತರ ಭಾರತೀಯ ನಾಯಕ ವಿರಾಟ್ ಕೊಹ್ಲಿಯನ್ನ ತಬ್ಬಿಕೊಂಡು ಸಂತೈಸಿದ್ರು.

ಈ ಪೋಟೋ ಎಲ್ಲೆಡೆ ವೈರಲ್​ ಆಗಿತ್ತು. ಇದೀಗ ಪಂದ್ಯ ಮುಗಿದ ಒಂದು ವಾರದ ಬಳಿಕ, ಕೊಹ್ಲಿಯನ್ನ ತಬ್ಬಿಕೊಂಡಿದ್ದಕ್ಕೆ ಕಾರಣ ಏನು ಅನ್ನೋದನ್ನ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೇನ್, ವಿರಾಟ್ ಜೊತೆಗಿನ ಸ್ನೇಹ ಇತ್ತೀಚಿನದಲ್ಲ, ಅದು ತುಂಬಾ ಹಳೆಯದು. 19 ವರ್ಷದೊಳಗಿನವರ ವಿಶ್ವಕಪ್‌ನಿಂದ ನಾವು ಪರಸ್ಪರರ ವಿರುದ್ಧ ಆಡುತ್ತಿರುವುದರಿಂದ ಅರಿತಿದ್ದೇವೆ. ಮೈದಾನದಲ್ಲಿ ನಮಗೆ ಕ್ರಿಕೆಟ್ ಪಂದ್ಯಕ್ಕಿಂತ ಸ್ನೇಹ ದೊಡ್ಡದು ಎಂದು ಹೇಳಿಕೆ ನೀಡಿದ್ದಾರೆ.

The post ನನ್ನ & ಕೊಹ್ಲಿ ಸ್ನೇಹ ಕ್ರಿಕೆಟ್​​ಗಿಂತ ದೊಡ್ಡದು- ಕೇನ್ ವಿಲಿಯಮ್ಸನ್ appeared first on News First Kannada.

Source: newsfirstlive.com

Source link