ಬಿಸಿಸಿಐ ಮನವಿಗೆ ಸ್ಪಂದಿಸಿದ ECB- ಕೊಹ್ಲಿ ಪಡೆಗೆ 2 ಪ್ರಾಕ್ಟೀಸ್ ಮ್ಯಾಚ್ ಫಿಕ್ಸ್..!

ಬಿಸಿಸಿಐ ಮನವಿಗೆ ಸ್ಪಂದಿಸಿದ ECB- ಕೊಹ್ಲಿ ಪಡೆಗೆ 2 ಪ್ರಾಕ್ಟೀಸ್ ಮ್ಯಾಚ್ ಫಿಕ್ಸ್..!

ಇಂಗ್ಲೆಂಡ್‌ ವಿರುದ್ಧ ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ, ಟೀಂ ಇಂಡಿಯಾ ಡುರಮ್‌ನಲ್ಲಿ 2 ಅಭ್ಯಾಸ ಪಂದ್ಯಗಳನ್ನ ಆಡಲಿದೆ. ಅಭ್ಯಾಸ ಪಂದ್ಯಕ್ಕೆ ಸ್ಥಳೀಯ ತಂಡ ಒದಗಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ, ಈಗ ಗ್ರಿನ್​ ಸಿಗ್ನಲ್ ನೀಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೋಲಿನ ಬಳಿಕ ಭಾರತೀಯ ಕ್ರಿಕೆಟ್​ ಮಂಡಳಿ, ಅಭ್ಯಾಸ ಪಂದ್ಯಗಳನ್ನ ಆಯೋಜಿಸಲು ಇಂಗ್ಲೆಂಡ್ ಬೋರ್ಡ್​ಗೆ ಮನವಿ ಮಾಡಿತ್ತು. ಆದ್ರೆ ಇದಕ್ಕೆ ನಿರಾಕಸಿದ್ದ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್​, ಇಂಟ್ರಾ ಸ್ಕ್ವಾಡ್​ ಮ್ಯಾಚ್ ಆಡುವಂತೆ ಸೂಚಿಸಿತ್ತು. ಆದ್ರೆ ಸದ್ಯದ ಮಾಹಿತಿ ಪ್ರಕಾರ, ಡುರಮ್‌ನಲ್ಲಿ ಜುಲೈ 15ರಿಂದ ಟೀಮ್ ಇಂಡಿಯಾ, ನಾಲ್ಕು ದಿನಗಳ ಅಭ್ಯಾಸ ಪಂದ್ಯಗಳನ್ನಾಡಲಿದೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಕೌಂಟಿ ತಂಡದ ಎದುರು ಆಡಲಿದ್ದು, 2ನೇ ಅಭ್ಯಾಸ ಪಂದ್ಯವನ್ನ ಮೂರು ದಿನಗಳ ಕಾಲ ಕೌಂಟಿ ಇಲೆವೆನ್ ಎದುರು ಆಡಲಿದೆ. ಸದ್ಯ 2 ವಾರಗಳ ರಜೆಯಲ್ಲಿರುವ ಟೀಮ್ ಇಂಡಿಯಾ ಆಟಗಾರರು, ರಜೆ ಮುಕ್ತಾಯದ ಬೆನ್ನಲ್ಲೇ ಬಯೋಬಬಲ್ ಸೇರಲಿದೆ.

The post ಬಿಸಿಸಿಐ ಮನವಿಗೆ ಸ್ಪಂದಿಸಿದ ECB- ಕೊಹ್ಲಿ ಪಡೆಗೆ 2 ಪ್ರಾಕ್ಟೀಸ್ ಮ್ಯಾಚ್ ಫಿಕ್ಸ್..! appeared first on News First Kannada.

Source: newsfirstlive.com

Source link