ಆಕ್ಸಿನ್​ ದುರಂತ ನಡೆದು 2 ತಿಂಗಳಾದ್ರು ತಪ್ಪಿತಸ್ಥರ ಮೇಲೆ ಕೈಗೊಂಡಿಲ್ಲ ಏಕೆ? -ಕಾಂಗ್ರೆಸ್

ಆಕ್ಸಿನ್​ ದುರಂತ ನಡೆದು 2 ತಿಂಗಳಾದ್ರು ತಪ್ಪಿತಸ್ಥರ ಮೇಲೆ ಕೈಗೊಂಡಿಲ್ಲ ಏಕೆ? -ಕಾಂಗ್ರೆಸ್

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ನಡೆದು 36 ಮಂದಿ ಸಾವನ್ನಪ್ಪಿ ಎರಡು ತಿಂಗಳಾದರೂ ಇನ್ನು ತಪ್ಪಿತಸ್ಥರ ಮೇಲೆ ಕ್ರಮ ಇಲ್ಲ ಏಕೆ? ಈ ದುರ್ಘಟನೆಗೆ ಕಾರಣರಾದವರ ಮೇಲೆ ಇನ್ನಾದರು ಕ್ರಮ ಜರುಗಿಸಿ ಎಂದು ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.

ಇಂದು ಜಿಲ್ಲಾಸ್ಪತ್ರೆಯ ಎದುರು ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ದುರ್ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಸ್ಥರು, ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು. ಇನ್ನೊಂದೆಡೆ ಡಿಪಿಐ ಸಂಘಟನೆಯಿಂದಲೂ ಪ್ರತಿಭಟನೆಯ ಕಾವೂ ಜೋರಾಗಿಯೇ ಇತ್ತು.

blank

ಮೃತಪಟ್ಟ ಕುಟುಂಬಸ್ಥರಿಗೆ ತಲಾ 50 ಲಕ್ಷದಂತೆ ಪರಿಹಾರ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಲ್ಲಾಸ್ಪತ್ರೆ ಡೀನ್ ವಿರುದ್ದ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಕುಟುಂಬಸ್ಥರ ಸದಸ್ಯರಿಗೆ ಸಾಂತ್ವನವನ್ನೂ ಹೇಳದ ಸರ್ಕಾರದ ವಿರುದ್ಧ ಕೊಲೆಗಡುಕ ರಾಜ್ಯ ಸರ್ಕಾರ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

blank

The post ಆಕ್ಸಿನ್​ ದುರಂತ ನಡೆದು 2 ತಿಂಗಳಾದ್ರು ತಪ್ಪಿತಸ್ಥರ ಮೇಲೆ ಕೈಗೊಂಡಿಲ್ಲ ಏಕೆ? -ಕಾಂಗ್ರೆಸ್ appeared first on News First Kannada.

Source: newsfirstlive.com

Source link