ಮತ್ತೆ ಟಿಕ್​ಟಾಕ್ ಮೇಲೆ ನಿರ್ಬಂಧ ಹೇರಿದ ಪಾಕಿಸ್ತಾನ

ಮತ್ತೆ ಟಿಕ್​ಟಾಕ್ ಮೇಲೆ ನಿರ್ಬಂಧ ಹೇರಿದ ಪಾಕಿಸ್ತಾನ

ಚೀನಾವನ್ನು ತನ್ನ ಚಡ್ಡಿ ದೋಸ್ತ್ ಅಂತಾನೇ ಕರೆದುಕೊಳ್ಳುವ ಪಾಕಿಸ್ತಾನ ಮತ್ತೆ ಚೀನಾದ ಟಿಕ್​ಟಾಕ್ ಆ್ಯಪ್ ಬ್ಯಾನ್ ಮಾಡಿದೆ. ಟಿಕ್​ಟಾಕ್ ಮೇಲೆ ಎರಡನೇ ಬಾರಿ ನಿಷೇಧ ಹೇರಿ ಪಾಕಿಸ್ತಾನದ ಉನ್ನತ ನ್ಯಾಯಾಲಯ ಆದೇಶ ನೀಡಿದೆ.

ಟಿಕ್​ಟಾಕ್ ಆ್ಯಪ್ ದೇಶದಲ್ಲಿ ಅನೈತಿಕತೆ ಮತ್ತು ಅಶ್ಲೀಲತೆ ಹರಡುತ್ತಿದೆ ಎಂದು ನಾಗರೀಕರು ದೂರು ನೀಡಿದ್ರು. ಹೀಗಾಗಿ ಟಿಕ್​ಟಾಕ್ ಅನ್ನು ನಿಷೇಧಿಸಲಾಗಿದೆ. ಪುನಃ ಆ್ಯಪ್ ಸ್ಥಾಪಿಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಸಿಂಧ್ ಹೈ ಕೋರ್ಟ್ ವಿಚಾರಣೆ ಮುಗಿಯುವವರೆಗೂ ದೇಶದಲ್ಲಿ ಟಿಕ್​ಟಾಕ್ ನಿಷೇಧಿಸುವಂತೆ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್ ಅಥಾರಿಟಿಗೆ ತಿಳಿಸಿತ್ತು.

The post ಮತ್ತೆ ಟಿಕ್​ಟಾಕ್ ಮೇಲೆ ನಿರ್ಬಂಧ ಹೇರಿದ ಪಾಕಿಸ್ತಾನ appeared first on News First Kannada.

Source: newsfirstlive.com

Source link