ಚಿನ್ನಿಬಾಂಬ್ ನನ್ನ ಕಳಪೆಗೆ ಹಾಕಿದ್ರು: ಶುಭಾ ಪೂಂಜಾ

ಬಿಗ್‍ಬಾಸ್ ಮನೆಯಲ್ಲಿ ಸದಾ ಎಂಟರ್ಟೈನ್ ಮಾಡುತ್ತಾ ಮನೆ ಮಂದಿ ಹಾಗೂ ವೀಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಈ ವಾರ ಕಳಪೆ ಬೋರ್ಡ್ ಪಡೆದು ಜೈಲಿಗೆ ಹೋಗಿದ್ದಾರೆ.

ಈ ವಾರ ಬಿಗ್‍ಬಾಸ್ ನೀಡಿದ್ದ ಟಾಸ್ಕ್‍ಗಳಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ ಹಾಗೂ ಮನೆಯ ಕೆಲಸಗಳಲ್ಲಿ ಅಷ್ಟಾಗಿ ಪಾಲ್ಗೊಂಡಿಲ್ಲ ಎಂದು ದಿವ್ಯಾ ಸುರೇಶ್, ರಘು, ಪ್ರಶಾಂತ್, ವೈಷ್ಣವಿ, ಶಮಂತ್, ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ, ಶುಭಾ ಪೂಂಜಾರನ್ನು ಕಳಪೆಗೆ ಸೂಚಿಸಿದ್ದರು.

ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡ ಶುಭಾ ಪೂಂಜಾ, ಕಳಪೆ ಡ್ರೆಸ್ ಧರಿಸಿ ಖುಷಿಯಾಗಿ ಜೈಲಿಗೆ ಹೋಗುತ್ತಾರೆ. ಈ ವೇಳೆ ಶಮಂತ್ ಆದಷ್ಟು ಬೇಗ ಬೇಲ್ ತರಿಸಿ ಬಿಡಿಸಿಕೊಂಡು ಹೋಗುತ್ತೇನೆ, ಭಯ ಪಡಬೇಡ ಅಂದರೆ, ದಿವ್ಯಾ ಉರುಡುಗ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬೇಡ ಎನ್ನುತ್ತಾರೆ.

blank

ನಂತರ ಬೆಡ್ ಮೇಲೆ ಕುಳಿತುಕೊಳ್ಳಲು ಹೋಗುವ ಶುಭಾ ಬಿಗ್‍ಬಾಸ್ ಇಲ್ಲಿ ಹಾಸಿಗೆನೇ ಇಲ್ಲ ಎಂದು ಹೇಳುತ್ತಾ, ಕ್ಯಾಮೆರಾ ಮುಂದೆ ನಿಂತು ಚಿನ್ನಿ ಬಾಂಬ್ ನನ್ನ ಕಳಪೆಗೆ ಹಾಕಿದ್ರು ಎಂದು ಹಾಸ್ಯ ಮಾಡುತ್ತಾರೆ. ಅಲ್ಲದೇ ಮಧ್ಯ ರಾತ್ರಿ ಕುಳಿತುಕೊಂಡು ಚಂಪೂ ಎಂದು ಕೂಗುತ್ತಾ, ಬಿಗ್ ಬಾಸ್ ಮಂಜನನ್ನು ಕಳುಹಿಸಿ ನಾನು ಒಬ್ಬಳೇ ಮಲಗುವುದಿಲ್ಲ ಪ್ಲೀಸ್ ಎನ್ನುತ್ತಾರೆ. ಇದನ್ನು ಕೇಳಿಸಿಕೊಂಡ ದಿವ್ಯಾ ಉರುಡುಗ ಬೆಡ್‍ರೂಮ್‍ನಲ್ಲಿ ಮಲಗಿದ್ದ ಮಂಜುರಿಗೆ ಶುಭಾ ನಿನ್ನನ್ನು ಕರೆಳುತ್ತಿದ್ದಾಳೆ ನೋಡು ಎಂದು ಎಬ್ಬಿಸಿ ನಂತರ ಶುಭಾ ಬಳಿ ಕಳುಹಿಸಿಕೊಡುತ್ತಾರೆ.

The post ಚಿನ್ನಿಬಾಂಬ್ ನನ್ನ ಕಳಪೆಗೆ ಹಾಕಿದ್ರು: ಶುಭಾ ಪೂಂಜಾ appeared first on Public TV.

Source: publictv.in

Source link