ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು

ಚಿಕ್ಕಬಳ್ಳಾಪುರ: ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದೇ ತಡ ಚಿಕ್ಕಬಳ್ಳಾಪುರ ನಗರದಲ್ಲಿ ಪೆಟ್ರೋಲ್ ಕಳ್ಳತನ ಮಾಡುವ ಹೊಸದೊಂದು ಗ್ಯಾಂಗ್ ಹುಟ್ಟಿಕೊಂಡಿದೆ. ಪೆಟ್ರೋಲ್ ದರ ಲೀಟರ್ ಗೆ 100 ರೂಪಾಯಿ ದಾಟಿದ್ದು, ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಬಡಾವಣೆಯಲ್ಲಿ ಮೂವರು ಯುವಕರು ಪೆಟ್ರೋಲ್ ಕಳ್ಳತನ ಮಾಡಿದ್ದಾರೆ.

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಲ್ಸರ್ ಬೈಕ್ ನಲ್ಲಿ ಮಧ್ಯರಾತ್ರಿ ಮುನಿಸಿಪಾಲ್ ಬಡಾವಣೆಗೆ ಎಂಟ್ರಿ ಕೊಟ್ಟಿರೋ ಮೂವರು ಯುವಕರು, ಮನೆಗಳ ಮುಂದೆ ರಸ್ತೆ ಬದಿ ನಿಲ್ಲಿಸಿರೋ ಬೈಕ್ ಗಳಲ್ಲಿ 1-2 ಲೀಟರ್ ವಾಟರ್ ಬಾಟಲಿಗೆ ತುಂಬಿಸಿಕೊಂಡಿದ್ದಾರೆ. ತದನಂತರ 20 ಲೀಟರ್ ಕ್ಯಾನ್ ಗೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಒಂದಲ್ಲ ಎರಡಲ್ಲ ಹತ್ತಾರು ಬೈಕ್ ಗಳಲ್ಲಿ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಹೊಸ ದುಬಾರಿ ಜೀವನ – ಎಲ್‍ಪಿಜಿ ಸಿಲಿಂಡರ್, ಹಾಲು, ಬ್ಯಾಂಕಿಂಗ್ ಚಾರ್ಜ್ ಹೆಚ್ಚಳ

ಯಾದಗಿರಿಯಲ್ಲೂ ಪೆಟ್ರೋಲ್ ಕಳ್ಳತನ:
ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಕಳ್ಳತನ ಮಾಡುವ ಗ್ಯಾಂಗ್ ನಗರದಲ್ಲಿ ಫುಲ್ ಆಕ್ಟಿವ್ ಆಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಂಕ್ ನಲ್ಲಿನ ಬರೊಬ್ಬರಿ 5 ಸಾವಿರ ಲೀಟರ್ ಡೀಸೆಲ್ ಗೆ ಕನ್ನ ಹಾಕಿದೆ.  ಇದನ್ನೂ ಓದಿ: ಪುಲ್ವಾಮಾದಲ್ಲಿ ವಿಜಯಪುರದ ಯೋಧ ಹುತಾತ್ಮ

blank

ಒಂದೇ ರಾತ್ರಿಯಲ್ಲಿ ಎರಡು ಬಂಕ್ ನಲ್ಲಿನ ಬರೊಬ್ಬರಿ 5 ಸಾವಿರ ಲೀಟರ್ ಡೀಸೆಲ್ ಗೆ ಕನ್ನ ಹಾಕಿದ್ದು, 5 ಲಕ್ಷ ರೂ.ಗೂ ಅಧಿಕ ಮೌಲ್ಯದ ಡಿಸೇಲ್ ಕದ್ದಿದ್ದಾರೆ. ರಾತ್ರಿ ಹೊತ್ತು ಫುಲ್ ಆಕ್ಟಿವ್ ಆಗುವ ಈ ಗ್ಯಾಂಗ್ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಎಸ್ಸಾರ್ ಮತ್ತು ಗುರು ಪೆಟ್ರೋಲ್ ಬಂಕ್ ಗಳಲ್ಲಿ, ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ಈ ಕಳ್ಳತನ ಮಾಡಿದೆ. ಅಂಡರ್ ಗ್ರೌಂಡ್ ನಲ್ಲಿರುವ ಡೀಸೆಲ್ ಟ್ಯಾಂಕ್ ಕವರ್ ಓಪನ್ ಮಾಡಿ, ಅದಕ್ಕೆ ಪೈಪ್ ಹಾಕಿ, ಬಳಿಕ ಸುಮಾರು 30 ಮೀಟರ್ ದೂರದಲ್ಲಿ ಮೋಟರ್ ಹಚ್ಚಿ ಡೀಸೆಲ್ ಕಳ್ಳತನ ಮಾಡಿದೆ. ಇದನ್ನೂ ಓದಿ: ಅನ್‍ಲಾಕ್ ಸ್ಟೇಜ್ -3ಕ್ಕೆ ಕ್ಷಣಗಣನೆ – ಇಂದು ಸಂಜೆ ಸಿಎಂ ಬಿಎಸ್‍ವೈ ಮಹತ್ವದ ಸಭೆ

The post ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು appeared first on Public TV.

Source: publictv.in

Source link