‘ಐ ಲವ್ ಯೂ.. ಯೂ ಮಸ್ಟ್​ ಲವ್ ಮೀ..’ -ಓಂ ಸಿನಿಮಾ ರೀತಿ ಯುವತಿಗೆ ಟಾರ್ಚರ್, ಪಾಗಲ್ ಪ್ರೇಮಿ ಅರೆಸ್ಟ್​

‘ಐ ಲವ್ ಯೂ.. ಯೂ ಮಸ್ಟ್​ ಲವ್ ಮೀ..’ -ಓಂ ಸಿನಿಮಾ ರೀತಿ ಯುವತಿಗೆ ಟಾರ್ಚರ್, ಪಾಗಲ್ ಪ್ರೇಮಿ ಅರೆಸ್ಟ್​

ಬೆಂಗಳೂರು : ಪಾಗಲ್​ ಪ್ರೇಮಿಯೊಬ್ಬ ಓಂ ಸಿನಿಮಾ ಸ್ಟೈಲ್​ನಲ್ಲಿ ತನ್ನನ್ನು ಲವ್​ ಮಾಡುವಂತೆ ಯವತಿಗೆ ಟಾರ್ಚರ್​ ನೀಡಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ನಾಗರಬಾವಿ ನಿವಾಸಿಯಾಗಿರೋ 22 ವರ್ಷದ ಯುವತಿಯನ್ನ ರಾಜೇಶ್ ಎಂಬಾತ ಪ್ರತಿನಿತ್ಯ ಫಾಲೋ ಮಾಡ್ತಿದ್ದ. ನನ್ನನ್ನು ಲವ್​ ಮಾಡು ಅಂತ ಪೀಡಿಸ್ತಾ ಇದ್ದ ಎನ್ನಲಾಗಿದೆ.  ಜೊತೆಗೆ  ಅವಳು ನನ್ ಹುಡ್ಗೀ.. ಮಾತಾಡಿಸಿದ್ರೆ ಅಷ್ಟೇ ಅಂತ ಆಕೆಯ ಸ್ನೇಹಿತರಿಗೆ ಹಾಗೂ ಕ್ಲಾಸ್​ಮೇಟ್ಸ್​ಗೆ ವಾರ್ನ್ ಕೂಡ ಮಾಡಿದ್ನಂತೆ. ಯುವತಿಯ ಪೋಷಕರಿಗೂ ಕರೆ ಮಾಡಿ ನಿಮ್ ಮಗಳನ್ನ ಲವ್ ಮಾಡ್ತಿದ್ದೀನಿ ಒಪ್ಪದಿದ್ರೆ ಕುತ್ತಿಗೆ ಕುಯ್ದುಕೊಳ್ತಿನಿ ಎಂದು ಅವಾಜ್​ ಹಾಕಿದ್ದಾನೆ ಎನ್ನಲಾಗಿದೆ.

ನಾನು ಸಾಯುವಾಗ ನಿಮ್ಮಪ್ಪ-ಅಮ್ಮನ ಹೆಸರನ್ನ ಬರೆದಿಡ್ತೀನಿ, ಅವರು ಜೈಲಿಗೆ ಹೋಗ್ತಾರೆ.
ಒಂದು ದಿನದ ಒಳಗಾಗಿ ಲವ್ ಪ್ರಪೊಸಲ್ ಒಪ್ಪಿಕೊಳ್ಳಬೇಕು ಎಂದು ಯುವತಿಗೆ ಡೆಡ್ಲೈನ್ ಕೊಟ್ಟಿದ್ದನಂತೆ. ಇದರಿಂದ ಆತಂಕಗೊಂಡ ಯುವತಿ ಮತ್ತು ಪೋಷಕರು ಚಂದ್ರಾಲೇಔಟ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ರಾಜೇಶ್​​ನನ್ನು ಪೊಲೀಸರು ಬಂಧಿಸಿದ್ದಾರೆ.

The post ‘ಐ ಲವ್ ಯೂ.. ಯೂ ಮಸ್ಟ್​ ಲವ್ ಮೀ..’ -ಓಂ ಸಿನಿಮಾ ರೀತಿ ಯುವತಿಗೆ ಟಾರ್ಚರ್, ಪಾಗಲ್ ಪ್ರೇಮಿ ಅರೆಸ್ಟ್​ appeared first on News First Kannada.

Source: newsfirstlive.com

Source link