ನಟ ನಿರ್ದೇಶಕ ಸೂರ್ಯೋದಯ ಪುತ್ರ ಬೈಕ್ ಆಕ್ಸಿಡೆಂಟ್​​ನಲ್ಲಿ ದುರ್ಮರಣ

ನಟ ನಿರ್ದೇಶಕ ಸೂರ್ಯೋದಯ ಪುತ್ರ ಬೈಕ್ ಆಕ್ಸಿಡೆಂಟ್​​ನಲ್ಲಿ ದುರ್ಮರಣ

ಬೆಂಗಳೂರು: ನಟ-ನಿರ್ದೇಶಕ ಸೂರ್ಯೋದಯ ಅವರ ಮಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಸೂರ್ಯೋದಯ ಪುತ್ರ ಮಯೂರ್ (20) ಮೃತ ಯುವಕ.

blank
ಮಯೂರ್

ಕಳೆದ ರಾತ್ರಿ ಮಯೂರ್ ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದಾಗ, ಟ್ಯಾಂಕರ್ ಗಾಡಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

blank
ಸೂರ್ಯೋದಯ

ಸೂರ್ಯೋದಯ ಪೆರಂಪಲ್ಲಿ, ಸಾಲ್ಟ್ ಎಂಬ ಕನ್ನಡ ಚಿತ್ರ ಹಾಗೂ ದೇಯಿ ಬೈದೆತಿ ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ.

blank

The post ನಟ ನಿರ್ದೇಶಕ ಸೂರ್ಯೋದಯ ಪುತ್ರ ಬೈಕ್ ಆಕ್ಸಿಡೆಂಟ್​​ನಲ್ಲಿ ದುರ್ಮರಣ appeared first on News First Kannada.

Source: newsfirstlive.com

Source link